ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಿನ ಜಾವ

ಅಕ್ಷರ ಗಾತ್ರ

ಕೂಗುತ್ತಿತ್ತಂತೆ

ಕೋಳಿಯು ಆಗ

ಅಲಾರಾಮ ಗಂಟೆ

ಕೇಳುತ್ತಿದೆ ಈಗ!

ಹಕ್ಕಿಯ ಚಿಲಿಪಿಲಿ

ಕಲರವ ಆಗ

ಮರಗಳೇ ಇಲ್ಲದ

ಬಯಲು ಈಗ!

ಚುಕ್ಕಿಯ ರಂಗೋಲಿ

ಅಂಗಳದಿ ಆಗ

ಅಚ್ಚಿನ ಚಿತ್ರ

ಮೂಡುತ್ತಿದೆ ಈಗ!

ಎತ್ತಿನ ಕೊರಳಿನ

ಗಂಟೆಯು ಆಗ

ಟ್ರ್ಯಾಕ್ಟರ್ ಸೌಂಡು

ಹೊಲದಲಿ ಈಗ!

ಈಜುತ್ತ ಆಗುತ್ತಿತ್ತು

ಸ್ನಾನವು ಆಗ

ಹೊಳೆಯಲಿ ನೀರೇ

ಇಲ್ಲವೋ ಈಗ!

ಬದಲಾಗಿದೆ ಈಗ

ಬೆಳಗಿನ ಜಾವ

ಬದಲಾದಂತೆ

ಮನುಜನ ಭಾವ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT