ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಕನ್ಯೆ ಬಗ್ಗೆ ಕೂಲಂಕಷವಾಗಿ ಯೋಚಿಸದೆ ಮದುವೆ ಮಾತುಕತೆ ಮಾಡದಿರಿ
Published 14 ಮೇ 2024, 23:36 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಶೈಕ್ಷಣಿಕ ಹಾಗೂ ಸಾಂಸಾರಿಕ ಪರೀಕ್ಷೆಗಳೆರಡರಲ್ಲೂ ಉತ್ತಮ ಫಲಿತಾಂಶ ಪಡೆಯಲು ಪ್ರಯತ್ನ ಈಗಿನದ್ದಕ್ಕಿಂತ ಹೆಚ್ಚು ಅಗತ್ಯವಿದೆ. ಗುರುಗಳ ಮಾತನ್ನು ಮೀರುವುದರಲ್ಲಿ ಶ್ರೇಯಸ್ಸು ಇರುವುದಿಲ್ಲ.
ವೃಷಭ
ವಯಸ್ಸು ಹಾಗೂ ಉತ್ಸಾಹ ಇರುವಾಗ ಮಾತ್ರ ಸಮಾಜ ಸೇವೆ ಮಾಡಬಹುದೆನ್ನುವುದನ್ನು ಗಮನದಲ್ಲಿಟ್ಟು ಸೇವೆ ಸಲ್ಲಿಸಿ. ತಂದೆ ತಾಯಿ ಸಂತೋಷವು ನಿಮ್ಮ ಸಂತಸಕ್ಕೆ ಕಾರಣವಾಗಲಿದೆ.
ಮಿಥುನ
ಯಾರಿಂದಲೋ ಕೇಳಿಸಿಕೊಂಡ ವಾರ್ತೆಗಳನ್ನು ಹಬ್ಬಿಸುವ ಮೊದಲು ಆ ಸುದ್ದಿಯು ಸತ್ಯವೋ ಅಲ್ಲವೋ ಎಂಬುದನ್ನು ತಿಳಿದುಕೊಳ್ಳಿರಿ. ವಾಹನದ ರಿಪೇರಿ ವಿಚಾರದಲ್ಲಿ ಅಧಿಕವಾದ ಖರ್ಚು ಸಂಭವಿಸಲಿದೆ.
ಕರ್ಕಾಟಕ
ಧಾರ್ಮಿಕ ಕಾರ್ಯಕ್ರಮಗಳ ನಿರ್ವಹಣೆಯಲ್ಲಿ ಲೋಪ ದೋಷವನ್ನು ಮಾಡದೆ ಎಚ್ಚರಿಕೆ ವಹಿಸಿ. ವಿದ್ಯಾರ್ಥಿಗಳು ಉದಾಸೀನ ಮಾಡದೆ ಶಾಲಾ ಕಾರ್ಯಕ್ರಮದಲ್ಲಿ ಭಾಗವಹಿಸಿ. ಒಳ್ಳೆಯದಾಗುವುದು.
ಸಿಂಹ
ನಿವೃತ್ತಿ ಜೀವನವನ್ನು ಸುಖಕರವಾಗಿ ಕಳೆಯುವಲ್ಲಿ ಹೆಚ್ಚು ಶ್ರಮವಹಿಸಿ ಕೆಲಸ ಮಾಡುವ ಯೋಜನೆಯನ್ನು ಮಾಡುವಿರಿ. ಮನೆಯ ಜನರೊಂದಿಗೆ ಕಳೆದ ಸಮಯ ಅವಿಸ್ಮರಣೀಯ.
ಕನ್ಯಾ
ಸಣ್ಣ ಸಣ್ಣ ಸಮಸ್ಯೆಗಳನ್ನು ದೊಡ್ಡ ಸಮಸ್ಯೆಯನ್ನಾಗಿ ಮಾಡಿಕೊಂಡು ಪರಿಹಾರವನ್ನು ಕ್ಲಿಷ್ಟಕರವನ್ನಾಗಿ ಮಾಡಿಕೊಳ್ಳದಿರಿ. ಉದ್ಯೋಗದ ವಿಷಯದಲ್ಲಿ ಉತ್ತಮ ಅವಕಾಶಗಳು ಕೈತಪ್ಪುವ ಸಂದರ್ಭಗಳು ಎದುರಾಗಬಹುದು.
ತುಲಾ
ಹೊಸ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಹೆಚ್ಚಿನ ಪ್ರಯತ್ನದ ಅವಶ್ಯಕತೆಯ ಮನವರಿಕೆ ಆಗುತ್ತದೆ. ಸಿದ್ಧಿಸಿದ ಕಲೆಯನ್ನು ಹಣದ ಮುಖ ನೋಡಿ ಅನರ್ಥಕಾರಿಯನ್ನಾಗಿ ಮಾಡಿಕೊಳ್ಳಬೇಡಿ.
ವೃಶ್ಚಿಕ
ಕುಟುಂಬದವರ ಜತೆ ಕಳೆಯುವ ಪ್ರತಿ ಕ್ಷಣವೂ ನೆನಪಿಟ್ಟುಕೊಳ್ಳಬೇಕಾದಂತಹ ಸನ್ನಿವೇಶಗಳಾಗಿರುತ್ತದೆ. ಗೆಲುವು ಅತ್ಯಂತ ಸಮೀಪ ಇರುವುದು ಬಹಳ ದೂರ ಇದ್ದಂತೆ ಭಾಸವಾಗಿ ಬೇಸೆತ್ತು ಕೈಬಿಡದಿರಿ.
ಧನು
ವೃತ್ತಿಯಲ್ಲಿ ರಾತ್ರಿ ಪಾಳಿ ತಪ್ಪುವಂಥ ಘಟನೆ ನಡೆದ ಕಾರಣದಿಂದಾಗಿ ಮನಸ್ಸಿಗೆ ಸಮಾಧಾನವಾಗುವುದು. ಅಧಿಕಾರಿ ವರ್ಗದವರಿಗೆ ಮುಂಬಡ್ತಿಯಂಥ ಕನಸುಗಳು ನೆರವೇರುವುದು. ಅತಿ ನಿದ್ರೆ ಒಳ್ಳೆಯದಲ್ಲ.
ಮಕರ
ಬದ್ಧವೈರಿಗಳ ಮನೆಯ ಕಷ್ಟವನ್ನು ನೋಡಿ ಮನಸ್ಸು ಕರಗಿ ಸಹಾಯ ಮಾಡುವ ಸಾಧ್ಯತೆಗಳಿವೆ. ಮನೆಯ ದುರಸ್ತಿ ಕಾರ್ಯಗಳು ಅಥವಾ ನೂತನ ಮನೆಯ ನಿರ್ಮಾಣವನ್ನು ಬೇಗ ಮುಗಿಸುವುದು ಸೂಕ್ತ.
ಕುಂಭ
ತಾಯಿಯ ಬ್ಯಾಂಕ್ ಹಾಗೂ ಕಚೇರಿ ಕೆಲಸಗಳು ನಿಮ್ಮ ಜವಾಬ್ದಾರಿಗೆ ಬರುವುದರಿಂದ ತಿರುಗಾಟ ಮಾಡಬೇಕಾಗುವುದು. ಮನಸ್ಸಿನಲ್ಲಿ ಏಕಾಗ್ರತೆಯಿಂದ ಶಿವನ ನಾಮ ಸ್ಮರಣೆ ಅಥವಾ ಧ್ಯಾನ ಮಾಡಿ.
ಮೀನ
ವರಾನ್ವೇಷಣೆಯ ಹಂತದಲ್ಲಿರುವ ಕನ್ಯೆಗೆ ಬಂದ ಸಂಬಂಧದ ಬಗ್ಗೆ ಕೂಲಂಕಷವಾಗಿ ಯೋಚಿಸದೆ ಮದುವೆ ಮಾತುಕತೆಯನ್ನು ಮಾಡದಿರಿ. ದುರ್ಲಭವಾದಂತಹ ವಸ್ತುಗಳ ಸಂಪಾದನೆಯಲ್ಲಿ ಹೆಚ್ಚು ಸಮಯ ಸವೆಸದಿರಿ.