ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾರೆಗಳು

Last Updated 3 ನವೆಂಬರ್ 2012, 19:30 IST
ಅಕ್ಷರ ಗಾತ್ರ

ದಿನವೂ ತಪ್ಪದೆ ಆಗಸದೊಳಗೆ
ಮಿನುಗುತಲಿರುವವು ತಾರೆಗಳು
ಇರುಳಿನ ಕತ್ತಲಿಗೆಂದೇ ಕಟ್ಟಿದ
ಬೆಳ್ಳಿಯ ಬೆಳಕಿನ ಮಾಲೆಗಳು!

ಭೂಮಿಯ ನೋಡುವ ಬಾನಿನ ಮುಖದಲಿ
ಹೊಳೆಯುವ ವಿಧ ವಿಧ ಕಣ್ಣುಗಳು
ಎಂದಿಗೂ ಆರದೆ ಉರಿಯುತಲಿರುವ
ದೂರದ ಹಣತೆಯ ಸಾಲುಗಳು!

ಒಂದರ ಜತೆಗೆ ಇನ್ನೊಂದಿದ್ದರೂ
ಅಂತರ ಇರುವುದು ಬಲು ದೂರ
ದೂರದಲಿದ್ದರೂ ಬೆಳಕನು ಚೆಲ್ಲುವ
ನಡೆವುದು ಕತ್ತಲ ಸಂಹಾರ!

ಹಗಲಲಿ ಉರಿಯುವ ಸೂರ್ಯನು ಕೂಡಾ
ಚುಕ್ಕಿ - ತಾರೆಗಳ ಪರಿವಾರ
ಸೂರ್ಯನ ಬೆಳಕಲೇ ನಿಂತು ಬೆಳಗುವ
ಚಂದಿರ ಮಾತ್ರ ಬಲು ಚೋರ!

ತನ್ನೊಳು ತಾನು ಉರಿಯುತ ನೀಡಿವೆ
ಜಗಕೆಲ್ಲ ಬೆಳಕು
ತಾರೆಗಳಿಲ್ಲದ ಜಗವೇ ಇಲ್ಲ
ಎಲ್ಲಾದರೂ ಹುಡುಕು !
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT