ಜಾರ್ಜ್ಟೌನ್, ಗಯಾನ,(ಎಎಫ್ಪಿ): ಶಾಹಿದ್ ಅಫ್ರಿದಿ ತೋರಿದ ಆಲ್ರೌಂಡ್ ಆಟದ ನೆರವಿನಿಂದ ಪಾಕಿಸ್ತಾನ ತಂಡ ವೆಸ್ಟ್ ಇಂಡೀಸ್ ಎದುರಿನ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ 126 ರನ್ಗಳ ಭರ್ಜರಿ ಗೆಲುವು ಸಾಧಿಸಿತು.

ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಆಡಿದ್ದ ಪಾಕ್ ತಂಡದಲ್ಲಿ ಅಫ್ರಿದಿಗೆ ಸ್ಥಾನ ಲಭಿಸಿರಲಿಲ್ಲ. ಇದೇ ವರ್ಷದ ಮಾರ್ಚ್ನಲ್ಲಿ ದಕ್ಷಿಣ ಆಫ್ರಿಕಾ ಎದುರಿನ ಪಂದ್ಯವೇ ಕೊನೆಯ ಏಕದಿನ ಪಂದ್ಯವಾಗಿತ್ತು. ನಂತರ ಈಗ ಸ್ಥಾನ ಪಡೆದು ಅಫ್ರಿದಿ ತಮ್ಮ ಸಾಮರ್ಥ್ಯ ಸಾಬೀತು ಮಾಡಿದ್ದಾರೆ.

ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಮಿಸ್ಬಾ ಉಲ್ ಹಕ್ ನೇತೃತ್ವದ ಪಾಕ್ ತಂಡ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 224 ರನ್ ಕಲೆ ಹಾಕಿತು. ಆದರೆ, ಈ ಸಾಧಾರಣ ಮೊತ್ತದ ಗುರಿಯೇ ಆತಿಥೇಯರಿಗೆ ಭಾರಿ ಸವಾಲು ಎನಿಸಿತು. ಅಫ್ರಿದಿ (9-3-12-7) ದಾಳಿಯ ಮುಂದೆ ತತ್ತರಿಸಿದ ವಿಂಡೀಸ್ 41 ಓವರ್ಗಳಲ್ಲಿ 98 ರನ್ ಕಲೆ ಹಾಕುವಷ್ಟರಲ್ಲಿ ಆಲ್ಔಟ್ ಆಯಿತು.

33 ವರ್ಷದ ಅಫ್ರಿದಿ ಏಕದಿನ ಕ್ರಿಕೆಟ್ನಲ್ಲಿ ತೋರಿದ ಶ್ರೇಷ್ಠ ಬೌಲಿಂಗ್ ಇದಾಗಿದೆ. ಬ್ಯಾಟಿಂಗ್ನಲ್ಲೂ ಈ ಆಟಗಾರ (76, 55ಎಸೆತ, 6ಬೌಂಡರಿ, 5 ಸಿಕ್ಸರ್) ಮಿಂಚಿದರು. ಈ ಗೆಲುವಿನ ಮೂಲಕ ಮಿಸ್ಬಾ ಪಡೆ ಐದು ಪಂದ್ಯಗಳ ಸರಣಿಯಲ್ಲಿ 1-0ರಲ್ಲಿ ಮುನ್ನಡೆ ಸಾಧಿಸಿತು.

ಸಂಕ್ಷಿಪ್ತ ಸ್ಕೋರು: ಪಾಕಿಸ್ತಾನ 50 ಓವರ್ಗಳಲ್ಲಿ 9 ವಿಕೆಟ್ಗೆ 224. (ಮಿಸ್ಬಾ ಉಲ್ ಹಕ್ 52, ಉಮರ್ ಅಕ್ಮಲ್ 19, ಶಾಹಿದ್ ಅಫ್ರಿದಿ 76, ಸಯೀದ್ ಅಜ್ಮಲ್ ಔಟಾಗದೆ 15; ಕೆಮರ್ ರೋಚ್ 38ಕ್ಕೆ2, ಜೇಸನ್ ಹೋಲ್ಡರ್ 13ಕ್ಕೆ4, ಡ್ವೇನ್ ಬ್ರಾವೊ 52ಕ್ಕೆ2)

ವೆಸ್ಟ್ ಇಂಡೀಸ್: 41 ಓವರ್ಗಳಲ್ಲಿ 98 (ಮರ್ಲಾನ್ ಸ್ಯಾಮುಯೆಲ್ಸ್ 25, ಡರೆನ್ ಸಮಿ ಔಟಾಗದೆ 21, ಸುನಿಲ್ ನಾರಾಯಣ್ 14; ಮಹಮ್ಮದ್ ಇರ್ಫಾನ್ 17ಕ್ಕೆ2, ಶಾಹಿದ್ ಅಫ್ರಿದಿ 12ಕ್ಕೆ7).

ಫಲಿತಾಂಶ: ಪಾಕಿಸ್ತಾನಕ್ಕೆ 126 ರನ್ ಗೆಲುವು. ಪಂದ್ಯ ಶ್ರೇಷ್ಠ: ಶಾಹಿದ್ ಅಫ್ರಿದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.