ಶನಿವಾರ, ಫೆಬ್ರವರಿ 27, 2021
21 °C

ಅಣ್ಣಾ-ಸೋನಿಯಾ ಭೇಟಿ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಣ್ಣಾ-ಸೋನಿಯಾ ಭೇಟಿ ಇಂದು

ನವದೆಹಲಿ (ಪಿಟಿಐ): ಅಮೆರಿಕದೊಂದಿಗೆ ನಾಗರಿಕ ಪರಮಾಣು ಸಹಕಾರ ಒಪ್ಪಂದದಲ್ಲಿ  ತೋರಿದಂಥ ಬದ್ಧತೆಯನ್ನು ಪ್ರಧಾನಿ ಮನಮೋಹನ್ ಸಿಂಗ್, ಲೋಕಪಾಲ್ ಮಸೂದೆ ವಿಷಯದಲ್ಲಿಯೂ ಪ್ರದರ್ಶಿಸಬೇಕು ಎಂದು ಬುಧವಾರ ಅಣ್ಣಾ ಹಜಾರೆ ತಂಡ ಹೇಳಿದೆ.ಪ್ರಧಾನಿ ಕಚೇರಿಯನ್ನೂ ಮಸೂದೆ ವ್ಯಾಪ್ತಿಗೆ  ತರಲು ಹಿಂಜರಿಯುವುದಿಲ್ಲ ಎಂದು ಸಿಂಗ್, ಪ್ರಧಾನ ಸಂಪಾದಕರೊಂದಿಗಿನ ಸಂವಾದದಲ್ಲಿ ಸ್ಪಷ್ಟಪಡಿಸಿದ ಬೆನ್ನಲ್ಲಿಯೇ ಹಜಾರೆ ತಂಡವು ಈ ಸಲಹೆ ನೀಡಿದೆ.`ಸರ್ಕಾರವು, ಈ ವಿಷಯದಲ್ಲಿ ನಾಗರಿಕ ಸಮಾಜದ ಜತೆ ಹೆಜ್ಜೆ ಹಾಕಲಿದೆ. ಆದರೆ ಯಾವುದೇ ತಂಡವೂ ತಮ್ಮ ಅನಿಸಿಕೆಯೇ ಅಂತಿಮ ಎಂದು ಒತ್ತಡ ಹೇರಲು ಸಾಧ್ಯವಿಲ್ಲ~ ಎಂಬ ಪ್ರಧಾನಿ ಹೇಳಿಕೆಗೆ ಪ್ರತಿಕ್ರಿಯಿಸಿದ ಬೇಡಿ, ` ನಾವು ಈ ವಿಷಯದಲ್ಲಿ ಬಹಿರಂಗ ಚರ್ಚೆಗೆ ಮುಂದಾಗಿದ್ದು, ಸರ್ಕಾರವನ್ನು ಸಂಪರ್ಕಿಸ್ದ್ದಿದೆವು~ ಎಂದರು.

 

ಅಣ್ಣಾ-ಸೋನಿಯಾ ಭೇಟಿ ಇಂದು

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಗುರುವಾರ ಭೇಟಿಯಾಗುತ್ತಿರುವ ಅಣ್ಣಾ ಹಜಾರೆ, ಲೋಕಪಾಲ್ ಮಸೂದೆ ವ್ಯಾಪ್ತಿಗೆ ಪ್ರಧಾನಿ ಕಚೇರಿಯನ್ನು ತರಬೇಕೆಂದು ಅವರ ಮನವೊಲಿಸುವ ಪ್ರಯತ್ನ ಮಾಡಲಿದ್ದಾರೆ.ಈ ದಿಸೆಯಲ್ಲಿ ಮನಮೋಹನ್ ಸಿಂಗ್ ಅವರಂಥ ಪ್ರಾಮಾಣಿಕ ವ್ಯಕ್ತಿ ಸಲಹೆ ನೀಡಿರುವಾಗ, ಮಸೂದೆ ವ್ಯಾಪ್ತಿಗೆ ಪ್ರಧಾನಿ ಕಚೇರಿಯನ್ನು ತರಲು ಇರುವ ಅಡ್ಡಿಯಾದರೂ ಏನು ಎಂದು ಹಜಾರೆ, ಸೋನಿಯಾ ಅವರನ್ನು ಪ್ರಶ್ನಿಸಲಿದ್ದಾರೆ.ಮಸೂದೆ ಕುರಿತಂತೆ ನಾಗರಿಕ ಸಮಾಜದ ನಿಲುವನ್ನು ಸೋನಿಯಾ ಅವರಿಗೆ ತಿಳಿಸುವುದಾಗಿ ಹಜಾರೆ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.ಕಾರಟ್ ಭೇಟಿ: ಲೋಕಪಾಲ್ ಮಸೂದೆ ಕುರಿತಂತೆ ನಾಗರಿಕ ಸಮಾಜದ ನಿಲುವನ್ನು ಸ್ಪಷ್ಟಪಡಿಸಲು ಬುಧವಾರ ಅಣ್ಣಾ ಹಜಾರೆ ತಂಡವು ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಅವರನ್ನು ಭೇಟಿ ಮಾಡಿತು.
 ಪ್ರತಿಯೊಂದು ಅಭಿಪ್ರಾಯಕ್ಕೂ ಸಮರ್ಥನೆ ಇರಬೇಕಾಗುತ್ತದೆ. ಹಾಗಾಗಿಯೇ ಹಜಾರೆ ತಂಡವು ಈ ಸಂಬಂಧ ಬಹಿರಂಗ ಚರ್ಚೆಗೆ ಅವಕಾಶ ನೀಡಬೇಕು ಅಥವಾ ಈ ವಿಷಯದಲ್ಲಿನ ಭಿನ್ನಾಭಿಪ್ರಾಯವನ್ನು ಕಡಿಮೆ ಮಾಡಲು ಜನರ ಅನಿಸಿಕೆ ಆಲಿಸಬೇಕೆಂದು ಸರ್ಕಾರವನ್ನು ಸತತವಾಗಿ ಒತ್ತಾಯಿಸುತ್ತಲೇ ಇದೆ.`ದೇಶದಾದ್ಯಂತ ವ್ಯಾಪಕವಾಗಿ ಹಬ್ಬಿರುವ  ಭ್ರಷ್ಟಾಚಾರದ ಬಗ್ಗೆ ಜನರ ಅಭಿಪ್ರಾಯಗಳನ್ನು ವರದಿಗಳು, ಸಮೀಕ್ಷೆ ಹಾಗೂ ಅಧ್ಯಯನಗಳ ಮೂಲಕ ಪ್ರಕಟಿಸಲಾಗುತ್ತಿದೆ. ಇವನ್ನೆಲ್ಲ ಕಡೆಗಣಿಸಲಾಗದು~ ಎಂದು ಬೇಡಿ ಅವರು ತಿಳಿಸಿದರು.ಈ ವಿಷಯದಲ್ಲಿ ತಾವು ರಾಜಕೀಯ ಪಕ್ಷಗಳ ಮಾರ್ಗದರ್ಶನ ಪಡೆಯಬಯಸುವುದಾಗಿ ಸಿಂಗ್ ಹೇಳಿದ್ದಾರೆ. ಪ್ರಧಾನಿ ಕಚೇರಿಯನ್ನು ಮಸೂದೆ ವ್ಯಾಪ್ತಿಯಿಂದ ಹೊರಗಿಡಬೇಕೆಂದು ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ, ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್‌ಸಿಂಗ್ ಬಾದಲ್ ಅಭಿಪ್ರಾಯಪಟ್ಟಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.