ಮಂಗಳವಾರ, ಮೇ 18, 2021
22 °C

ಅಂಗನವಾಡಿ ನೌಕರರ ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂಧನೂರು : ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಎ.ಐ.ಟಿ.ಯು.ಸಿ ಸಂಘಟನೆಯ ನೇತೃತ್ವದಲ್ಲಿ ಸೋಮವಾರ ನಗರದಲ್ಲಿ ಬೃಹತ್ ಮೆರವಣಿಗೆ ನಡೆಸಿದರು. ಪ್ರವಾಸಿ ಮಂದಿರದಿಂದ ಪ್ರಾರಂಭವಾದ ಮೆರವಣಿಗೆ ಗಾಂಧಿವೃತ್ತ, ರಾಯಚೂರು ರಸ್ತೆ ಮೂಲಕ ತೆರಳಿ ವಾಸವಿ ಕಲ್ಯಾಣ ಮಂಟಪದಲ್ಲಿ ಸಮಾವೇಶಗೊಂಡಿತು.ಅಂಗನವಾಡಿ ಫೆಡರೇಷನ್ ರಾಜ್ಯ ಉಪಾಧ್ಯಕ್ಷೆ ಪುಟ್ಟಲಕ್ಷ್ಮಿ ಕೆಂಭಾವುಟ ಬೀಸುವ ಮೂಲಕ ಮೆರವಣಿಗೆ ಉದ್ಘಾಟಿಸಿದರು. ಒಂದು ಗಂಟೆಕಾಲ ನಡೆದ ಮೆರವಣಿಗೆಯಿಂದ ಸಾರ್ವಜನಿಕ ಸಂಚಾರಕ್ಕೆ ತೀವ್ರ ವ್ಯತ್ಯಯ ಉಂಟಾಯಿತು.ಅಂಗನವಾಡಿ ಫೆಡರೇಷನ್‌ನ ರಾಜ್ಯ ಅಧ್ಯಕ್ಷ ಎಚ್.ಕೆ.ರಾಮಚಂದ್ರಪ್ಪ, ಎ.ಐ.ಟಿ.ಯು.ಸಿ. ಜಿಲ್ಲಾಧ್ಯಕ್ಷ ಸಂಗಯ್ಯಸ್ವಾಮಿ, ರಾಜ್ಯ ಸಮಿತಿ ಮುಖಂಡರಾದ ಪ್ರಭಾವತಿ, ಸುಲೋಚನಾ, ತಾಲ್ಲೂಕು ಫೆಡರೇಷನ್ ಮುಖಂಡರಾದ ಯಮನಮ್ಮ, ಅಮರಮ್ಮ, ಗಿರಿಜಮ್ಮ, ಮರಿಯಮ್ಮ, ಎ.ಐ.ಟಿ.ಯು.ಸಿ ತಾಲ್ಲೂಕು ಅಧ್ಯಕ್ಷ ವೆಂಕನಗೌಡ ಗದ್ರಟಗಿ, ಹನುಮೇಶ ಗಿಣಿವಾರ, ಬಸವರಾಜ ಬಾದರ್ಲಿ, ಚಂದ್ರಶೇಖರ ಕ್ಯಾತ್ನಟ್ಟಿ ಮತ್ತಿತರರು ಮೆರವಣಿಗೆ ನೇತೃತ್ವವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.