ಶುಕ್ರವಾರ, ಆಗಸ್ಟ್ 7, 2020
23 °C

ಅನಂತಮೂರ್ತಿಗೆ ವೈಕಂ ಮಹಮ್ಮದ್ ಬಷೀರ್ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅನಂತಮೂರ್ತಿಗೆ ವೈಕಂ ಮಹಮ್ಮದ್ ಬಷೀರ್ ಪ್ರಶಸ್ತಿ

ಕೋಯಿಕ್ಕೋಡ್: ಹಿರಿಯ ಸಾಹಿತಿ ಯು.ಆರ್. ಅನಂತಮೂರ್ತಿಯವರನ್ನು 18ನೇ ಬಷೀರ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಗಲ್ಫ್  ಮಲಯಾಳಿಗಳ ಸಾಂಸ್ಕೃತಿಕ ಸಂಘಟನೆ `ಪ್ರವಾಸಿ ದೋಹಾ~ ಸಂಸ್ಥೆ, ಪ್ರಸಿದ್ಧ  ಮಲಯಾಳಂನ ಲೇಖಕ ವೈಕಂ ಮಹಮ್ಮದ್ ಬಷೀರ್ ಅವರ ಹೆಸರಿನಲ್ಲಿ ಈ ಪ್ರಶಸ್ತಿ ನೀಡುತ್ತಿದೆ.ಪ್ರಶಸ್ತಿಯು ರೂ. 50 ಸಾವಿರ ನಗದು ಹಾಗೂ ಸ್ಮರಣ ಫಲಕ ಹಾಗೂ ಪುತ್ಥಳಿಯೊಂದನ್ನು ಒಳಗೊಂಡಿದೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕ ಎಂ.ಟಿ.ವಾಸುದೇವನ್ ನಾಯರ್, ಪ್ರವಾಸಿ ಟ್ರಸ್ಟ್‌ನ ಟ್ರಸ್ಟಿ ಬಾಬು ಮಾಥರ್ ಮತ್ತು ಎಂ.ಎ.ರಹಮಾನ್ ಅವರನ್ನೊಳ ಗೊಂಡ ತೀರ್ಪುಗಾರರ ಸಮಿತಿ ಅನಂತಮೂರ್ತಿಯವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.ಇಂಗ್ಲಿಷ್ ಭಾಷೆಯ ಶಿಕ್ಷಕರಾದರೂ ತಮ್ಮ ಮಾತೃಭಾಷೆ ಕನ್ನಡದಲ್ಲಿ ಸಾಹಿತ್ಯ ರಚಿಸಿರುವ, ವೈಕಂ ಅವರನ್ನು ಇತರ ದೇಶಗಳಲ್ಲಿ ಪರಿಚಯಿಸಿದ ಅನಂತಮೂರ್ತಿ ಪ್ರಶಸ್ತಿಗೆ ಅರ್ಹರು ಎಂದು ಆಯ್ಕೆ ಸಮಿತಿ ಹೇಳಿದೆ.ಅನಂತಮೂರ್ತಿ ಸಂತಸ

ಶಿವಮೊಗ್ಗ ವರದಿ:
`ಈ ಪ್ರಶಸ್ತಿ ನಿಜಕ್ಕೂ ನನಗೆ ಗೌರವ ತಂದುಕೊಟ್ಟಿದೆ. ಬಷೀರ್ ಕೇರಳದ ಮಹತ್ವದ ಕಾದಂಬರಿಕಾರರು; ಅವರ ಹೆಸರಿನಲ್ಲಿ ಪ್ರಶಸ್ತಿ ಬಂದಿರುವುದು ಖುಷಿಯಾಗುತ್ತಿದೆ~ ಎಂದು ಡಾ.ಯು.ಆರ್. ಅನಂತಮೂರ್ತಿ `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.