ರಾಜರಾಜೇಶ್ವರಿನಗರ: ನಗರದಲ್ಲಿ ಬಡಾವಣೆಗಳ ನಿರ್ಮಾಣ ಯಾವುದೇ ಎಗ್ಗಿಲ್ಲದೆ ಮುಂದುವರಿದಿದ್ದು ಇದರಿಂದ ಹೊಸಕೆರೆಹಳ್ಳಿ ಕೆರೆ ಅಪಾಯ ಎದುರಿಸುತ್ತಿದೆ.

ಇಪ್ಪತ್ತು ವರ್ಷಗಳ ಹಿಂದೆ ಹಲವಾರು ಬಡಾವಣೆಗಳ ಜನರಿಗೆ ಈ ಕೆರೆಯ ನೀರೇ ಜೀವಜಲವಾಗಿತ್ತು. ಹೊಸಕೆರೆಹಳ್ಳಿ, ಬಂಗಾರಪ್ಪನಗರ, ವೀರಣ್ಣನಗುಡ್ಡೆ, ಅರಹಳ್ಳಿ ಹಿಂದೆ ಹಳ್ಳಿಗಳಾಗಿದ್ದವು. ಅಲ್ಲಿನ ಜನರು ಕುಡಿಯುವ ನೀರು, ವ್ಯವಸಾಯ, ಮತ್ತಿತರ ಚಟುವಟಿಕೆಗಳಿಗೆ ಈ ಕೆರೆ ನೀರನ್ನೇ ಬಳಸುತ್ತಿದ್ದರು.

ಹೊಸಕೆರೆ ಸುತ್ತಲಿನ ಪ್ರದೇಶ ನಗರೀಕರಣದ ಪ್ರಭಾವಕ್ಕೆ ಸಿಕ್ಕಿದ್ದರಿಂದ ಅಲ್ಲಿನ ಬಡಾವಣೆಗಳ ಕೊಳಚೆ ನೀರು ಇದೇ ಕೆರೆಯನ್ನು ಹುಡುಕಿಕೊಂಡು ಬಂದಿತು. ಇದರಿಂದ ಕೆರೆ ದುರ್ನಾತ ಬೀರುತ್ತಿದ್ದು, ಸೊಳ್ಳೆಗಳ ಉತ್ಪಾದನಾ ಕೇಂದ್ರವೂ ಆಗಿ ಪರಿಣಮಿಸಿದೆ.

ರಾಘವೇಂದ್ರ ಬಡಾವಣೆ, ದತ್ತಾತ್ರೇಯ ಬಡಾವಣೆ, ಬನಶಂಕರಿ 3ನೇ ಹಂತ, ದ್ವಾರಕರಾನಗರ, ಹೃಷಿಕೇಶನಗರ, ರಾಮಯ್ಯ ಬಡಾವಣೆ ನಿರ್ಮಾಣವಾದ ನಂತರ ರಾಜಕಾಲುವೆಗಳು ಕಣ್ಮರೆಯಾಗಿ, ಮಳೆ ನೀರು ಹರಿದು ಬರದೆ ಒಳಚರಂಡಿ ನೀರು ಮಾತ್ರ ಕೆರೆಗೆ ಸೇರುತ್ತಿದೆ.

ಕರ್ನಾಟಕ ಅರಣ್ಯ ಇಲಾಖೆ ಹಾಕಿರುವ ನಾಮಫಲಕದ ಪ್ರಕಾರ ಕೆರೆ 59 ಎಕರೆ 26 ಗಂಟೆ ವಿಸ್ತೀರ್ಣವಿದೆ. ಕೆರೆಯಲ್ಲಿ ಈಜುವುದು, ಕೆರೆ ಒತ್ತುವರಿ ಮಾಡುವುದು, ತ್ಯಾಜ್ಯ ಹಾಕುವುದು, ನೀರನ್ನು ಮಲಿನಗೊಳಿಸುವುದು, ವನ್ಯಜೀವಿ ಬೇಟೆ ಆಡುವುದು ಅರಣ್ಯ ಕಾನೂನಿನನ್ವಯ ಶಿಕ್ಷಾರ್ಹ ಅಪರಾಧ ಎಂದು ಫಲಕದಲ್ಲಿ ಬರೆಯಲಾಗಿದೆ. ಆದರೆ ಕೆರೆಯಲ್ಲಿ ಶುದ್ಧ ನೀರೇ ಇಲ್ಲ. ವನ್ಯಪ್ರಾಣಿಗಳ ಸುಳಿವೂ ಇಲ್ಲ. ಕೆರೆ ಒತ್ತುವರಿ ಮಾತ್ರ ನಿಂತಿಲ್ಲ. ದಿನದಿಂದ ದಿನಕ್ಕೆ ಕೆರೆ ಪಾತ್ರ ಕರುಗುತ್ತಲೇ ಇದೆ.

ಕೆರೆಗೆ ನಿತ್ಯ ಹಲವರು ತ್ಯಾಜ್ಯ ತಂದು ಸುರಿಯುತ್ತಿದ್ದರೂ ಬಿಬಿಎಂಪಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕೆರೆಯ ತುಂಬಾ ಜೊಂಡು, ವಿಷಯುಕ್ತ ನೀರು ತುಂಬಿದ್ದು, ದಡದಲ್ಲಿ ತ್ಯಾಜ್ಯದ ರಾಶಿಯೇ ಬಿದ್ದಿದೆ.

‘ಹಸಿರು ಮೇಲೆ ಕಂಡರೂ ಕೋಡಿಯಲ್ಲಿ ಹೊರಬರುವ ಕೊಳಕು ಕಾರ್ಕೋಟಕ ವಿಷಕ್ಕಿಂತ ಕಡಿಮೆ ಇಲ್ಲ. ಕೆರೆಯ ಸುತ್ತ ಬದುಕುತ್ತಿರುವ ನಮ್ಮ ಸ್ಥಿತಿ ಶೋಚನೀಯ. ಮೂಗು ಮುಚ್ಚಿಕೊಂಡೇ ಓಡಾಟ ಮಾಡಬೇಕಾದ ಪರಿಸ್ಥಿತಿ ಇದೆ’ ಎಂದು ಕೆರೆ ಅಕ್ಕಪಕ್ಕದ ಜನ ಹೇಳುತ್ತಾರೆ.

ಹೆಸರು ಹೇಳಲಿಚ್ಛಿಸದ ನಿವಾಸಿಯೊಬ್ಬರು, ‘ಎಲ್ಲಾ ರಾಜಕೀಯ ಪಕ್ಷಗಳ ಕೆಲವು ಮುಖಂಡರು, ಅಧಿಕಾರಿಗಳು ಬೇನಾಮಿ ಹೆಸರಿನಲ್ಲಿ ಬಡಾವಣೆಗಳನ್ನು ನಿರ್ಮಿಸಿ ಕೆರೆಗೆ ಹರಿದು ಬರುತ್ತಿದ್ದ ಮೂಲ ನೀರು ಬರದಂತೆ ಮಾಡಿ ರಾಜಕಾಲುವೆಗಳನ್ನು ಮುಚ್ಚಿಹಾಕಿದ್ದಾರೆ. ಕೆರೆಯ ಸುತ್ತಲ ಬೆಟ್ಟಗುಡ್ಡಗಳನ್ನು ನಾಶ ಮಾಡಿ ಶಿಕ್ಷಣ ಸಂಸ್ಥೆ, ಉದ್ದಿಮೆ ಸ್ಥಾಪನೆ ಮಾಡುತ್ತಿದ್ದಾರೆ. ಕೆರೆ ಉಳಿಯುವುದಾದರೂ ಹೇಗೆ’ ಎಂದು ಪ್ರಶ್ನಿಸುತ್ತಾರೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು 2011ರಲ್ಲಿ ಈ ಕೆರೆಯನ್ನು ಅಭಿವೃದ್ಧಿಪಡಿಸಲು ಬಿಬಿಎಂಪಿಯಿಂದ ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಆದರೆ, ಇದುವರೆಗೆ ಕೆರೆ ಪುನರುಜ್ಜೀವನ ಮಾಡುವಂತಹ ಯಾವುದೇ ಕಾಮಗಾರಿಗಳು ನಡೆದಿಲ್ಲ. ಕೆರೆಯನ್ನು ಸರಿಯಾಗಿ ಅಭಿವೃದ್ಧಿಪಡಿಸಿದರೆ

ಈ ಭಾಗದ ಜನರಿಗೆ ಒಂದು ವಿಹಾರ ತಾಣ ಸಿಕ್ಕಂತಾಗುತ್ತದೆ ಎನ್ನುವುದು ಹೊಸಕೆರೆಹಳ್ಳಿ ಭಾಗದ ಜನರ ಅನಿಸಿಕೆಯಾಗಿದೆ.
-ಚಿಕ್ಕರಾಮು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.