ಬೆಳಗಾವಿ: ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಪ್ರಯೋಗಾಲಯ ಹಾಗೂ ಕ್ಯಾಪ್ಸುಲ್ ಎಂಡೋಸ್ಕೋಪಿ (ಉದರದರ್ಶಕ) ಘಟಕವನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಗುಲಾಮ್ ನಬಿ ಆಜಾದ್ ಶನಿವಾರ ಉದ್ಘಾಟಿಸಿದರು.

ನಂತರ ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ, ರೋಗಿಗಳ ಯೋಗಕ್ಷೇಮ ವಿಚಾರಿಸಿದರು. ಸಣ್ಣ ನಗರದಲ್ಲಿ ಸುಸಜ್ಜಿತ ಹಾಗೂ ಒಂದೇ ಸೂರಿನಲ್ಲಿ ಸಕಲ ಸೌಲಭ್ಯವುಳ್ಳ ಆಸ್ಪತ್ರೆ ಈ ಭಾಗದ ಜನರಿಗೆ ಆರೋಗ್ಯ ಸೇವೆ ನೀಡುತ್ತಿದೆ.

ಸರ್ಕಾರದ ಜೊತೆ ಕೈಜೋಡಿಸಿ ಆರೋಗ್ಯ ಗುಣಮಟ್ಟ ಸುಧಾರಿಸಲು ಅನೇಕ ಕ್ರಮ ಕೈಗೊಂಡಿರುವುದು ಒಳ್ಳೆಯ ಸಂಗತಿ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಆರೋಗ್ಯ ಕ್ಷೇತ್ರ ಸುಧಾರಣೆಗೆ ಮುಂದಾಗಿ ಅಪೌಷ್ಟಿಕತೆ ಮತ್ತು ಗಂಭೀರ ಖಾಯಿಲೆಗಳಿಂದ ತಾಯಿ ಮಕ್ಕಳನ್ನು ದೂರ ಮಾಡಬೇಕು ಎಂದು ಕೋರಿದರು.

ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ಸಂಸದ ಸುರೇಶ ಅಂಗಡಿ, ಸಂಜಯ ಜಸ್ವಾಲ, ಉಪಾಧ್ಯಕ್ಷ ಅಶೋಕಣ್ಣಾ ಬಾಗೇವಾಡಿ, ಬಸವರಾಜ ತಟವಟಿ, ವಿದಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ನಿರ್ದೇಶಕರಾದ ಡಾ. ವಿ.ಐ ಪಾಟೀಲ, ರಾಜಣ್ಣ ಮುನವಳ್ಳಿ, ಎಸ್. ಸಿ. ಮೆಟಗುಡ್, ಡಾ. ವಿ.ಎಸ್. ಸಾಧುನವರ, ಶಂಕರಣ್ಣ ಮುನವಳ್ಳಿ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಂ.ವಿ. ಜಾಲಿ, ವಿಶ್ವವಿದ್ಯಾಲಯದ ಕುಲಸಚಿವ ಪಿ.ಎಫ್. ಕೋಟೂರ, ಎಚ್.ಬಿ. ರಾಜಶೇಖರ ಮತ್ತಿತರರು ಹಾಜರಿದ್ದರು.

ಇದಕ್ಕೂ ಮುನ್ನ ಯಳ್ಳೂರು ರಸ್ತೆಯಲ್ಲಿ ಬೆಳಗಾವಿ ದಕ್ಷಿಣದ ಕೆಎಲ್ಇ ಚಾರಿಟೇಬಲ್ ಆಸ್ಪತ್ರೆಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಗುಲಾಮ್ನಬಿ ಆಜಾದ್ ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ಯುಎಸ್ಎಂ- ಕೆಎಲ್ಇ ಇಂಟರ್ನ್ಯಾಶನಲ್ ಮೆಡಿಕಲ್ ಸ್ಕೂಲ್ ಕಟ್ಟಡ, ಪ್ಯಾಥಾಲಜಿ ಮ್ಯೂಸಿಯಂ ಅನ್ನು ಸಚಿವರು ಉದ್ಘಾಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.