ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಆರ್‌ಎಸ್‌ ಹಿನ್ನೀರಿನಲ್ಲಿ ಪ್ಯಾರಾ ಸೇಲಿಂಗ್‌ ಇಂದಿನಿಂದ

Published 15 ಮೇ 2024, 18:56 IST
Last Updated 15 ಮೇ 2024, 18:56 IST
ಅಕ್ಷರ ಗಾತ್ರ

ಮಂಡ್ಯ: ರಾಯಲ್‌ ಮೈಸೂರು ಸೈಲಿಂಗ್‌ ಕ್ಲಬ್‌ (ಆರ್‌ಎಂಎಸ್‌ಸಿ) ಕರ್ನಾಟಕ ರಾಜ್ಯ ಅಂಗವಿಕಲರ ಕ್ರೀಡಾ ಸಂಸ್ಥೆ ಸಹಯೋಗದಲ್ಲಿ ಕೆಆರ್‌ಎಸ್‌ ಜಲಾಶಯದ ಹಿನ್ನೀರಿನಲ್ಲಿ ಇದೇ 16ರಿಂದ ಮೂರು ದಿನಗಳ ಕಾಲ ಪ್ಯಾರಾ ಸೇಲಿಂಗ್ ತರಬೇತಿ ನಡೆಯಲಿದೆ.

ಪಾಂಡವಪುರ ತಾಲ್ಲೂಕು ಗಿರಿಯಾರಹಳ್ಳಿ ಹಿನ್ನೀರು ಪ್ರದೇಶದಲ್ಲಿ ತರಬೇತಿ ನಡೆಯಲಿದ್ದು ರಾಜ್ಯದ ವಿವಿಧೆಡೆಯಿಂದ ತಲಾ 12 ಪುರುಷ ಮತ್ತು ಮಹಿಳಾ ಪ್ಯಾರಾ ಅಥ್ಲೀಟ್‌ಗಳು ಪಾಲ್ಗೊಳ್ಳಲಿದ್ದಾರೆ. ತರಬೇತಿಯಲ್ಲಿ ಉತ್ತಮ ಪ್ರದರ್ಶನ ನೀಡಿದವರಿಗೆ ಆ.5ರಿಂದ 5 ದಿನ ನಡೆಯಲಿರುವ ರಾಷ್ಟ್ರೀಯ ಪ್ಯಾರಾ ಸೇಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.

3 ದಿನಗಳ ತರಬೇತಿಯಲ್ಲಿ ಮೊದಲ ದಿನ ಸೇಲಿಂಗ್‌ ಕುರಿತ ಪ್ರಾಥಮಿಕ ಮಾಹಿತಿ ನೀಡಲಾಗುತ್ತದೆ. ನಂತರ ತರಬೇತಿಯೊಂದಿಗೆ ಮೇ 18ರಂದು ತರಬೇತಿಯಲ್ಲಿ ಭಾಗವಹಿಸಿದವರಿಗೆ ಪ್ರಮಾಣಪತ್ರ ನೀಡಲಾಗುತ್ತದೆ.

‘ದೇಶದಲ್ಲೇ ಮೊದಲ ಬಾರಿಗೆ ಪ್ಯಾರಾ ಅಥ್ಲೀಟ್‌ಗಳಿಗೆ ಸೇಲಿಂಗ್ ತರಬೇತಿ ನೀಡಲಾಗುತ್ತಿದೆ. ನಾಲ್ಕು ಹಂತದ ತರಬೇತಿ ನಡೆಯಲಿದ್ದು ಕಡೆಯ ಹಂತದ ವೇಳೆಗೆ ಅಥ್ಲೀಟ್‌ಗಳು ಯಾರ ಸಹಾಯವೂ ಇಲ್ಲದೇ ರೇಸಿಂಗ್‌ ನಡೆಸುವ ಸಾಮರ್ಥ್ಯ ಪಡೆಯಲಿದ್ದಾರೆ’ ಎಂದು ಆರ್‌ಎಂಎಸ್‌ಸಿ ಸ್ಥಾಪಕ ಅರವಿಂದ್‌ ಶರ್ಮಾ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT