ಕಾರವಾರ: ಆಕಸ್ಮಿಕ ಬೆಂಕಿ ತಗುಲಿ ನಗರದ ಹೂವಿನ ಚೌಕ್ನಲ್ಲಿರುವ ಕಿರಾಣಿ ಅಂಗಡಿಯೊಂದರ ಸ್ಟೋರ್ನಲ್ಲಿದ್ದ ಕಿರಾಣಿ ಸಾಮಾನುಗಳು ಸುಟ್ಟು ಕರಕಲಾದ ಘಟನೆ ಮಂಗಳವಾರ ಮಧ್ಯರಾತ್ರಿ 2.30ಗಂಟೆ ಸುಮಾರಿಗೆ ಸಂಭವಿಸಿದೆ.

ಕಿರಾಣಿ ಅಂಗಡಿ ಗೋವರ್ಧನ ಮಹಾಲದಾರ್, ಮಂಗೇಶ ಮಹಾಲದಾರ್ ಎನ್ನುವವರಿಗೆ ಸೇರಿದ್ದು ಅಂದಾಜು ಆರು ಲಕ್ಷ ರೂಪಾಯಿ ಮೌಲ್ಯದ ಕಿರಾಣಿ ಸಾಮಾನುಗಳು ಸುಟ್ಟುಹೋಗಿವೆ. ಸ್ಟೋರ್ ರೂಮ್ ಆಗಿದ್ದರಿಂದ ಬೆಂಕಿ ಹತ್ತಿಕೊಂಡಿರುವುದು ಮೊದಲು ಗೊತ್ತಾಗಿರಲಿಲ್ಲ.

ಪಕ್ಕದಲ್ಲಿ ಮಲಗಿದ್ದ ವ್ಯಕ್ತಿಗಳು ಎಚ್ಚರಗೊಂಡು ಬೆಂಕಿಯನ್ನು ಕಂಡು ಅಂಗಡಿಯ ಮಾಲೀಕರಿಗೆ ಸುದ್ದಿ ಮುಟ್ಟಿಸಿದ್ದಾರೆ ನಂತರ ಅಗ್ನಿಶಾಮಕ ದಳದವರು ಬಂದು ಹರಸಾಹಸಪಟ್ಟು ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಸತತ ಐದು ಗಂಟೆಗಳ ಪ್ರಯತ್ನದ ನಂತರ ಆಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಸ್ಟೋರ್ನಲ್ಲಿ ಬಹುತೇಕ ಕಿರಾಣಿ ಸಾಮಾನುಗಳಿದ್ದು ಅವುಗಳೆಲ್ಲ ಸುಟ್ಟು ಕರಕಲಾಗಿವೆ. ಬೆಂಕಿಯ ಜ್ವಾಲೆ ಎಷ್ಟಿತ್ತೆಂದರೆ ಸಾಮಾನು ಇಡುವ ಕಬ್ಬಿಣದ ರ್ಯಾಕ್ಗಳು ಸುಟ್ಟು ಕರಕಲಾಗಿವೆ. ಪ್ಲಾಸ್ಟಿಕ್ ವಸ್ತುಗಳು ಅಂಟಿನಂತಾಗಿವೆ.

ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಜಿ.ತಿಪ್ಪೆಸ್ವಾಮಿ, ಠಾಣಾಧಿಕಾರಿ ವಿನಾಯಕ ಹಟ್ಟೆಕರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.