ಬರ್ಲಿನ್ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶಿತವಾದ ಆ ಚಿತ್ರಕ್ಕೆ ಪ್ರಶಸ್ತಿಗಳೂ ಸಂದವು. ‘ಕಹಾನಿ’, ‘ಗ್ಯಾಂಗ್ಸ್ ಆಫ್ ವಸೇಪುರ್’, ‘ಗ್ಯಾಂಗ್ಸ್ ಆಫ್ ವಸೇಪುರ್ ಭಾಗ 2’, ‘ತಲಾಶ್’– ಅವರ ಅಭಿನಯದ ಹಿಟ್ ಚಿತ್ರಗಳು. ‘ದಿ ಲಂಚ್ಬಾಕ್ಸ್’ ಚಿತ್ರದ ಅಭಿನಯಕ್ಕಾಗಿ ಶ್ರೇಷ್ಠ ಪೋಷಕ ನಟ ಫಿಲ್ಮ್ಫೇರ್ ಪ್ರಶಸ್ತಿಗೆ ಅವರು ಭಾಜನರಾದರು. ಕಲಾತ್ಮಕ ಚಿತ್ರಗಳ ನಟ ಎಂದು ಹೆಸರುವಾಸಿಯಾದರೂ, ಅವರು ಕಮರ್ಷಿಯಲ್ ಚಿತ್ರಗಳಲ್ಲಿ ನಟಿಸಲೂ ಒಪ್ಪಿಕೊಂಡರು. ‘ಕಿಕ್’, ‘ಮಾಮ್’, ‘ಬಜರಂಗಿ ಭಾಯಿಜಾನ್’, ‘ರಯೀಸ್’ ಅದಕ್ಕೆ ಕೆಲವು ಉದಾಹರಣೆಗಳು.