ಶುಕ್ರವಾರ, ಫೆಬ್ರವರಿ 26, 2021
27 °C

ಅಂಗವಿಕಲ ಮಕ್ಕಳ ಹೂ ನಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂಗವಿಕಲ ಮಕ್ಕಳ ಹೂ ನಗೆ

ನಟಿ ಅನುತೇಜಾ ಅಂಗವಿಕಲ ಮಕ್ಕಳನ್ನು ಸೇರಿಸಿಕೊಂಡು ಸಿದ್ಧಮಾಡಿರುವ ಸಿನಿಮಾ ‘ಅರಳುವ ಹೂವುಗಳು’. ಚಿತ್ರದ ಅಡಿಯೊ ಇತ್ತೀಚೆಗೆ ಬಿಡುಗಡೆಯಾಯಿತು. ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ವೀಲ್‌ಚೇರ್ ವಿತರಣೆಯೂ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು, ಹಿರಿಯ ನಿರ್ದೇಶಕ ಎಸ್‌.ಕೆ. ಭಗವಾನ್ ಚಿತ್ರದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು. ಜಿ. ಮೂರ್ತಿ ನಿರ್ದೇಶನದ ಅರಳುವ ಹೂವುಗಳನ್ನು ಅನುತೇಜಾ ನಿರ್ಮಾಣ ಮಾಡಿದ್ದಾರೆ. ಹದಿನೈದು ವರುಷಗಳಿಂದ ಅನ್ನಪೂರ್ಣ ಟ್ರಸ್ಟ್ ಮೂಲಕ ಅಂಗವಿಕಲರಿಗೆ ನೆರವಾಗುತ್ತಿದ್ದಾರೆ ಅನುತೇಜಾ. ಚಿತ್ರದಲ್ಲಿ ಎರಡೂ ಕೈಗಳು ಇಲ್ಲದ ಆಂಜಿ ಎಂಬ ಹುಡುಗ ನಾಯಕ. ಇನ್ನುಳಿದಂತೆ ಇಪ್ಪತೈದು ಅಂಗವಿಕಲ ಮಕ್ಕಳು ಚಿತ್ರದಲ್ಲಿ ನಟಿಸಿದ್ದಾರೆ. ಅಂಗವೈಕಲ್ಯವನ್ನೂ ಮೀರಿ ಸಾಧನೆ ಮಾಡಬಹುದೆಂಬ ಸಂದೇಶವನ್ನು ಅನುತೇಜಾ ಈ ಚಿತ್ರದ ಮೂಲಕ ಸಾರುವ ಪ್ರಯತ್ನ ಮಾಡಿದ್ದಾರಂತೆ ಎಂದು ವೇದಿಕೆಯಲ್ಲಿದ್ದ ಗಣ್ಯರು ಪ್ರಶಂಸಿಸಿದರು. ವಿನಯಾ ಪ್ರಸಾದ್, ರಮೇಶ್ ಭಟ್, ಸುಂದರಂ ಮಾಸ್ಟರ್ ಸೇರಿದಂತೆ ಅನೇಕ ನಟರು ತಾರಾಗಣದಲ್ಲಿ ಇದ್ದಾರೆ. ಮಾಜಿ ಸಚಿವ ಬಿ.ಎನ್. ಬಚ್ಚೇಗೌಡ, ನಿರ್ಮಾಪಕ ಹರಿ ಎಲ್. ಖೋಡೆ, ನಟ ರವೀಂದ್ರನಾಥ್ ಮತ್ತಿತರರು ಹಾಜರಿದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.