ಜೇನು ನೊಣಗಳು

7

ಜೇನು ನೊಣಗಳು

Published:
Updated:
Deccan Herald

ಜೇನು ನೊಣದ ಒಂದು ಗುಂಪು

ಹಾರಿ ಹೋಯಿತು

ಬೆಟ್ಟ ಗುಡ್ಡ ದಾರಿ ಗುಂಟ

ಸುತ್ತ ತಿರುಗಿತು.

 

ರಾಶಿ ರಾಶಿ ಹೂವ ಕಂಡು

ಹಿಗ್ಗು ಬಂದಿತು

ಹೂವ ಮೇಲೆ ಕುಳಿತುಕೊಂಡು

ಮುತ್ತು ಕೊಟ್ಟಿತು.

 

ಪ್ರೀತಿಯಿಂದ ಮಧುವ ಹೀರಿ

ನಕ್ಕು ನಲಿಯಿತು

ರಸವ ತಂದು ಗೂಡಿನಲ್ಲಿ

ಕೂಡಿ ಹಾಕಿತು.

 

ಜೇನು ಕಂಡ ನಮ್ಮ ಜನಕೆ

ಆಸೆ ಹುಟ್ಟಿತು

ನಮ್ಮ ಆಸೆ ಕಂಡು ಅವಕೆ

ತ್ಯಾಗ ಹುಟ್ಟಿತು

 

ಸಿಹಿ ಜೇನು ನಮ್ಮ ಪಾಲಿಗೆ

ಬಂದು ಸೇರಿತು

ಜಗದ ಜನರ ನಾಲಿಗೆಯಲಿ

ತುಪ್ಪ ಸುರಿಸಿತು

 

ಇಲ್ಲಿ ಒಂದು ನೀತಿಪಾಠ

ತಿಳಿದು ಬಂದಿತು

ಶರೀರ ಇದು ಪರರ ಹಿತಕೆ
ಎಂಬ ಮಾತು ತಿಳಿಯಿತು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !