ಶನಿವಾರ, ಜನವರಿ 25, 2020
16 °C

ಅನಿಲ ಸಾಗಣೆ: ಏಕರೂಪ ಶುಲ್ಕಕ್ಕೆ ಸಮ್ಮತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ):  ತುರ್ಕ್‌ಮೇನಿಸ್ತಾನದಿಂದ ಉದ್ದೇಶಿತ ಕೊಳವೆ ಮಾರ್ಗದ ಮೂಲಕ ನೈಸರ್ಗಿಕ ಅನಿಲ ಪೂರೈಸುವಲ್ಲಿ ಏಕರೂಪದ ಸಾಗಾಣಿಕಾ ಶುಲ್ಕ ವಿಧಿಸಲು ಭಾರತ ಮತ್ತು ಪಾಕಿಸ್ತಾನ ಔಪಚಾರಿಕ ಸಮ್ಮತಿ ಸೂಚಿಸಿವೆ.



ಈ ಹಿನ್ನೆಲೆಯಲ್ಲಿ, ಭಾರತ ಪ್ರತಿದಿನ ಪಡೆಯಲಿರುವ ತನ್ನ ಪಾಲಿನ 38 ದಶಲಕ್ಷ ಕ್ಯುಬಿಕ್ ಮೀಟರ್‌ನಷ್ಟು ಅನಿಲಕ್ಕಾಗಿ ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನಕ್ಕೆ ಸಾಗಾಣಿಕೆಯ ಶುಲ್ಕವನ್ನು ನೀಡಲಿದೆ.

ಪ್ರತಿಕ್ರಿಯಿಸಿ (+)