ಶನಿವಾರ, 5 ಜುಲೈ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ | ಆತುರಗತಿಯಲ್ಲಿ ಓಡುವ ನಿಮ್ಮ ಯೋಚನೆಗೆ ಕಡಿವಾಣ ಹಾಕಿ
Published 5 ಜುಲೈ 2025, 0:12 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಪತ್ನಿಯ ಆರೋಗ್ಯದಲ್ಲಿ ರಕ್ತದೊತ್ತಡದಂತಹ ಸಮಸ್ಯೆಗಳು ಉಂಟಾಗಬಹುದು. ಆಟಿಕೆ ವ್ಯಾಪಾರದಿಂದ ಅಧಿಕ ಲಾಭವನ್ನು ಪಡೆಯುವಂತಾಗಲಿದೆ. ದೀರ್ಘಕಾಲದ ಬಂಡವಾಳ ಹೂಡಿಕೆಯ ಆಲೋಚನೆ ಲಾಭವನ್ನು ತರುವುದು.
ವೃಷಭ
ನಿಮ್ಮ ಅಚ್ಚುಕಟ್ಟಾದ ಕೆಲಸಗಳಿಂದ ನಿಮ್ಮ ಮೇಲಿನ ಬೇರೆ ಜನರ ಅಭಿಪ್ರಾಯಗಳು ಬದಲಾಗುವುದು. ಸೌಂದರ್ಯದ ಬಗ್ಗೆ ಪ್ರಾಮುಖ್ಯತೆ ನೀಡುವ ಮನಸ್ಸಾಗಲಿದೆ. ವ್ಯಾಪಾರ ವ್ಯವಹಾರಗಳು ದಿನದಂತೆಯೇ ಸರಾಗವಾಗಿ ನಡೆಯಲಿದೆ.
ಮಿಥುನ
ಹಣಕಾಸಿನ ವಿಚಾರದಲ್ಲಿ ಭವಿಷ್ಯದ ಕುರಿತು ಯೋಚಿಸಿ ನಿರ್ಧಾರ ಕೈಗೊಳ್ಳುವುದರಿಂದ ಮುಂದಿನ ಜೀವನದ ದಿನಗಳು ನೆಮ್ಮದಿದಾಯಕವಾಗಲಿದೆ. ದೇಹದ ಶ್ರಮಕ್ಕೆ ತಕ್ಕಂತಹ ಸಂಪಾದನೆ ಇಲ್ಲವಾದರೂ ನೆಮ್ಮದಿಯ ಕೊರತೆ ಇರುವುದಿಲ್ಲ.
ಕರ್ಕಾಟಕ
ಕಾರ್ಮಿಕ ವರ್ಗದವರಿಗೆ ಹೆಚ್ಚಿನ ಸವಲತ್ತುಗಳು ಒದಗುವುವು. ಪರೋಪಕಾರ ಮತ್ತು ಮಾನವೀಯತೆ ನಿಮ್ಮಮುಖ್ಯ ಧ್ಯೇಯವಾಗಿರಲಿ. ನಡೆ-ನುಡಿ ನೇರವಾದಷ್ಟು ಸಂಬಂಧದ ಮಧ್ಯವಿರುವ ಬಿರುಕು ಕಡಿಮೆಯಾಗುವುದು.
ಸಿಂಹ
ಬಹುಕಾಲಗಳಿಂದ ಬಾಕಿ ಇರುವ ಸಾಲ ತೀರಿಸುವಿಕೆಯಂತಹಾ ಯೋಜನೆ ಇದ್ದರೆ ಒಳ್ಳೆಯದು. ಧೈರ್ಯದಿಂದ ಮುನ್ನುಗ್ಗಿ ಕೆಲಸ ಮಾಡುವವರಿಗೆ ನಿಮ್ಮ ಕನಸುಗಳು ನನಸಾಗಲಿದೆ. ನಿಮ್ಮ ಏಳ್ಗೆಗೆ ನೆರವಾಗುವವರ ಸಹಾಯ ಸಿಗುವುದು.
ಕನ್ಯಾ
ಇಂದು ನಿಮಗೆ ಉಂಟಾದ ಹತಾಶೆಯಿಂದಾಗಿ ಮನಸ್ಸು ಆಧ್ಯಾತ್ಮದ ಕಡೆಗೆ ಎಳೆಯುತ್ತದೆ. ಇಂದಿನ ಖರ್ಚು ವೆಚ್ಚಗಳು ಹೆಚ್ಚೆ ಇರುವುದರಿಂದ ಪೂರ್ವ ತಯಾರಿ ಮಾಡಿಕೊಳ್ಳುವುದು ಉತ್ತಮ. ಕೃಷಿಗಾಗಿ ಪರಿಶ್ರಮ ವಹಿಸುವಿರಿ.
ತುಲಾ
ಹಲವು ವಿಚಾರಗಳು ಒಂದೇ ಬಾರಿಗೆ ನಿಮ್ಮನ್ನು ತಲುಪುವುದರಿಂದ ಒಮ್ಮೆ ತಳಮಳವಾಗಬಹುದು. ನಿಮ್ಮ ಹೂಡಿಕೆಯ ಬಗ್ಗೆ ಎಚ್ಚರಿಕೆಯಿಂದ ತೀರ್ಮಾನವನ್ನು ಕೈಗೊಳ್ಳುವುದು ಉತ್ತಮ. ಬೂದು ಬಣ್ಣ ಶುಭಪ್ರದ.
ವೃಶ್ಚಿಕ
ಜೀವನದ ಕಷ್ಟ ಸುಖಗಳು ತಿರುಗುವ ಚಕ್ರದಂತಿರುವುದರಿAದ ನೀವು ಒಳ್ಳೆಯ ದಿನಗಳು ನಿಮ್ಮ ಜೀವನದಲ್ಲಿದೆ ಎಂಬ ಆಶಾ ಭಾವನೆಯನ್ನು ಮರೆಯದಿರಿ. ಮನೆಯಲ್ಲಿ ಮಕ್ಕಳ ಒಡನಾಟದಿಂದಾಗಿ ಮನಸ್ಸು ಸರಾಗವಾಗುವುದು.
ಧನು
ಬಹಳವಾಗಿ ಹಚ್ಚಿಕೊಂಡ ಸಾಕುಪ್ರಾಣಿಯ ಅನಾರೋಗ್ಯವು ತೀರ ಬೇಸರ ಪಡಿಸುವ ಸಾಧ್ಯತೆ ಇದೆ. ಇಂದು ನಿಮ್ಮ ಸುತ್ತ ನಡೆಯುವ ಕೆಲವು ಸನ್ನಿವೇಶಗಳಿಂದಾಗಿ ನಿಮ್ಮನ್ನಗಲಿದ ನಿಮ್ಮ ಹಿರಿಯರ ನೆನಪು ತರಿಸಲಿದೆ.
ಮಕರ
ನಿಮ್ಮ ಆತ್ಮವಿಶ್ವಾಸವು ಒಳ್ಳೆಯದು. ಆದರೆ ಅತಿಯಾದ ಆತ್ಮವಿಶ್ವಾಸವು ನೀವು ಮಾಡುವ ಕೆಲಸದ ಗುಣಮಟ್ಟವನ್ನು ಕುಂಠಿತಗೊಳಿಸುತ್ತದೆ. ನಿಮಗೆ ಒದಗಿಬರಲಿರುವ ಅವಕಾಶಗಳನ್ನು ನಿಮ್ಮ ಕೈತಪ್ಪಿಸುವ ಪ್ರಯತ್ನ ಕೆಲವರು ಮಾಡಲಿದ್ದಾರೆ.
ಕುಂಭ
ಬೇಕಾದ ಸಮಯದಲ್ಲಿಯು ವಿರಾಮವನ್ನು ನೀಡದೆಯೇ ದುಡಿಯುತ್ತಿದ್ದಲ್ಲಿ ನಿಮ್ಮ ದೇಹವು ನಿಮಗೆ ಅಗತ್ಯವಿರುವ ಸಮಯದಲ್ಲಿ ಕೈಕೊಡುವ ಸಾಧ್ಯತೆಗಳಿವೆ. ಆತುರಗತಿಯಲ್ಲಿ ಓಡುವ ನಿಮ್ಮ ಯೋಚನೆಗೆ ಕಡಿವಾಣ ಹಾಕಿ.
ಮೀನ
ಉದ್ಯೋಗದಲ್ಲಿ ಯಾವುದೇ ಮುಜುಗರ ಅಥವಾ ಹೆದರಿಕೆ ಇಲ್ಲದೆ ಸಮಯವನ್ನು ಬಳಸಿಕೊಳ್ಳಲು ಪ್ರಯತ್ನವನ್ನು ಮಾಡಿ. ಮಹಿಳೆಯರಿಗೆ ಕೆಲವು ಭಾವುಕರಾಗುವಂತಹಾ ಸನ್ನಿವೇಶಗಳು ಎದುರಾಗಬಹುದು
ADVERTISEMENT
ADVERTISEMENT