ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು: ಲೇಖಕ ಸರ್ಫ್ರಾಜ್‌ ಚಂದ್ರಗುತ್ತಿ ಅವರ ಭಾರತೀಯ ಧರ್ಮ ಪುಸ್ತಕ

Last Updated 19 ಮಾರ್ಚ್ 2022, 19:15 IST
ಅಕ್ಷರ ಗಾತ್ರ

‘ಮಧ್ಯಮ ಮಾರ್ಗವನ್ನು ಯಥಾಸ್ಥಿತಿವಾದ ಅಥವಾ ಅಪಾಯಕಾರಿವಾದ ಎನ್ನುವವರು ತಾವೇ ಆರಾಧಿಸುವ ಬುದ್ಧನನ್ನು ಮತ್ತೊಮ್ಮೆ ಓದುವುದೊಳಿತು. ಮಧ್ಯಮ ಮಾರ್ಗದಿಂದಲೇ ನಾನು ಬದಲಾದದ್ದು ಎನ್ನುತ್ತಾನೆ ಬುದ್ಧ. ಎಡಬಲ ಸಿದ್ಧಾಂತಗಳಿಗಿಂತ ಮಧ್ಯಮ ಮಾರ್ಗ ಇಂದಿನ ಜರೂರು ಎಂದು ಅರ್ಥ ಮಾಡಿಕೊಳ್ಳುವುದು ಅಗತ್ಯ...’

ಈ ಮಾತನ್ನು‘ಭಾರತೀಯ ಧರ್ಮ – ಅಂತಃಸತ್ವದ ಹುಡುಕಾಟ‘ ಕೃತಿಯ ಎಲ್ಲ ಲೇಖನಗಳಲ್ಲೂ ಎಡ–ಬಲಗಳೆಂಬ ಎರಡೂ ಗುಂಪುಗಳಿಗೆ ಒತ್ತಿ ಹೇಳುತ್ತಾ ಸಮನ್ವಯಕಾರರಾಗಲು ಲೇಖಕ ಸರ್ಫ್ರಾಜ್‌ ಚಂದ್ರಗುತ್ತಿ ಪ್ರಯತ್ನಿಸಿದ್ದಾರೆ. ಎಡ ಬಲಗಳ ಈ ಅಬ್ಬರದ ಕಾಲದಲ್ಲಿ ಮಧ್ಯಮ ಮಾರ್ಗದ ಜರೂರನ್ನು ಮನದಟ್ಟು ಮಾಡುವ ಪ್ರಯತ್ನದಂತೆ ಈ ಕೃತಿ ಗೋಚರವಾಗುತ್ತದೆ. ಎರಡೂ ಗುಂಪುಗಳಲ್ಲಿರುವ ಅತಿರೇಕಗಳ ಬಗ್ಗೆ ಅವರಿಗೆ ಬೇಸರವಿದೆ. ಸಾತ್ವಿಕ ಕೋಪವೂ ಇದೆ. ಈ ಗುಂಪುಗಳಲ್ಲಿ ನಿಂತು ಸುದ್ದಿಯಾದವರು, ವಿವಾದ ಸೃಷ್ಟಿಸಿದವರಿಗೆ ಅವರ ಮಾತುಗಳ ಉಲ್ಲೇಖಗಳ ಸಹಿತ ಮಧ್ಯಮ ಚಿಂತನೆಯಲ್ಲೇ ಉತ್ತರಿಸಲು ಪ್ರಯತ್ನಿಸಿದ್ದಾರೆ. ಹುಸಿವಾದಗಳನ್ನು ಬಯಲುಗೊಳಿಸುವ ಉತ್ಸಾಹವನ್ನೂ ಪ್ರದರ್ಶಿಸಿದ್ದಾರೆ. ಹಾಗೆಯೇ ಕರ್ಮಠ ಆಚರಣೆಗಳು, ಮಡಿಮೈಲಿಗೆ ಹೆಸರಿನ ಕಂದಾಚಾರಗಳನ್ನು ಖಂಡಿಸಲೂ ಹಿಂಜರಿದಿಲ್ಲ (ಭಾರತೀಯ ಧರ್ಮ: ಸಮಸ್ಯೆ ಸವಾಲುಗಳು, ಅಂತಿಮ ಪರಿಶೀಲನೆ ಲೇಖನಗಳು).

ಧರ್ಮ, ರಾಜಕಾರಣ, ಸಮಕಾಲೀನ ಸಂಗತಿಗಳನ್ನು ಮುಂದಿಟ್ಟುಕೊಂಡು ಎಲ್ಲ ಆಯಾಮಗಳನ್ನೂ ಸ್ಪರ್ಶಿಸಿದ್ದಾರೆ ಲೇಖಕರು. ವಾದ ವಿವಾದಗಳು ತಾರಕಕ್ಕೇರಿ ಹಿಂಸಾಸ್ವರೂಪ ತಳೆಯುತ್ತಿರುವ ಹೊತ್ತಿನಲ್ಲಿ ಇಲ್ಲಿನ ಲೇಖನಗಳನ್ನು ಓದಿ ಮುಗಿಸಿದಾಗ ಸಮಚಿತ್ತ ಸೃಷ್ಟಿಸುವ ಇಂತಹ ಕೃತಿಯ ಅಗತ್ಯವಿತ್ತು ಎನ್ನುವ ಮಾತು ಓದುಗರಿಂದ ಹೊರಡುತ್ತದೆ.

ಕೃತಿ: ಭಾರತೀಯ ಧರ್ಮ ಅಂತಃಸತ್ವದ ಹುಡುಕಾಟ

(ಎಡ–ಬಲಗಳ ನಡುವಿನ ಭಾರತ)

ಲೇ: ಡಾ.ಸರ್ಫ್ರಾಜ್‌ ಚಂದ್ರಗುತ್ತಿ

ಪ್ರ: ಜಾಗೃತಿ ಪ್ರಿಂಟರ್ಸ್‌ ಬೆಂಗಳೂರು

ಸಂ: 97400 66842

***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT