ಶನಿವಾರ, ಏಪ್ರಿಲ್ 17, 2021
31 °C

ಅಪಘಾತ: ಮೂವರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನರಾಯಪಟ್ಟಣ: ಮದುವೆ ಸಮಾರಂಭಕ್ಕೆ ತೆರಳುತ್ತಿದ್ದ ಕ್ವಾಲಿಸ್ ವಾಹನ ರಸ್ತೆ ಪಕ್ಕಕ್ಕೆ ಉರುಳಿ ಇಬ್ಬರು ಪೊಲೀಸ್ ಕಾನ್‌ಸ್ಟೆಬಲ್‌ಗಳು ಸೇರಿದಂತೆ ಮೂವರು ಮೃತಪಟ್ಟು, ಮೂವರು ಗಾಯಗೊಂಡ ಘಟನೆ ತಾಲ್ಲೂಕಿನ  ಕಟ್ಟಿಗೆಹಳ್ಳಿ ಗೇಟ್ ಬಳಿ ಶನಿವಾರ ತಡರಾತ್ರಿ ನಡೆದಿದೆ.ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣೆಯ ಅಶೋಕ್ (30) ಮತ್ತು ಮಹದೇವಸ್ವಾಮಿ (30) ಹಾಗೂ ಚರಣ್ (4) ಮೃತಪಟ್ಟವರು.ಅಶೋಕ್ ಹಾಗೂ ಮಹದೇವಸ್ವಾಮಿ ಚಿಕಿತ್ಸೆಗಾಗಿ ಬೆಳ್ಳೂರಿನ ಆದಿಚುಂಚನಗಿರಿ ಆಸ್ಪತ್ರೆಗೆ ಸಾಗಿಸುವ  ಮಾರ್ಗಮಧ್ಯೆ ಮೃತಪಟ್ಟರೆ,  ಚರಣ್ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಿಗ್ಗೆ ಮೃತಪಟ್ಟಿದ್ದಾನೆ.ಗಾಯಗೊಂಡಿರುವ ಕಾನ್‌ಸ್ಟೆಬಲ್‌ಗಳಾದ ಅಶ್ವತ್ಥ್‌ನಾರಾಯಣ್, ಸುರೇಶ್, ವಾಹನ ಚಾಲಕನಾದ  ಶರಣಪ್ಪ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ತಾಲ್ಲೂಕಿನ ದಾಸಾಪುರದ ಚಂದ್ರಶೇಖರ್ ಬೆಂಗಳೂರಿನ ಮಹದೇವಪುರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ವಿವಾಹ  ಭಾನುವಾರ ಪಟ್ಟಣದಲ್ಲಿ ನಿಗದಿಯಾಗಿತ್ತು. ಅದರಲ್ಲಿ ಪಾಲ್ಗೊಳ್ಳಲು ಇವರೆಲ್ಲ ಬೆಂಗಳೂರಿನಿಂದ ಬರುತ್ತಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.