ಭಾನುವಾರ, ಮೇ 22, 2022
21 °C

ಅಮಿತಾಭ್‌ಗೆ ಕ್ವೀನ್ಸ್‌ಲ್ಯಾಂಡ್ ಗೌರವ ಡಾಕ್ಟರೇಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮಿತಾಭ್‌ಗೆ ಕ್ವೀನ್ಸ್‌ಲ್ಯಾಂಡ್ ಗೌರವ ಡಾಕ್ಟರೇಟ್

ಬ್ರಿಸ್ಬೇನ್ (ಪಿಟಿಐ): ನಟ ಅಮಿತಾಭ್ ಬಚ್ಚನ್ ಅವರಿಗೆ ಗುರುವಾರ ಕ್ವೀನ್ಸ್‌ಲ್ಯಾಂಡ್ ತಾಂತ್ರಿಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.ಗುರುವಾರ ಇಲ್ಲಿನ ಸರ್ಕಾರಿ ಗೃಹದಲ್ಲಿ ಆಯೋಜಿಸಲಾಗಿದ್ದ ವರ್ಣರಂಜಿತ ಸಮಾರಂಭದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾದ ಹಲವು ಗಣ್ಯರ ಸಮ್ಮುಖದಲ್ಲಿ ಈ ಪದವಿಯನ್ನು ನೀಡಲಾಯಿತು.ಪದವಿ ಸ್ವೀಕರಿಸಿದ ನಂತರ ಮಾತನಾಡಿದ ಅಮಿತಾಭ್, ಎರಡೂ ದೇಶಗಳ ನಡುವಿನ ಕಲಾ ಮತ್ತು ಸೃಜನಶೀಲ ವಲಯಕ್ಕೆ ಸಂದ ಮನ್ನಣೆ ಇದಾಗಿದೆ ಎಂದರು.ಸಮಾರಂಭದಲ್ಲಿ ಆಸ್ಟ್ರೇಲಿಯಾದಲ್ಲಿನ ಭಾರತೀಯ ಹೈ ಕಮಿಶನರ್ ಪೀಟರ್ ವರ್ಗೀಸ್ ಹಾಜರಿದ್ದು ಅಮಿತಾಭ್ ಅವರಿಗೆ ಶುಭ ಕೋರಿದರು.ಬಚ್ಚನ್ ಅವರಿಗೆ ಇದು ನಾಲ್ಕನೇ ಗೌರವ ಡಾಕ್ಟರೇಟ್. ಈ ಮೊದಲು ಅವರು ಇಂಗ್ಲೆಂಡ್‌ನ ಲೀಸ್ಟರ್‌ನ ಡೆ ಮೊಂಟ್‌ಫೋರ್ಟ್ ವಿ.ವಿ, ಝಾನ್ಸಿ ವಿ.ವಿ ಹಾಗೂ ದೆಹಲಿ ವಿ.ವಿಗಳಿಂದ ಗೌರವ ಡಾಕ್ಟರೇಟ್ ಪದವಿ ಪಡೆದಿದ್ದಾರೆ.ಅಮಿತಾಭ್ ಅವರಿಗೆ ಕ್ವೀನ್ಸ್‌ಲ್ಯಾಂಡ್ ತಾಂತ್ರಿಕ ವಿ.ವಿಯು ಈ ಗೌರವವನ್ನು ಎರಡು ವರ್ಷಗಳ ಹಿಂದೆಯೇ ನೀಡಲು ತೀರ್ಮಾನಿಸಿತ್ತು. ಆದರೆ ಅಂದಿನ ದಿನಗಳಲ್ಲಿ ಆಸ್ಟ್ರೇಲಿಯಾದಲ್ಲಿ ಭಾರತೀಯರ ಮೇಲೆ ನಡೆಯುತ್ತಿದ್ದ ಜನಾಂಗೀಯ ಹಲ್ಲೆಗಳ ಹಿನ್ನೆಲೆಯಲ್ಲಿ ಬಚ್ಚನ್ ಇದನ್ನು ಪ್ರತಿಭಟನಾರ್ಥವಾಗಿ ಸ್ವೀಕರಿಸಿರಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.