ಚಾಮರಾಜನಗರ: ಶಿಕ್ಷಣ ಕಾಯ್ದೆ 1983ರ ನಿಯಮ 31ರ ಅನ್ವಯ ಶಾಶ್ವತ ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆ ತೆರೆಯಲು ಅವಕಾಶ ಕಲ್ಪಿಸಲಾಗಿದ್ದು, ಆಸಕ್ತರು ಹೊಸ ಶಾಲೆ ತೆರೆಯುವ ಸಂಬಂಧ ಪ್ರಸ್ತಾವ ಸಲ್ಲಿಸಲು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಕೋರಿದೆ.

ಕ್ಷೇತ್ರ ಶಿಕ್ಷಣಾಧಿಕಾರಿ ಮೂಲಕ ಪ್ರಸ್ತಾವ ಸಲ್ಲಿಸಬೇಕಿದೆ. ನೋಂದಣಿ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಲು ಅ. 30 ಕೊನೆಯ ದಿನವಾಗಿದೆ. ನ. 15ರೊಳಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಡಿಡಿಪಿಐ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಡಿ. 31ರಂದು ಜಿಲ್ಲಾ ಪರಿಶೀಲನಾ ಸಮಿತಿಯಿಂದ ಸ್ಥಳದ ಪರಿಶೀಲನೆ ನಡೆಯಲಿದೆ.

2012ರ ಜ. 31ರಂದು ಡಿಡಿಪಿಐ ಕಚೇರಿಯಿಂದ ಶಿಕ್ಷಣ ಇಲಾಖೆಯ ಆಯುಕ್ತರು ಮತ್ತು ನಿರ್ದೇಶಕರಿಗೆ ಪ್ರಸ್ತಾವ ಕಳುಹಿಸಲಾಗುತ್ತದೆ. ಮಾರ್ಚ್ 31ರಂದು ಆಯುಕ್ತರ ಮಂಜೂರಾತಿ ಅಥವಾ ತಿರಸ್ಕೃತ ಆದೇಶ ನೀಡುವ ಅವಧಿ ನಿಗದಿಯಾಗಿದೆ.

ಹೊಸ ಪ್ರೌಢಶಾಲೆ ಪ್ರಾರಂಭಿಸಲು ಅನುಮತಿ ಪಡೆದ ನಂತರ ಪ್ರಥಮ ಮಾನ್ಯತೆಗೆ ಮನವಿ ಸಲ್ಲಿಸಲು ಆ. 31 ಅಂತಿಮ ದಿನವಾಗಿದೆ. ಡಿ. 31ರಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಪ್ರಥಮ ಮಾನ್ಯತೆ ನೀಡಲಿದ್ದಾರೆ. ಹೆಚ್ಚಿನ ಮಾಹಿತಿಗೆ ಡಿಡಿಪಿಐ ಕಚೇರಿ ಅಥವಾ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.