ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು: ಜಯಪ್ರಕಾಶ್ ಪುತ್ತೂರು ಅವರ ಬದುಕಲು ಬಿಡಿ ಪ್ಲೀಸ್ ಪುಸ್ತಕ

Last Updated 12 ಮಾರ್ಚ್ 2023, 0:15 IST
ಅಕ್ಷರ ಗಾತ್ರ

ಜೀವನ ನಾಟಕ ರಂಗದಲ್ಲಿ ನಾವು ಅಭಿನಯಿಸುವ ಪಾತ್ರ ಅರ್ಥಬದ್ಧ, ಶಿಸ್ತುಬದ್ಧವಾಗಿರಲಿ ಎಂಬ ಆಶಯದಿಂದ ಜಯಪ್ರಕಾಶ ಪುತ್ತೂರು ಈ ಕೃತಿಯಲ್ಲಿ ಕೆಲವು ಟಿಪ್ಸ್‌ ಕೊಟ್ಟಿದ್ದಾರೆ. ವೃತ್ತಿ ಬದುಕು, ಅಧಿಕಾರದ ಜಾಗದಲ್ಲಿದ್ದಾಗ ನಮ್ಮ ನಡವಳಿಕೆ, ಸೌಹಾರ್ದದ ಬಗ್ಗೆ ನೈಜ ಉದಾಹರಣೆಗಳ ಸಹಿತ ಅವರು ಮಾತನಾಡಿದ್ದಾರೆ. ಲೇಖಕರ ವೃತ್ತಿ ಜೀವನದ ದೀರ್ಘ ಅನುಭವದ ಘಟನಾವಳಿಗಳೂ ಅಲ್ಲಲ್ಲಿ ಪರೋಕ್ಷವಾಗಿ ಉದಾಹರಿಸಲ್ಪಟ್ಟಿವೆ (ಲೇಖನ: ಈಸ್‌ ಬಾಸ್‌ ಆಲ್ವೇಸ್‌ ರೈಟ್‌?).

ನಾವೂ ಬದುಕಿ ಇತರರನ್ನು ಬದುಕಲು ಬಿಡಬೇಕು ಎನ್ನುವ ಚಿಂತನೆಯನ್ನು ಅಲ್ಲಲ್ಲಿ ಬಸವಣ್ಣನವರ ವಚನ ಹಾಗೂ ಡಿ.ವಿ. ಗುಂಡಪ್ಪ ಅವರ ಕಗ್ಗಗಳ ಸಹಿತ ಉಲ್ಲೇಖದೊಂದಿಗೆ ಹೇಳಿದ್ದಾರೆ. ಕ್ಷಮೆ, ತಾಳ್ಮೆ, ನಗುವಿನ ಮಹತ್ವ, ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಅದರ ಬಳಕೆಯಲ್ಲಿರಬೇಕಾದ ಎಚ್ಚರಿಕೆ, ಕೆಲಸದಲ್ಲಿನ ಶ್ರದ್ಧೆ ಮತ್ತು ರಾಷ್ಟ್ರಪ್ರೇಮ ಇತ್ಯಾದಿ ವಿಷಯಗಳು ಚರ್ಚೆಯಾಗಿರುವ ಕಾರಣ ಈ ಕೃತಿ ವರ್ತಮಾನದ ಬದುಕಿನ ನಡವಳಿಕೆಗಳಿಗೊಂದು ಕೈಪಿಡಿಯ ಹಾಗೆ ಗೋಚರಿಸುತ್ತದೆ. ವಿದ್ವಾಂಸ
ಜಿ.ಎಸ್‌.ಭಟ್‌ ಅವರ ಮುನ್ನುಡಿಯಿದೆ.

ವ್ಯಕ್ತಿತ್ವ ವಿಕಸನದ ನೆಲೆಯಲ್ಲಿ ಅನುಕೂಲವಾಗಬಲ್ಲ ಕೃತಿ.

ಕೃತಿ: ಬದುಕಲು ಬಿಡಿ ಪ್ಲೀಸ್‌

ಲೇ: ಜಯಪ್ರಕಾಶ ಪುತ್ತೂರು

ಪ್ರ: ಸಪ್ನ ಬುಕ್‌ ಹೌಸ್‌, ಬೆಂಗಳೂರು

ಸಂ: 080 40114455

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT