ಶುಕ್ರವಾರ, ಏಪ್ರಿಲ್ 23, 2021
27 °C

ಅಕ್ರಮ ಕಟ್ಟಡ ತೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹದೇವಪುರ: ಕಾಡುಗೋಡಿ ಸರ್ವೇ ನಂ.1ರಲ್ಲಿನ ಮೀಸಲು ಅರಣ್ಯ ಪ್ರದೇಶದಲ್ಲಿ ಅನಧಿಕೃತವಾಗಿ ತಲೆ ಎತ್ತಿದ ಅಕ್ರಮ ಕಟ್ಟಡಗಳನ್ನು ಅರಣ್ಯ ಇಲಾಖೆ ತೆರವುಗೊಳಿಸಿ ಸುಮಾರು ರೂ 10 ಕೋಟಿ ಮೌಲ್ಯದ ಜಮೀನನ್ನು ವಶಪಡಿಸಿಕೊಂಡಿತು.ಕಾಡುಗೋಡಿ ಸುತ್ತಮುತ್ತಲೂ ಸುಮಾರು 700 ಎಕರೆಗೂ ಹೆಚ್ಚು ಮೀಸಲು ಅರಣ್ಯ ಭೂಪ್ರದೇಶವಿದ್ದು, ಅನೇಕ ಕಡೆಗಳಲ್ಲಿ ಕೆಲ ಖಾಸಗಿ ಕಂಪನಿಯ ಮಾಲೀಕರು ಅನಧಿಕೃವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಈ ಕುರಿತು ಸೂಕ್ತ ಕ್ರಮ ಜರುಗಿಸಲಾಗುತ್ತಿದೆ. ತೆರವು ಕಾರ್ಯಾಚರಣೆಯನ್ನು ಮುಂದುವರೆಸಲಾಗಿದೆ ಎಂದು ನಗರ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ವನಶ್ರೀ ಸಿಂಗ್ ತಿಳಿಸಿದರು.ಸರ್ವೇ ನಂ.1ರಲ್ಲಿನ 22  ಸಾವಿರ ಅಡಿಗಳಷ್ಟು ಭೂಮಿಯನ್ನು ಕಳೆದ ಹದಿನೈದು ವರ್ಷಗಳಿಂದ ಜೋಗಮಯಿ ಎಂಬ ಹೆಸರಿನ ಖಾಸಗಿ ಕಟ್ಟಿಗೆ ಇಂಡಸ್ಟ್ರೀಯ ಮಾಲೀಕರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದರು. ಅಷ್ಟೇ ಅಲ್ಲ ಆ ಭೂಮಿಯನ್ನು ತಮ್ಮ ಕಂಪನಿಯ ಉಪಯೋಗಕ್ಕೆ ಬಳಸಿಕೊಂಡಿದ್ದರು. ಈ ಕುರಿತು ಅರಣ್ಯ ಇಲಾಖೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿತ್ತು. ಇತ್ತೀಚೆಗೆಷ್ಟೇ ನ್ಯಾಯಾಲಯ ಅರಣ್ಯ ಇಲಾಖೆಯ ಪರವಾಗಿ ತೀರ್ಪು ನೀಡಿತು.ಒತ್ತುವರಿಗೊಂಡ ಮೀಸಲು ಅರಣ್ಯ ಭೂಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿರುವ ಎಲ್ಲಾ ಕಟ್ಟಡಗಳನ್ನು ತೆರವುಗೊಳಿಸುವಂತೆ ಆದೇಶಿಸಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.