ಸೋಮವಾರ, ಜೂನ್ 21, 2021
29 °C

ಅಂಚೆ ಕಚೇರಿ ‘ಎಫ್‌ಡಿ’ ಬಡ್ಡಿದರ ಶೇ0.2 ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ಅಂಚೆ ಕಚೇರಿ ಫಿಕ್ಸೆಡ್‌ ಡಿಪಾಜಿಟ್‌ (ಎಫ್‌.ಡಿ; ನಿಶ್ಚಿತ ಠೇವಣಿ) ಬಡ್ಡಿದರವನ್ನು ಕೇಂದ್ರ ಸರ್ಕಾರ ಶೇ 0.2ರವರೆಗೆ ಹೆಚ್ಚಿಸಿದೆ.

ಆದರೆ, ಜನಪ್ರಿಯ ಉಳಿತಾಯ ಯೋಜನೆ ಎನಿಸಿಕೊಂಡಿ­ರುವ ‘ಸಾರ್ವಜ ನಿಕ ಭವಿಷ್ಯ ನಿಧಿ’(ಪಿಪಿಎಫ್‌)  ಬಡ್ಡಿದರ ಮತ್ತು ವಾರ್ಷಿಕ ಹೂಡಿಕೆ (ರೂ.1ಲಕ್ಷ) ಮಿತಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. 5 ಮತ್ತು 10 ವರ್ಷ ಅವಧಿಯ ‘ಎನ್‌ಎಸ್‌ಸಿ’ ಬಡ್ಡಿಯನ್ನು (ಶೇ 8.5 ಮತ್ತು

ಶೇ 8.8)  ಯಥಾ ಸ್ಥಿತಿಯಲ್ಲೇ ಇರಿಸಲಾಗಿದೆ.ಒಂದರಿಂದ ಎರಡು ವರ್ಷ ಅವಧಿ ‘ಎಫ್‌.ಡಿ’ಗಳಿಗೆ ಶೇ 8.2ರಷ್ಟಿದ್ದ  ಬಡ್ಡಿ ಯನ್ನು ಶೇ8.4ಕ್ಕೇರಿಸಲಾಗಿದೆ.  ಮೂರು ಮತ್ತು ಐದು ವರ್ಷ ಅವಧಿ ಠೇವಣಿಗಳ ಬಡ್ಡಿಯನ್ನು ಕ್ರಮವಾಗಿ ಶೇ 8.4 ಮತ್ತು ಶೇ 8.5ಕ್ಕೆ (ಶೇ 0.1ರಷ್ಟು) ಹೆಚ್ಚಿಸಲಾ ಗಿದೆ. ಪರಿಷ್ಕರಿಸಿದ ಬಡ್ಡಿದರ ಏ. 1ರಿಂದ ಜಾರಿಗೆ ಬರಲಿದೆ ಎಂದು ಮಂಗಳವಾರ ಬಿಡುಗಡೆ ಮಾಡಲಾಗಿರುವ ಅಧಿಕೃತ ಪ್ರಕಟಣೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.