ಭಾನುವಾರ, ಜನವರಿ 26, 2020
28 °C

ಅಣ್ಣಾ- ಅರವಿಂದ

–ಜಯವಂತ ಕಾಡದೇವರ ಬನಹಟ್ಟಿ,ಜಮಖಂಡಿ ತಾಲ್ಲೂಕು Updated:

ಅಕ್ಷರ ಗಾತ್ರ : | |

ಅಣ್ಣಾ ಮಣ್ಣಿನ ಮಗ,

ಧೀರ ಸೈನಿಕ, ದೇಶಭಕ್ತ,

ಪ್ರಾಮಾಣಿಕ.

ದುಷ್ಟರಾರು, ಶಿಷ್ಟರಾರು

ಎಂದರಿಯದ ಅಮಾಯಕ.

ಹಜಾರೆ ಹಸುವಿನಷ್ಟೇ ಮುಗ್ಧ

ಬೆಳ್ಳಗಿದ್ದದ್ದೆಲ್ಲ ಹಾಲೆಂದು ನಂಬುವಾತ,

ನಿಷ್ಠಾವಂತ ಗಾಂಧಿ ಅನುಯಾಯಿ.

ಕೇಜ್ರಿವಾಲ್?

ಕ್ರೇಜಿ ಅಲ್ಲ ಅರಿವು ಉಳ್ಳಾತ ಆತ

ಅರವಿಂದ!

ಭ್ರಷ್ಟ ಅಧಿಕಾರಸ್ಥರ ಷಡ್ಯಂತ್ರ

ಸ್ವಾರ್ಥಿ ರಾಜಕಾರಣಿಗಳ ಚಕ್ರವ್ಯೂಹ

ಭೇದಿಸಬಲ್ಲ ಚತುರ ನಾಯಕ

ಸರ್ದಾರ್ ಪಟೇಲರಂತೆ

ನಿಷ್ಠುರ ರಾಷ್ಟ್ರಪ್ರೇಮಿ

ಸಾಧ್ಯವಾದರೇ

ಅಣ್ಣಾ ಅರವಿಂದರ ಸಮ್ಮಿಳನ

ಆಗುವುದು ಭಾರತ ದೇಶದ ಕಲ್ಯಾಣ.

 

ಪ್ರತಿಕ್ರಿಯಿಸಿ (+)