ಮಂಗಳವಾರ, ಜೂನ್ 22, 2021
22 °C

ಅಂಧರ ಕ್ರಿಕೆಟ್: ಭಾರತಕ್ಕೆ ಸರಣಿ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ಮೂರನೇ ಪಂದ್ಯದಲ್ಲಿ ಸೋಲು ಕಂಡರೂ ಆತಿಥೇಯ ಭಾರತ ತಂಡ ಇಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಅಂಧರ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ 2-1ರಲ್ಲಿ ಸರಣಿ ಗೆದ್ದುಕೊಂಡಿತು.

ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿ ಆತಿಥೇಯರು ನೀಡಿದ್ದ 172 ರನ್‌ಗಳ ಗುರಿ ಮುಟ್ಟಲು ಪ್ರವಾಸಿ ತಂಡ 17.1 ಓವರ್ ತಗೆದುಕೊಂಡಿತು. ಮೊಹಮ್ಮದ್ ಅಕ್ರಮ್ (ಔಟಾಗದೇ 77, 44ಎಸೆತ, 11ಬೌಂಡರಿ, 1ಸಿಕ್ಸರ್), ಮೊಹಮ್ಮದ್ ಫಯಾಜ್ (ಔಟಾಗದೇ 51, 27 ಎಸೆತ, 7ಬೌಂಡರಿ) ಪಾಕ್ ಗೆಲುವಿಗೆ ಕಾರಣರಾದರು. ಮೊದಲು ಬ್ಯಾಟ್ ಮಾಡಿದ್ದ ಭಾರತ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 171 ರನ್ ಕಲೆ ಹಾಕಿತ್ತು.

ಸಂಕ್ಷಿಪ್ತ ಸ್ಕೋರು: ಭಾರತ: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 171 (ಪ್ರಕಾಶ್ 32, ಕೇತನ್ 32, ಗಣೇಶ್ 33; ಮೊಹಮ್ಮದ್ ಜಮೀಲ್ 30ಕ್ಕೆ3). ಪಾಕಿಸ್ತಾನ 17.1 ಓವರ್‌ಗಳಲ್ಲಿ 5 ವಿಕೆಟ್‌ಗೆ 172. (ಮೊಹಮ್ಮದ್ ಅಕ್ರಮ್ ಔಟಾಗದೇ 77, ಮೊಹಮ್ಮದ್ ಫಯಾಜ್ ಔಟಾಗದೇ 51). ಫಲಿತಾಂಶ: ಪಾಕಿಸ್ತಾನಕ್ಕೆ 5 ವಿಕೆಟ್ ಗೆಲುವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.