ಸೋಮವಾರ, ಜೂನ್ 14, 2021
22 °C

ಅತ್ತೆಯ ಮಗಳನ್ನೇ ಅಪಹರಿಸಿ ಪೊಲೀಸ್ ಅತಿಥಿಯಾದ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಗುಂಡಿ(ಬಾಳೆಹೊನ್ನೂರು):  ಬೇರೊಂದು ಯುವಕನ ಜತೆ ನಿಶ್ಚಿತಾರ್ಥವಾಗಿದ್ದ ಅತ್ತೆಯ ಮಗಳನ್ನು ಅಳಿಯ ಅಪಹರಿಸಿ ಪೊಲೀಸರ ಅತಿಥಿಯಾದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.ಘಟನೆ ವಿವರ: ಕಳಸ ಸಮೀಪದ ಕಲ್ಲುಗೋಡು ನಿವಾಸಿ ರಮ್ಯಾ (ಹೆಸರು ಬದಲಿಸಲಾಗಿದೆ) ಎಂಬುವವರ ಮದುವೆ ಇತ್ತೀಚಿಗೆ ನಿಶ್ಚಯವಾಗಿತ್ತು.

 

ಅದರೆ ಅಕೆಯ ಬಗ್ಗೆ ಒಲವು ಹೊಂದಿದ್ದ ತಾಯಿಯ ಅಣ್ಣನ ಮಗ ಬಾಳೆಹೊನ್ನೂರು ಸಮೀಪದ ಹಿರೇಗದ್ದೆ ತುಪ್ಪೂರಿನ ಅಜಿತ್ ಕೆಲವು ಯುವಕ ರೊಂದಿಗೆ ಸೇರಿ ರಮ್ಯಾಳನ್ನು ಅಪಹರಿಸಿ ಮದುವೆಯಾಗಲು ಸಂಚು ರೂಪಿಸಿದ.ಇದೇ 16ರಂದು ಮಧ್ಯಾಹ್ನ ರಮ್ಯಾ ಆಕೆಯ ಚಿಕ್ಕಮ್ಮ ಶಕುಂತಳಾ ಮತ್ತು ಅವರ ಪುತ್ರಿ ಸಹನಾ ಜತೆ ಮಾಗುಂಡಿ ಮೂಲಕ ಬಸ್‌ನಲ್ಲಿ ಊರಿಗೆ ಹೊರಟಿದ್ದರು. ಆ ಸಂದರ್ಭದಲ್ಲಿ ಬಸ್ ಏರಿದ ಅಜಿತ್ ಮತ್ತು ಅವರ ತಂಡದ ಕೆಲ ಯುವಕರು  ರಮ್ಯಾಳನ್ನು ಬಲವಂತವಾಗಿ ಬಸ್‌ನಿಂದ ಇಳಿಯುವಂತೆ ಒತ್ತಾಯಿಸಿ ಕೈ ಹಿಡಿದು ಎಳೆದಾಡಿದರು ಎನ್ನಲಾಗಿದೆ. ಆ ವೇಳೆಗೆ ಜತೆಯಲ್ಲಿದ್ದ ಶಕುಂತಳಾ ಮತ್ತು ಅವರ ಪುತ್ರಿ ಸಹನಾ ಯುವಕರ ವರ್ತನೆಗೆ ಅಕ್ಷೇಪ ವ್ಯಕ್ತಪಡಿಸಿ ತಡೆಯಲು ಯತ್ನಿಸಿದ್ದಾರೆ.ಇದನ್ನು ಸಹಿಸದ ಯುವಕರು ಅವರಿಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ಆ ವೇಳೆಗೆ ಕೆಎ -18 6526 ನಂಬರಿನ ಮಾರುತಿ ಕಾರನಲ್ಲಿ ಅಲ್ಲಿಗೆ ಬಂದ ಮತ್ತಷ್ಟು ಯುವಕರ ಗುಂಪು ಎಲ್ಲರೂ ನೋಡುತ್ತಿದ್ದಂತೆಯೇ  ರಮ್ಯಾಳನ್ನು ಕಾರ್‌ನಲ್ಲಿ ಬಲವಂತಾಗಿ ಅಪಹರಿಸಿದ್ದರು. ಘಟನೆ ಕುರಿತು ಯುವತಿಯ ಚಿಕ್ಕಮ್ಮ  ಶಕುಂತಳಾ ಬಾಳೆಹೊನ್ನೂರು ಠಾಣೆಗೆ ದೂರು ಸಲ್ಲಿಸಿದ್ದರು.ಯುವತಿಯನ್ನು ಅಪಹರಿಸಿದ ಯುವಕರ ತಂಡ ಅಕೆಗೆ ಪ್ರಾಣ ಬೆದರಿಕೆ ಒಡ್ಡಿ ಮಲ್ಲಂದೂರು  ಸಮೀಪದ ದೇವಸ್ಥಾನದಲ್ಲಿ ಅಜಿತ್‌ನೊಂದಿಗೆ ಮದುವೆ ಮಾಡಿಸಿದ್ದರು. ಇದನ್ನು ಪತ್ತೆ ಹಚ್ಚಿದ ಠಾಣಾಧಿಕಾರಿ ಮಂಜುನಾಥ್ ಮತ್ತು ಅವರ ತಂಡ ಇದೇ 17ರ ಬೆಳಗಿನ ಜಾವ ತುಪ್ಪೂರಿನ ಮನೆಯೊಂದರ ಮೇಲೆ ದಾಳಿ ಮಾಡಿದಾಗ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ.ಬಲತ್ಕಾರವಾಗಿ ಅಜಿತ್ ತಾಳಿಕಟ್ಟಿದ್ದನ್ನು ತನಿಖೆ ವೇಳೆ ಯುವತಿ ಪೊಲೀಸರ ಎದುರು ತಿಳಿಸಿ ಆ ತಾಳಿಯನ್ನು ಕಿತ್ತೆಸೆದಳು ಎನ್ನಲಾಗಿದೆ. ಯುವತಿಯ ಒಬ್ಬನೆ ಸಹೋದರ ಇತ್ತಿಚಿಗೆ ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಕೋಟ್ಯಂತರ  ಬೆಲೆಬಾಳುವ ಆಸ್ತಿ ಲಪಟಾಯಿಸಲು ಅಜಿತ್  ಅಕೆಯನ್ನು ಅಪಹರಿಸಿದ್ದ ಎಂಬ ದೂರು ರಮ್ಯಾ ಪೋಷಕರದ್ದು.ಪ್ರಕರಣದ ಪ್ರಮುಖ ಆರೋಪಿಗಳಾದ ಅಜಿತ್ ತುಪ್ಪೂರು, ಆದರ್ಶ, ಪ್ರದೀಪ್ ಕಿಚ್ಚಬ್ಬಿ, ಮತ್ತು ತುಪ್ಪೂರಿನ ಶಂಕರಪ್ಪಗೌಡ ಎಂಬುವವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ಕೊಳಲೆ ಪ್ರಸನ್ನ, ಬಾಳೆಹೊನ್ನೂರಿನ ಗೌತಮ್, ಅರ್ಚನಾ ತುಪ್ಪೂರು ಮತ್ತು ಇತರೆ ಇಬ್ಬರು ಆರೋಪಿಗಳು ಪರಾರಿಯಾಗಿದ್ದು ಪೊಲೀಸರು ಶೋಧ ಕೈಗೊಂಡಿದ್ದಾರೆ. ಪ್ರಕರಣಕ್ಕೆ ಬಳಸಿದ್ದ ವಾಹನಗಳನ್ನು ವಶಪಡಿಸಿಕೊಳ್ಳಲು ಮುಂದಾಗಿರುವ ಪೊಲೀಸರು  ಮದುವೆಯ ಛಾಯಾಚಿತ್ರ ತೆಗೆದ ಚಿಕ್ಕಮಗಳೂರಿನ ಪೋಟೋಗ್ರಾಪರ್ ಅವರನ್ನು ಸಹ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.