ಶನಿವಾರ, ಮೇ 8, 2021
19 °C

ಅಮೆರಿಕ ವಿಜ್ಞಾನ ಅಕಾಡೆಮಿಗೆ ಬಾವಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಐಎಎನ್‌ಎಸ್): ಅಮೆರಿಕದ ಪ್ರತಿಷ್ಠಿತ ಕಲಾ ಮತ್ತು ವಿಜ್ಞಾನ ಅಕಾಡೆಮಿ ಸದಸ್ಯರಾಗಿ ಭಾರತೀಯ ಮೂಲದ ಕಮಲ್‌ಜಿತ್ ಸಿಂಗ್ ಬಾವಾ ಆಯ್ಕೆಯಾಗಿದ್ದಾರೆ.ಬೊಸ್ಟನ್‌ನ ಮೆಸಾಚುಸೆಟ್ಸ್ ವಿಶ್ವವಿದ್ಯಾಲಯದಲ್ಲಿ ಜೀವವಿಜ್ಞಾನ ಪ್ರಾಧ್ಯಾಪಕರಾಗಿರುವ ಬಾವಾ ಅವರು ಬೆಂಗಳೂರಿನ ಅಶೋಕ್ ಜೀವ ವಿಜ್ಞಾನ ಮತ್ತು ಪರಿಸರ ವಿಜ್ಞಾನಗಳ ಟ್ರಸ್ಟ್ ಸ್ಥಾಪಕರು ಹಾಗೂ ಅಧ್ಯಕ್ಷರೂ ಆಗಿದ್ದಾರೆ.ಜಗತ್ತಿನ ಹೆಸರಾಂತ ಕಲಾವಿದರು, ವಿಜ್ಞಾನಿಗಳು, ವಿದ್ವಾಂಸರು ಹಾಗೂ ಲೇಖಕರು ಸದಸ್ಯರಾಗಿರುವ ಅಕಾಡೆಮಿಯನ್ನು ಬಾವಾ ಅವರು ಅಕ್ಟೋಬರ್ 6ರಂದು ಸೇರಿಕೊಳ್ಳಲಿದ್ದಾರೆ. ಸುಸ್ಥಿರ ಅಭಿವೃದ್ಧಿಗಾಗಿ ಮೊತ್ತಮೊದಲ ಪ್ರತಿಷ್ಠಿತ ಗುನ್ನೆರಸ್ ಅಂತರರಾಷ್ಟ್ರೀಯ ಪ್ರಶಸ್ತಿಗೆ ಪಾತ್ರರಾಗಿರುವ ಬಾವಾ ಅವರು ಪ್ರಶಸ್ತಿ ಪ್ರದಾನ ಸ್ವೀಕರಿಸಿದ ಸಂದರ್ಭದಲ್ಲೇ ಸದಸ್ಯತ್ವದ ಆಯ್ಕೆ ಸುದ್ದಿ ಪ್ರಕಟವಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.