ಬೆಳಗಾವಿ: ಜಗಜ್ಯೋತಿ ಬಸವೇಶ್ವರ ಜಯಂತಿ ಅಂಗವಾಗಿ ಜಿಲ್ಲಾಡಳಿತ ಹಾಗೂ ವಿವಿಧ ಲಿಂಗಾಯತ ಸಂಘಟನೆ ಗಳ ಆಶ್ರಯದಲ್ಲಿ ನಗರದಲ್ಲಿ ಮಂಗಳ ವಾರ ಭವ್ಯ ಮೆರವಣಿಗೆ ನಡೆಯಿತು.

ಕನ್ನಡ ಸಾಹಿತ್ಯ ಭವನದಿಂದ ಹೊರಟ ಮೆರವಣಿಗೆಯು ಗಮನ ಸೆಳೆ ಯಿತು. ಮೆರವಣಿಗೆಯ ಆರಂಭದಲ್ಲಿ ಬಸವಪ್ರಭು ಸ್ವಾಮೀಜಿ, ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ ಅವರು, ರಥದ ಮೇಲಿ ಅಲಂಕೃತಗೊಂಡಿದ್ದ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾ ರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಬಳಿಕ ಚನ್ನಮ್ಮ ವೃತ್ತದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ, ಜಗ್ಗಲಿಗೆ ಬಾರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಹತ್ತಾರು ಶರಣೆಯರು ಸಮಗ್ರ ವಚನ ಸಾಹಿತ್ಯ ಸಂಪುಟಗಳನ್ನು ತಲೆಯ ಮೇಲೆ ಹೊತ್ತು ಮೆರವಣಿಗೆಯಲ್ಲಿ ಸಾಗುವ ಮೂಲಕ ಗಮನ ಸೆಳೆದರು.

ನೃತ್ಯದ ಮೆರುಗು: ಮೆರವಣಿಗೆಯಲ್ಲಿ ಜನಪದ ಕಲಾವಿದರು ಡೊಳ್ಳು ಕುಣಿತ, ಕೀಲು ಕುದುರೆ ಕುಣಿತ ಪ್ರದರ್ಶಿಸುವ ಮೂಲಕ ಗಮನ ಸೆಳೆದರು. ಲೇಜಿಮ್ ನೃತ್ಯ, ಜಗ್ಗಲಿಗೆ ಮೇಳದ ಕಲಾವಿದರು ಮೆರವಣಿಗೆಗೆ ಮೆರುಗು ನೀಡಿದರು. ವಿವಿಧ ಸಂಘಟನೆಗಳು ಬಸವೇಶ್ವರರ ರೂಪಕವನ್ನು ಮೆರವಣಿಗೆಯಲ್ಲಿ ಪ್ರದ ರ್ಶಿಸಿದವು.

ನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸಿದ ಭವ್ಯ ಮೆರವಣಿಗೆಯು ಬಸವೇಶ್ವರರ ಸಂದೇಶವನ್ನು ಸಾರಿತು.
ಮೆರವಣಿಗೆಯಲ್ಲಿ ಶಾಸಕರಾದ ಅಭಯ ಪಾಟೀಲ, ಸಂಜಯ ಪಾಟೀಲ, ಫಿರೋಜ್ ಸೇಠ್, ಕರ್ನಾಟಕ ಅರಣ್ಯ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಶಂಕರಗೌಡ ಪಾಟೀಲ, ಬುಡಾ ಅಧ್ಯಕ್ಷ ಬಾಳಾಸಾಹೇಬ ಕಂಗ್ರಾಳಕರ, ಪಾಲಿಕೆ ಆಯುಕ್ತ ವೈ.ಎಸ್. ಪಾಟೀಲ, ಮಾಜಿ ಸಚಿವ ಎ.ಬಿ. ಪಾಟೀಲ, ಬಿಜೆಪಿ ಮಹಾನಗರ ಘಟಕದ ಅಧ್ಯಕ್ಷ ಎಂ.ಬಿ. ಝಿರಲಿ ಹಾಗೂ ಲಿಂಗಾಯತ ಹಲವು ಮುಖಂಡರು ಪಾಲ್ಗೊಂಡಿದ್ದರು.

ಮೂಡಲಗಿ ವರದಿ
ಪಟ್ಟಣದಲ್ಲಿ ಮಂಗಳವಾರ ಬಸವ ಜಯಂತಿಯನ್ನು ಸಂಭ್ರಮ, ಸಡಗರ ದಿಂದ ಆಚರಿಸಿದರು. ಬಸವವೇಶ್ವರ ದೇವಸ್ಥಾನದ ಬಳಿಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರ ಸುಭಾಸ ಜಿ. ಢವಳೇಶ್ವರ ಅವರು ಬಸವೇಶ್ವರರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸುವದರ ಮೂಲಕ ಬಸವ ಜಯಂತಿ ಅಂಗವಾಗಿ ಏರ್ಪಡಿ ಸಿದ್ದ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು. ಬೆಳಿಗ್ಗೆ ಬಸವೇಶ್ವರ ದೇವ ಸ್ಥಾನದಲ್ಲಿ ಬಸವ ಮೂರ್ತಿಗೆ ವಿಶೇಷ ಪೂಜೆ ಜರುಗಿತು. ಸಂಜೆ ಮುತ್ತೈದಿ ಯರಿಂದ ತೊಟ್ಟಿಲ ಕಾರ್ಯಕ್ರಮ ಜರುಗಿತು. ಶಂಕರಯ್ಯ ಹಿರೇಮಠ, ಕೆ.ಟಿ.ಗಾಣಿಗೇರ, ರುದ್ರಪ್ಪ ವಾಲಿ, ಮಹಾಲಿಂಗಯ್ಯಾ ಹಿರೇಮಠ, ಈರಪ್ಪ ಬೆಳಕೂಡ, ಪಂಚಯ್ಯ ಹಿರೇಮಠ ಸೇರಿ ದಂತೆ ವಿವಿಧ ಸಂಸ್ಥೆಗಳ ಪದಾಧಿಕಾರಿ ಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.