ಸೋಮವಾರ, ಏಪ್ರಿಲ್ 12, 2021
25 °C

ಅರೆತಲೆಶೂಲೆ- ಮೆದುಳಿಗೆ ಧಕ್ಕೆ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಅರೆ ತಲೆಶೂಲೆಯಿಂದ ಅಸಹನೀಯ ತಲೆನೋವು ಬರುತ್ತದೆ ಹೊರತೂ ಮೆದುಳಿನ ಸಂವೇದನಾ ಶಕ್ತಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಮಹಿಳೆಯರ ಕುರಿತ ಹೊಸ ಅಧ್ಯಯನ ಹೇಳಿದೆ.ಶೇ 20ರಷ್ಟು ಮಹಿಳೆಯರಿಗೆ ಬರುವ ಅರೆ ತಲೆಶೂಲೆಯು ಸಂವೇದನಾ ಶಕ್ತಿಯೊಂದಿಗೆ ಯಾವುದೇ ಸಂಬಂಧ ಹೊಂದಿರುವುದಿಲ್ಲ ಎಂದು ಈ ಬಗ್ಗೆ ಸಂಶೋಧನೆ ನಡೆಸಿರುವ ಬ್ರಿಗ್ಯಾಮ್ ಮತ್ತು ಮಹಿಳಾ ಆಸ್ಪತ್ರೆ ಪ್ರತಿಪಾದಿಸಿದೆ.`ಈ ಹಿಂದೆ ನಡೆಸಿದ ಅಧ್ಯಯನಯಗಳು ಅರೆ ತಲೆಶೂಲೆ ಮತ್ತು ಸಂವೇದನಾ ಶಕ್ತಿಯ ಕುಂದುವುದರ ಮೇಲೆ ಅತ್ಯಲ್ಪ ಮತ್ತು ಇವುಗಳ ನಡುವಿನ ಸಂಬಂಧದ ಬಗ್ಗೆ ನಿಖರವಾಗಿ ಗುರುತಿಸಲು ಸಾಧ್ಯವಾಗಿಲ್ಲ. ಆದರೆ ನಮ್ಮ ಅಧ್ಯಯನ ವಿಶಾಲವಾಗಿದ್ದು, ತಲೆಶೂಲೆಯ ನೋವಿನಿಂದ ಸಂವೇದನಾ ಶಕ್ತಿ ಕುಂದುವುದಿಲ್ಲ ಎಂಬುದನ್ನು ಸಾಬೀತು ಪಡಿಸಿದೆ~ ಎಂದು ಈ ಅಧ್ಯಯನದ ಲೇಖಕ ಪಮೇಲ್ ರಿಸ್ಟ್ ಹೇಳಿದ್ದಾರೆ.45 ವರ್ಷ ವಯಸ್ಸಿನ  40 ಸಾವಿರ ಮಹಿಳೆಯರನ್ನು ಅಧ್ಯಯನಕ್ಕೆ ಬಳಸಿಕೊಂಡು ಬಂದಿರುವ ದತ್ತಾಂಶಗಳನ್ನು ಆಧಾರವಾಗಿಟ್ಟುಕೊಂಡು ಇದನ್ನು ಹೇಳಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.