ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು: ತಾಂತ್ರಿಕ ಮನಸ್ಸು ಬಿಚ್ಚಿಟ್ಟ ಕಥಾಲೋಕ ಪುಸ್ತಕ

Last Updated 25 ಸೆಪ್ಟೆಂಬರ್ 2022, 0:15 IST
ಅಕ್ಷರ ಗಾತ್ರ

ತಾಂತ್ರಿಕ ಲೋಕದಲ್ಲೇ ಮುಳುಗಿದ ಹತ್ತಾರು ಮನಸ್ಸುಗಳು ಮಕ್ಕಳ ಕಥಾಲೋಕದಲ್ಲೂ ಈಜಬಲ್ಲವು ಎನ್ನುವುದಕ್ಕೆ ಸಾಕ್ಷ್ಯವಾಗಿದೆ ಈ ಕೃತಿ. ಜಗತ್ತಿಗೆ ಹೆಜ್ಜೆ ಇಡಲು ಸಜ್ಜಾದ ಯುವಜನತೆಗೆ ಮಾರ್ಗದರ್ಶನವಷ್ಟೇ ಅಲ್ಲ, ಎಳೆಮನಸ್ಸಿಗೂ ಕಥೆಗಳ ಮೂಲಕ ನೀತಿಪಾಠ ಹೇಳುವ ಸಾಮರ್ಥ್ಯವೂ ನಮ್ಮಲ್ಲಿದೆ ಎಂದು ಪಿಇಎಸ್‌ ವಿಶ್ವವಿದ್ಯಾಲಯದ ಉಪನ್ಯಾಸಕರು ಇಲ್ಲಿ ಸಾಬೀತುಪಡಿಸಿದ್ದಾರೆ.

ಸಿ, ಸಿ ಪ್ಲಸ್‌ ಪ್ಲಸ್‌, ಪೈಥಾನ್‌ ಹೀಗೆನ್ನುತ್ತಾ ತಾಂತ್ರಿಕ ಲೋಕದಲ್ಲೇ ಮುಳುಗಿದ ಹತ್ತಾರು ಮನಸ್ಸುಗಳು ಮಕ್ಕಳ ಕಥಾಲೋಕದಲ್ಲೂ ಈಜಬಲ್ಲವು ಎನ್ನುವುದಕ್ಕೆ ಸಾಕ್ಷ್ಯವಾಗಿದೆ ಈ ಕೃತಿ. ಜಗತ್ತಿಗೆ ಹೆಜ್ಜೆ ಇಡಲು ಸಜ್ಜಾದ ಯುವಜನತೆಗೆ ಮಾರ್ಗದರ್ಶನವಷ್ಟೇ ಅಲ್ಲ, ಎಳೆಮನಸ್ಸಿಗೂ ಕಥೆಗಳ ಮೂಲಕ ನೀತಿಪಾಠ ಹೇಳುವ ಸಾಮರ್ಥ್ಯವೂ ನಮ್ಮಲ್ಲಿದೆ ಎಂದು ಪಿಇಎಸ್‌ ವಿಶ್ವವಿದ್ಯಾಲಯದ ಉಪನ್ಯಾಸಕರು ಇಲ್ಲಿ ಸಾಬೀತುಪಡಿಸಿದ್ದಾರೆ.

ಯಾಂತ್ರಿಕ ಲೋಕದಲ್ಲಿ ತಂತ್ರಜ್ಞಾನದ ಬಲೆಗೆ ಸಿಲುಕಿರುವ ಮಕ್ಕಳು ಕಥಾಲೋಕದಿಂದ ದೂರ ಸರಿಯುತ್ತಿದ್ದಾರೆ. ಅಜ್ಜಿಯಂದಿರೂ ತಮ್ಮ ಮೊಮ್ಮಕ್ಕಳಿಗೆ ಕಥೆ ಹೇಳಿ ವರ್ಷಗಳೇ ಉರುಳಿರಬಹುದು. ಶಾಲೆಗಳಲ್ಲಿ ನೀತಿಕಥೆಗಳು ಅಪರೂಪವಾಗಿವೆ. ಆದರೆ ಕಥೆ ಎನ್ನುವುದು ಮಕ್ಕಳನ್ನು ಸದಾ ಸೆಳೆಯುವ ಮಾಧ್ಯಮ ಎನ್ನುವುದನ್ನು ಅಲ್ಲಗೆಳೆಯುವಂತಿಲ್ಲ. ಈ ಉದ್ದೇಶದಿಂದಲೇ ಈ ಕೃತಿ ರಚಿಸಲಾಗಿದೆ ಎಂದಿದ್ದಾರೆ ಪಿಇಎಸ್‌ ವಿಶ್ವವಿದ್ಯಾಲಯದ ಕುಲಾಧಿಪತಿ ಎಂ.ಆರ್‌.ದೊರೆಸ್ವಾಮಿ. ಇವರ ಸಂಸ್ಥೆಯ ಉಪನ್ಯಾಸಕರು ರಚಿಸಿದ 150ಕ್ಕೂ ಅಧಿಕ ಕಥೆಗಳಲ್ಲಿ ಆಯ್ದ 34 ಕಥೆಗಳನ್ನು ಈ ಪುಸ್ತಕದಲ್ಲಿ ನೀಡಲಾಗಿದೆ. ಪ್ರತಿ ಕಥೆಯ ಕೊನೆಯಲ್ಲಿ ನೀತಿಪಾಠವಿದ್ದು, ಇದನ್ನು ನಿವೃತ್ತ ಅಧ್ಯಾಪಕಸಿ.ಎಸ್‌.ಬನಶಂಕರಯ್ಯ ಅವರು ಬರೆದಿದ್ದಾರೆ. ಶಿಕ್ಷಣ ವ್ಯವಸ್ಥೆಯೊಳಗಿನ ಒತ್ತಡದಿಂದ ಸಾಹಿತ್ಯ, ಬರವಣಿಗೆಯಿಂದ ದೂರವಾಗುತ್ತಿರುವ ಉಪನ್ಯಾಸಕ ವೃಂದ ಮತ್ತೆ ಲೇಖನಿ ಹಿಡಿದಿರುವುದು, ಅದರಲ್ಲೂ ಮಕ್ಕಳ ಸಾಹಿತ್ಯವನ್ನು ಗಂಭೀರವಾಗಿ ಪರಿಗಣಿಸಿರುವುದು ಒಳ್ಳೆಯ ಬೆಳವಣಿಗೆ.

ಸಮಾಜದಲ್ಲಿ ಇಳಿಮುಖವಾಗುತ್ತಿರುವ ನೈತಿಕ ಮೌಲ್ಯಗಳು ಮಕ್ಕಳ ಮೇಲೂ ಪ್ರಭಾವ ಬೀರುತ್ತಿವೆ. ಹೀಗಾಗಿ ಈ ಕೃತಿಯನ್ನು ರಾಜ್ಯದ ಎಲ್ಲ ಶಾಲೆಗಳಿಗೂ ತಲುಪಿಸುವ ದೊರೆಸ್ವಾಮಿ ಅವರ ನಿರ್ಧಾರ ಮೆಚ್ಚುಗೆಗೆ ಪಾತ್ರವಾಗುವಂಥದ್ದು. ಇತರರಿಗೆ ಮಾದರಿಯಾಗುವಂತೆ ಅವರೂ ಒಂದು ಕಥೆ ಬರೆದಿದ್ದಾರೆ. ಕಥೆಗೆ ಪೂರಕವಾಗಿ ಕಲೆಯೂ ಇದ್ದು, ಸರಳವಾದ ಬರವಣಿಗೆ ಮಕ್ಕಳ ಓದಿಗೆ ಸಹಕಾರಿ. ಬೀಜವೊಂದರ ಒಳಗೆ ಹೆಮ್ಮರ ಅಡಗಿರುವಂತೆ ಇಲ್ಲಿನ ಕಥೆಗಳೊಳಗಿರುವ ನೀತಿಪಾಠ ಮಕ್ಕಳ ಭವಿಷ್ಯಕ್ಕೆ ದಾರಿದೀಪವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT