ಮಡಿಕೇರಿ: ಅಕ್ಷರ ದಾಸೋಹ ಕಾರ್ಯಕ್ರಮಕ್ಕೆ 2012-13ನೇ ಸಾಲಿನಲ್ಲಿ ಲಿಂಕ್ ಡಾಕ್ಯುಮೆಂಟ್ನಡಿ ನಿಗದಿಪಡಿಸಲಾಗಿದ್ದ ರೂ. 435 ಲಕ್ಷ ಅನುದಾನಕ್ಕಿಂತ ಹೆಚ್ಚುವರಿಯಾಗಿ ರೂ. 451.6 ಲಕ್ಷ ಅನುದಾನ ಬಳಕೆ ಮಾಡಲಾಗಿದ್ದು, ಈ ಬಗ್ಗೆ ಸಮಗ್ರ ಮಾಹಿತಿ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಬಿ.ಶಿವಪ್ಪ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ನಗರದ ತಾಲ್ಲೂಕು ಪಂಚಾಯಿತಿ ಕಚೇರಿ ಬಳಿಯ ಎಸ್ಜೆಎಸ್ವೈ ಸಭಾಂಗ ಣದಲ್ಲಿ ಸೋಮವಾರ ನಡೆದ ಜಿಲ್ಲಾ ಪಂಚಾಯಿತಿ ವಿಶೇಷ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸದಸ್ಯರಾದ ಬಾಂಡ್ ಗಣಪತಿ ಮಾತನಾಡಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಗಮನಕ್ಕೆ ತರದೆ ಹೆಚ್ಚುವರಿಯಾಗಿ ಅನುದಾನ ಬಳಕೆ ಮಾಡಿರುವುದಾದರೂ ಏಕೆ ಎಂದು ಪ್ರಶ್ನಿಸಿದರು.

ಶಾಂತೆಯಂಡ ರವಿಕುಶಾಲಪ್ಪ ಮಾತನಾಡಿ, ಸ್ಥಾಯಿ ಸಮಿತಿ ಗಮನಕ್ಕೆ ತರದೆ ಕಾರ್ಯಕ್ರಮ ರೂಪಿಸಿರುವುದು ಸರಿಯಲ್ಲ. ಈ ಬಗ್ಗೆ ನಿಖರ ಮಾಹಿತಿ ಒದಗಿಸಬೇಕು. ಸಂಶಯಕ್ಕೆ ಆಸ್ಪದ ಮಾಡಿಕೊಡದೆ ಸಮರ್ಪಕ ಪಟ್ಟಿ ಒದಗಿಸುವಂತೆ ಅವರು ಕೋರಿದರು. ಸದಸ್ಯರಾದ ವೆಂಕಟೇಶ್ ಅವರು ಮಾತನಾಡಿ, ಅಕ್ಷರ ದಾಸೋಹ ಕಾರ್ಯಕ್ರಮದಡಿ 2012-13ನೇ ಸಾಲಿನಲ್ಲಿ ರೂಪಿಸಲಾಗಿರುವ ಕಾರ್ಯ ಕ್ರಮಗಳು ಮೇಲ್ನೋಟಕ್ಕೆ ದುರುಪ ಯೋಗವಾಗಿದೆ ಎಂದು ಕಂಡು ಬರುತ್ತಿದ್ದು, ಈ ಬಗ್ಗೆ ಸಮಗ್ರ ಮಾಹಿತಿ ಒದಗಿಸುವಂತೆ ಅವರು ಆಗ್ರಹಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಬಿ.ಹೆಚ್. ಬಸವರಾಜು ಮಾತನಾಡಿ, 2012-13ನೇ ಸಾಲಿನಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮಕ್ಕೆ ಲಿಂಕ್ ಡಾಕ್ಯುಮೆಂಟ್ ಅಡಿ 435 ಲಕ್ಷ ರೂಪಾಯಿ ನಿಗಧಿಪಡಿಸಲಾಗಿದ್ದ ಅನುದಾನ ಕೊರತೆಯಾಗಿತ್ತು. ಅಡುಗೆ ಅನಿಲ ಬೆಲೆ ಹೆಚ್ಚಳ, ಅಕ್ಷರ ದಾಸೋಹ ಅಡುಗೆ ಕೋಣೆ ನಿರ್ಮಾಣ, ಅಡುಗೆ ಸಿಬ್ಬಂದಿಗಳ ವೇತನ ಮತ್ತಿತರ ಕಾರ್ಯ ಕ್ರಮಗಳಿಗೆ ಲಿಂಕ್ ಡಾಕ್ಯುಮೆಂಟ್ ಅಡಿ ಅನುದಾನಕ್ಕೆ ಸೇರ್ಪಡೆ ಮಾಡಿರಲಿಲ್ಲ ಎಂದು ಅವರು ಮಾಹಿತಿ ನೀಡಿದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಬಿ.ಅಂಜನಪ್ಪ, ಶಿಕ್ಷಣಾಧಿಕಾರಿ ಕೆ.ವಿ.ಸುರೇಶ್ ಈ ಕುರಿತು ಹಲವು ಮಾಹಿತಿ ನೀಡಿದರು. ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಇದ್ದು, ಈ ಸಭೆಯಲ್ಲಿ ಕೂಲಂಕಷವಾಗಿ ಚರ್ಚಿಸದೆ ವಿಶೇಷ ಸಾಮಾನ್ಯ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸುತ್ತಿರುವುದಕ್ಕೆ ಕೆಲಸದಸ್ಯರು ಅಪಸ್ವರ ವ್ಯಕ್ತಪಡಿಸಿದರು.

ಕ್ರೀಡಾ ಇಲಾಖೆ ಚರ್ಚೆ: ರಾಜ್ಯ ಮಟ್ಟದ ಕೆಸರು ಗದ್ದೆ ನಾಟಿ ಓಟ, ತಾಲ್ಲೂಕು, ಜಿಲ್ಲಾ, ವಿಭಾಗ, ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ, ಜಿಲ್ಲಾ ಮಟ್ಟದ ಮಹಿಳಾ ಕ್ರೀಡಾಕೂಟ, ಕ್ರೀಡಾ ನಿಲಯಗಳ ನಿರ್ವಹಣೆ ಹೀಗೆ ನಾನಾ ಅಭಿವೃದ್ಧಿ ಕಾರ್ಯಗಳಿಗೆ 2012- 13ರಲ್ಲಿ ಸುಮಾರು 30 ಲಕ್ಷ ರೂಪಾಯಿ ಅನುದಾನ ನಿಗದಿಪಡಿಸಿದ್ದು, ಅದರಲ್ಲಿ 29ಲಕ್ಷ ರೂ. ಬಳಕೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿರುವುದು ನಿಜವಲ್ಲ. ಈ ಅನುದಾನ ಸಮರ್ಪಕವಾಗಿ ತಲುಪಿಲ್ಲ ಎಂದು ಸದಸ್ಯರಾದ ಶರೀನ್ ಸುಬ್ಬಯ್ಯ, ಬಾಂಡ್ ಗಣಪತಿ, ಬಿ.ಬಿ.ಭಾರತೀಶ್, ವೆಂಕಟೇಶ್ ಮತ್ತಿತರರು ದೂರಿದರು.

ಪೊನ್ನಂಪೇಟೆಯ ಕ್ರೀಡಾ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮೆನು ಪ್ರಕಾರ ಆಹಾರ ನೀಡುತ್ತಿಲ್ಲ. ವಸತಿ ಶಾಲೆ ಮೇಲ್ಛಾವಣಿ ಸೋರುತ್ತಿದ್ದು, ಕುಸಿಯುವ ಹಂತದಲ್ಲಿದೆ. 15 ದಿನದೊ ಳಗೆ ದುರಸ್ತಿಪಡಿಸಬೇಕು ಎಂದು ಸದಸ್ಯ ರಾದ ಬಾಂಡ್ ಗಣಪತಿ ಮತ್ತು ಶರೀನ್ ಸುಬ್ಬಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಬಿ.ಅಂಜನಪ್ಪ ಅವರು ಮಾತನಾಡಿ ಪೊನ್ನಂಪೇಟೆ ಕ್ರೀಡಾ ವಸತಿ ಶಾಲೆ ಜಿಲ್ಲಾ ಪಂಚಾಯಿತಿಯ ಅನುದಾನದಿಂದ ನಡೆಯುತ್ತಿದ್ದು, ಈ ಶಾಲೆಯನ್ನು ಕ್ರೀಡಾ ಇಲಾಖಾ ವ್ಯಾಪ್ತಿಗೆ ತಂದರೆ ಹೆಚ್ಚಿನ ಅನುದಾನ ಸರ್ಕಾರದಿಂದ ದೊರೆಯಲಿದೆ ಎಂದು ತಿಳಿಸಿದರು.

ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ನಾಲ್ಕು ದಿನದೊಳಗೆ ಸ್ಥಾಯಿ ಸಮಿತಿಯಲ್ಲಿ ಚರ್ಚಿಸಿ ಎಲ್ಲ ಸದಸ್ಯರಿಗೂ ಸಮರ್ಪಕ ಮಾಹಿತಿ ಒದಗಿಸುವಂತೆ ರವಿ ಕುಶಾಲಪ್ಪ ಅವರು ಒತ್ತಾಯಿಸಿದರು. ಅಕ್ಷರ ದಾಸೋಹ, ತಾಳೆ ಬೆಳೆ ಮತ್ತಿತರ ನಾನಾ ಅಕ್ರಮಗಳನ್ನು ಮುಚ್ಚಿಹಾಕಲು ಅಧಿಕಾರಿಗಳು ತಲ್ಲೆನ ರಾಗಿದ್ದಾರೆ ಎಂದು ಬಿ.ಬಿ.ಭಾರತೀಶ್ ಅವರು ಆರೋಪಿಸಿದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಬಿ.ಅಂಜನಪ್ಪ ಅವರು ಕ್ರೀಡಾ ಇಲಾಖೆಯಲ್ಲಿನ ಕಾರ್ಯಕ್ರಮಗಳ ವಿವರಗಳನ್ನು ಪರಿಶೀಲಿಸಿ, 2-3 ದಿನಗಳಲ್ಲಿ ಮಾಹಿತಿ ಒದಗಿಸಲಾಗು ವುದು ಎಂದು ಅವರು ತಿಳಿಸಿದರು. ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ (ಪ್ರಭಾರ) ಜಿ.ಗಾಯತ್ರಿ ಅವರು ಕ್ರೀಡಾ ಇಲಾಖೆಯ ಕಾರ್ಯಕ್ರಮಗಳ ಪ್ರಗತಿ ಬಗ್ಗೆ ಮಾಹಿತಿ ನೀಡಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿಯೂ 2012-13ನೇ ಸಾಲಿನಲ್ಲಿ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಜಿ.ಪಂ. ಸದಸ್ಯರ ಗಮನಕ್ಕೆ ಬರದೆ ಆಸ್ಪತ್ರೆಗಳಲ್ಲಿ ದುರಸ್ತಿ ಮತ್ತು ನಿರ್ವಹಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ ಎಂದು ಶರೀನ್ ಸುಬ್ಬಯ್ಯ, ಕಾಂತಿ ಬೆಳ್ಯಪ್ಪ, ಪ್ರಥ್ಯು ಆರೋಪಿಸಿದರು.

ಆಸ್ಪತ್ರೆಗಳ ಕಟ್ಟಡ ನಿರ್ವಹಣೆ, ಸಮುದಾಯ ಆರೋಗ್ಯ ಕೇಂದ್ರ ಅಂಬುಲೆನ್ಸ್ ಸೇವೆ, ಕ್ಷ-ಕಿರಣ ಯಂತ್ರಗಳ ದುರಸ್ತಿ, ಹಲವು ಆಸ್ಪತ್ರೆಗಳ ಉಪಕರಣ ಮತ್ತು ಸಲಕರಣೆಗಳ ದುರಸ್ತಿ ಮತಿತರಕ್ಕಾಗಿ ಅನುದಾನ ಬಳಕೆ ಮಾಡಲಾಗಿದೆ. ಹಾಗೆಯೇ ಆಸ್ಪತ್ರೆಗಳ ನಿರ್ವಹಣೆಗಾಗಿ 30ಲಕ್ಷ ರೂಪಾಯಿಯಷ್ಟು ವೆಚ್ಚ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಎಚ್. ಎಸ್. ಶಿವಕುಮಾರ್ ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.