ಚಿತ್ರದುರ್ಗ: ದೇವತಾ ಪೂಜೆ, ಮದುವೆ, ಗೃಹಪ್ರವೇಶ ಸೇರಿದಂತೆ ಅನೇಕ ಶುಭ ಸಮಾರಂಭಗಳಲ್ಲಿ ಎಲೆಯ ಮೇಲೆ ಊಟ ಬಿಡುವುದನ್ನೇ ಕೆಲವರು ಪ್ರತಿಷ್ಠೆ ಎಂಬುದಾಗಿ ಭಾವಿಸಿದ್ದಾರೆ. ಈ ಧೋರಣೆ ಬದಲಾಗಬೇಕು ಎಂದು ಜಗಳೂರು ತಾಲ್ಲೂಕಿನ ಕಣ್ವಕುಪ್ಪೆ ಗವಿಮಠದ ಪೀಠಾಧ್ಯಕ್ಷ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.

ನಗರದ ಜೋಗಿಮಟ್ಟಿ ರಸ್ತೆಯ ಅನ್ನಪೂರ್ಣೇಶ್ವರಿ ನಗರದ ಅನ್ನಪೂರ್ಣೇಶ್ವರಿ ಆಶ್ರಮದಲ್ಲಿ ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಲೋಕಕಲ್ಯಾಣಕ್ಕಾಗಿ ಗುರುವಾರ ಹಮ್ಮಿಕೊಂಡಿದ್ದ ಹೋಮ ಹವನ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.

ದೇಶದಲ್ಲಿ ಲಕ್ಷ್ಯಾಂತರ ಮಂದಿ ಅನ್ನ, ಆಹಾರ ಸಿಗದೆ ಹಸಿವಿನಿಂದ ನರಳಿ ಸಾವನ್ನಪ್ಪುತ್ತಿದ್ದಾರೆ. ಆದರೆ, ಇದ್ದಂತವರು ನೀಡಿಸಿಕೊಂಡ ಅನ್ನವನ್ನೇ ಬಿಡುವ ಮೂಲಕ ದುರಹಂಕಾರದಿಂದ ನಡೆದುಕೊಳ್ಳುತ್ತಿದ್ದಾರೆ. ಅನ್ನವನ್ನು ಗೌರವದಿಂದ ಕಾಣದಿದ್ದರೆ, ಜನ್ಮಗಳು ಕಳೆದರೂ ಅನ್ನಕ್ಕಾಗಿ ಪರಿತಪಿಸುತ್ತಾ ಅಲೆಯಬೇಕಾಗುತ್ತದೆ. ನಿಮಗೆಷ್ಟು ಬೇಕೋ ಅಷ್ಟನ್ನು ಮಾತ್ರ ಸೇವಿಸಿ. ಉಳಿದದ್ದನ್ನು ಬಡವರಿಗೆ ದಾನ ಮಾಡಿ. ರೈತ ಕಷ್ಟಪಟ್ಟು ಬೆವರು ಸುರಿಸಿ ಬೆಳೆದ ಒಂದೊಂದು ಅಕ್ಕಿ ಕಾಳಿನ ಮಹತ್ವ ಅರಿತು ಪ್ರಜ್ಞಾವಂತರಾಗಿ ನಡೆದುಕೊಳ್ಳಿ ಎಂದು ಸಲಹೆ ನೀಡಿದರು.

ಕಬೀರಾನಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆಧ್ಯಾತ್ಮ ವಿಜ್ಞಾನಕ್ಕೆ ಹತ್ತಿರವಿದೆ. ಮಾನವ ತನ್ನನ್ನು ತಾನು ಆತ್ಮಾವಲೋಕನ ಮಾಡಿಕೊಳ್ಳುವುದೇ ಅಧ್ಯಾತ್ಮ. ಜೀವನದಲ್ಲಿ ಪಕ್ವತೆ ಇದ್ದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು ಎಂದರು.

‘ಸೇವೆಗೆ ಖಾವಿ ಧರಿಸಬೇಕಾಗಿಲ್ಲ’

ಸೇವೆ ಮಾಡಲು ಖಾವಿ ಧರಿಸ ಬೇಕಾಗಿಲ್ಲ ಎಂಬುದಕ್ಕೆ
ಅನ್ನಪೂರ್ಣೇಶ್ವರಿ ಆಶ್ರಮ ನಡೆಸುತ್ತಿ ರುವವರು ಸಾಕ್ಷಿಯಾಗಿದ್ದಾರೆ.
ಇಲ್ಲಿ ಸುಮಾರು ₨ 8 ಕೋಟಿ ವೆಚ್ಚದಲ್ಲಿ ಕಾಮಗಾರಿ
ಕೈಗೊಳ್ಳಲು ಯೋಜನೆ ಸಿದ್ಧಪಡಿಸಲಾಗಿದೆ.
ಭಕ್ತರು ಕೂಡ ಧನ ಸಹಾಯ ಮಾಡಲು ಮುಂದಾಗಬೇಕು.
– ಕೆ.ಎಸ್.ಅರುಣ್ಕುಮಾರ್, ಬ್ರಾಹ್ಮಣ ಸಂಘದ ಅಧ್ಯಕ್ಷ

ಹೊಯ್ಸಳ ನಾಗರಾಜ್ ಪ್ರಾಸ್ತಾವಿಕ ವಾಗಿ ಮಾತನಾಡಿ, ಆಶ್ರಮದ ಆವರಣದಲ್ಲಿ ಅನ್ನಪೂರ್ಣೇಶ್ವರಿ, ರಾಜರಾಜೇಶ್ವರಿ, ಶಾರದದೇವಿ ಸೇರಿ ತ್ರಿಶಕ್ತಿ ದೇವತೆಗಳ ದೇಗುಲ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದರು.

ಬ್ರಾಹ್ಮಣ ಸಂಘದ ಅಧ್ಯಕ್ಷ ಕೆ.ಎಸ್.ಅರುಣ್ಕುಮಾರ್, ಶಿಕ್ಷಕ ತಿಮ್ಮರಾಯ ಭಟ್, ವಿನಾಯಕ ಜೋಷಿ ಇತರರು ಇದ್ದರು. ಬಸವಪ್ರಭು ಪ್ರಾರ್ಥಿಸಿದರು. ಶಾಂತಕುಮಾರಿ ಸ್ವಾಗತಿಸಿದರು. ಚಿದಾನಂದಬಾಬು ಕಾರ್ಯಕ್ರಮ ನಿರೂಪಿಸಿದರು.

ಲೋಕಕಲ್ಯಾಣಕ್ಕಾಗಿ ಪೂಜೆ
ಪ್ರಾಯಶ್ಚಿತ ಪೂರ್ವಾಂಗಗಳು, ಮೇಧಾದಕ್ಷಿಣಮೂರ್ತಿ ಮೂಲ ಶಕ್ತಿಗಣಪತಿ ಹೋಮ, ನವಗ್ರಹ ಹೋಮ, ಶೂಲಿನೀವನ ದುರ್ಗಾ ಪರಿಶ್ಚರಣಾಂಗ ಜಪಾದಿಗಳು, ಸೂಕ್ತ ಪುರುಷಸೂಕ್ತ ಹೋಮ, ಉದಕಶಾಂತಿ, ವೇದಪಾರಾಯಣ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.