ಎಚ್.ಡಿ.ಕೋಟೆ: ಕರ್ನಾಟಕ ರಾಜ್ಯದ ಅನಧಿಕೃತ ತಂಬಾಕು ಬೆಳೆದಿರುವ ರೈತರ ತಂಬಾಕನ್ನು ಕೇಂದ್ರ ತಂಬಾಕು ಮಂಡಳಿಯಿಂದ ಖರೀದಿಸಲು ಆದೇಶ ಬಂದಿದೆ ಎಂದು ತಾಲ್ಲೂಕಿನ ಶಾಸಕ ಚಿಕ್ಕಣ್ಣ ತಿಳಿಸಿದರು. ತಾಲ್ಲೂಕು ಪತ್ರಕರ್ತರ ಸಂಘದ ಕಚೇರಿಯಲ್ಲಿ ಗುರುವಾರ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತ ನಾಡಿದ ಅವರು ರಾಜ್ಯದಲ್ಲಿ ಅನಧಿ ಕೃತವಾಗಿ ಹೆಚ್ಚುವರಿ ತಂಬಾ ಕನ್ನು ಬೆಳೆದಿರುವ ರೈತರು ಕಂಗಾ ಲಾಗಿದ್ದು ಹಾಗೂ ತಂಬಾಕಿನ ಬೆಳೆಗೆ ಬೆಲೆ ಇಲ್ಲದೆ ರೈತರು ಆತಂಕಪಡುವ ಸ್ಥಿತಿ ನಿರ್ಮಾಣವಾಗಿದೆ.

ಈ ಹಿನ್ನೆಲೆಯಲ್ಲಿ ಸಂಸದರಾದ ಎಚ್.ವಿಶ್ವ ನಾಥ್ ಮತ್ತು ಆರ್.ಧ್ರುವ ನಾರಾ ಯಣ್ರವರು ಕೇಂದ್ರ ತಂಬಾಕು ಮಂಡಳಿಯ ಸಚಿವರನ್ನು ಭೇಟಿಮಾಡಿ ಸಮಸ್ಯೆಯನ್ನು ವಿವರಿಸಿದ್ದಾರೆ. ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅನಧಿಕೃತ ತಂಬಾಕು ಬೆಳೆಗಾರರಿಗೆ ಪಾಸುಗಳನ್ನು ನೀಡಿ, ಪ್ರತಿ ಕೆ.ಜಿ.ಗೆ 15ರೂ ದಂಡ ವಿಧಿಸಿ ಅಧಿಕೃತ ಬೆಳೆಗಾರರು ಬೆಳೆದಿರುವ ಹೆಚ್ಚುವರಿ ತಂಬಾಕನ್ನು ಖರೀದಿಸಲಾಗುವುದು ಎಂದು ತಿಳಿಸಿದರು.

ತಾಲ್ಲೂಕಿನಲ್ಲಿ ಸಾವಿರಾರು ರೈತರು ತಂಬಾಕನ್ನು ಬೆಳೆದಿದ್ದು, ಮಾರಾಟಮಾಡಲು ಸಾಧ್ಯವಿಲ್ಲದೆ ಆತಂಕದಲ್ಲಿದ್ದರು ಹಾಗೂ ಹೆಚ್ಚುವರಿ ತಂಬಾಕನ್ನು ಬೆಳೆದಿರುವ ರೈತರ ಅನುಕೂಲಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಂತಸ ವ್ಯಕ್ತಪಡಸಿದರು. ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ರಾತ್ರಿ 9ರವರಗೆ ಸಂಚಾರಕ್ಕೆ ಮುಕ್ತ ಅವಕಾಶ ನೀಡಿದ್ದು, ಇದೂ ಒಂದು ರಾಷ್ಟ್ರೀಯ ಉದ್ಯಾನವನವಾಗಿದ್ದು ಇಲ್ಲಿಯೂ ಸಂಜೆ 6ರ ಬದಲು ರಾತ್ರಿ 9ಗಂಟೆಯವರಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದರು.

ಮಾರ್ಚ್ ತಿಂಗಳೊಳಗಾಗಿ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳ ದಿದ್ದರೆ ಏಪ್ರಿಲ್ ತಿಂಗಳಿನಲ್ಲಿ ಶಾಸಕರ ನೇತೃತ್ವದಲ್ಲಿ ರಸ್ತೆ ತಡೆ ಮಾಡಿ ಪ್ರತಿಭಟನೆ ಮಾಡಲಾಗುವುದು ಎಂದು ಕೆ.ಪಿ.ಸಿ.ಸಿ. ಸದಸ್ಯ ಡಿ. ಸುಂದರದಾಸ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ. ಸದಸ್ಯ ಎಚ್.ಸಿ. ಮಂಜುನಾಥ್, ಸರಗೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಲಯ್ಯ, ತಮ್ಮಣ್ಣೇಗೌಡ, ಜಕ್ಕಳ್ಳಿ ಮಹದೇವಪ್ಪ, ತಾಲ್ಲೂಕು ನಾಯಕ ಸಂಘದ ಅಧ್ಯಕ್ಷ ಶಂಭುಲಿಂಗನಾಯಕ, ಲಯನ್ಸ್ ಕ್ಲಬ್ ಅಧ್ಯಕ್ಷ ಎಂ.ಕೆ. ಹರಿದಾಸ್, ತಾ.ಪಂ. ಸದಸ್ಯ ಸುಂದರ ನಾಯಕ, ಚಾಕಹಳ್ಳಿಕೃಷ್ಣ, ಸಫಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.