ಎಜ್ಬಾಸ್ಟನ್: ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಟೆಸ್ಟ್ ಕ್ರಿಕೆಟ್ನಲ್ಲಿ ಇದೇ ಮೊದಲ ಬಾರಿಗೆ 'ಗೋಲ್ಡನ್ ಡಕ್' (ಮೊದಲ ಎಸೆದಲ್ಲೇ ಔಟ್) ಆದರು. ಸರಣಿಯ 2ನೇ ಪಂದ್ಯದಲ್ಲಿ, ಇಂಗ್ಲೆಂಡ್ ಇನಿಂಗ್ಸ್ನ 22ನೇ ಓವರ್ನಲ್ಲಿ ಕ್ರೀಸ್ಗಿಳಿದ ಅವರನ್ನು ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್ ಔಟ್ ಮಾಡಿದರು.

ಇದಕ್ಕೂ ಮುನ್ನ 112 ಪಂದ್ಯಗಳ 201 ಇನಿಂಗ್ಸ್ಗಳಲ್ಲಿ ಬ್ಯಾಟಿಂಗ್ ಮಾಡಿದ್ದ ಸ್ಟೋಕ್ಸ್, ಒಮ್ಮೆಯೂ ಮೊದಲ ಎಸೆತದಲ್ಲೇ ಔಟ್ ಆಗಿರಲಿಲ್ಲ.

ಎಜ್ಬಾಸ್ಟನ್ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ತಂಡ ಮೊದಲ ಇನಿಂಗ್ಸ್ನಲ್ಲಿ 587 ರನ್ ಕಲೆಹಾಕಿದೆ. ಇದಕ್ಕುತ್ತರವಾಗಿ ಇಂಗ್ಲೆಂಡ್ 407 ರನ್ ಗಳಿಸಿ ಆಲೌಟ್ ಆಗಿದೆ. ಸದ್ಯ ಎರಡನೇ ಇನಿಂಗ್ಸ್ ಆರಂಭಿಸಿರುವ ಭಾರತ 1 ವಿಕೆಟ್ಗೆ 64 ರನ್ ಗಳಿಸಿದ್ದು 244 ರನ್ಗಳ ಮುನ್ನಡೆಯೊಂದಿಗೆ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ.

ಭಾರತದ ಮೊತ್ತದೆದುರು ಮೊದಲ ಇನಿಂಗ್ಸ್ನಲ್ಲಿ ಆರಂಭಿಕ ಆಘಾತ ಅನುಭವಿಸಿದ್ದ ಇಂಗ್ಲೆಂಡ್ ಕೇವಲ 25 ರನ್ಗೆ ಅಗ್ರಕ್ರಮಾಂಕದ ಮೂವರನ್ನು ಕಳೆದುಕೊಂಡಿತ್ತು. ಬಳಿಕ ಜೊತೆಯಾಗಿದ್ದ ಜೋ ರೂಟ್ ಮತ್ತು ಹ್ಯಾರಿ ಬ್ರೂಕ್, ಅರ್ಧಶತಕದ ಜೊತೆಯಾಟದ ಮೂಲಕ ಚೇತರಿಕೆ ನೀಡಿದ್ದರು. ಆದರೆ, 22ನೇ ಓವರ್ನಲ್ಲಿ ದಾಳಿಗಿಳಿದ ಸಿರಾಜ್ ಮತ್ತೆ ಆಘಾತ ನೀಡಿದ್ದರು.
.ಮಹಿಳಾ ಟಿ20 | ಭಾರತಕ್ಕೆ 3ನೇ ಪಂದ್ಯದಲ್ಲಿ ಸೋಲು; ಸರಣಿ ಜಯದ ಕನಸಿಗೆ ಹಿನ್ನಡೆ.IND vs ENG | ಜೇಮಿ– ಬ್ರೂಕ್ ಪ್ರತ್ಯಾಕ್ರಮಣ: ಫಾಲೊಆನ್ನಿಂದ ಇಂಗ್ಲೆಂಡ್ ಪಾರು.
ಓವರ್ನ ಮೂರನೇ ಎಸೆತದಲ್ಲಿ ರೂಟ್ ವಿಕೆಟ್ ಉರುಳಿಸಿದ್ದರು. ಈ ವೇಳೆ ಬ್ಯಾಟಿಂಗ್ಗೆ ಬಂದ ಸ್ಟೋಕ್ಸ್ ಮೇಲೆ ದೊಡ್ಡ ಇನಿಂಗ್ಸ್ ಆಡುವ ಒತ್ತಡವಿತ್ತು. ಆದರೆ, ಅವರಿಗೆ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ತಾವೆದುರಿಸಿದ ಮೊದಲ ಎಸೆತದಲ್ಲಿ ಪಿಚ್ ಮೇಲೆ ಬಿದ್ದು ವೇಗವಾಗಿ ಪುಟಿದ ಚೆಂಡಿನ ಗತಿ ಅರಿಯಲು ವಿಫಲರಾದ ಸ್ಟೋಕ್ಸ್, ವಿಕೆಟ್ಕೀಪರ್ ರಿಷಭ್ ಪಂತ್ಗೆ ಕ್ಯಾಚ್ ನೀಡಿ ಬಂದಷ್ಟೇ ವೇಗದಲ್ಲಿ ಪೆವಿಲಿಯನ್ಗೆ ವಾಪಸ್ ಆದರು.

ಇದುವರೆಗೆ 16 ಬಾರಿ ಸೊನ್ನೆ ಸುತ್ತಿರುವ ಸ್ಟೋಕ್ಸ್, ಗೋಲ್ಡನ್ ಡಕ್ ಆದದ್ದು ಇದೇ ಮೊದಲು. ಇದರೊಂದಿಗೆ, ಅಪರೂಪದ ದಾಖಲೆಯೊಂದು ರಾಹುಲ್ ದ್ರಾವಿಡ್ ಅವರ ಹೆಸರಿನಲ್ಲೇ ಉಳಿಯಿತು.

ಟೆಸ್ ಕ್ರಿಕೆಟ್ನಲ್ಲಿ 164 ಪಂದ್ಯಗಳ 286 ಇನಿಂಗ್ಸ್ಗಳಲ್ಲಿ ಬ್ಯಾಟಿಂಗ್ ಮಾಡಿರುವ ಭಾರತದ ದಿಗ್ಗಜ ದ್ರಾವಿಡ್, ಒಮ್ಮೆಯೂ ಗೋಲ್ಡನ್ ಡಕ್ ಆಗಿಲ್ಲ. 250ಕ್ಕಿಂತ ಹೆಚ್ಚು ಇನಿಂಗ್ಸ್ಗಳಲ್ಲಿ ಬ್ಯಾಟಿಂಗ್ ಮಾಡಿದವರ ಪೈಕಿ, ಈ ದಾಖಲೆ ಹೊಂದಿರುವುದು ಅವರೊಬ್ಬರೇ. ಈ ದಾಖಲೆಯನ್ನು ಮುರಿಯುವುದು ಕಠಿಣವೇ ಆದರೂ, ಅಂತಹ ಅವಕಾಶ ಸ್ಟೋಕ್ಸ್ಗೆ ಇತ್ತು. ಅದನ್ನು ಕೈಚೆಲ್ಲಿದರು.

ಇದಷ್ಟೇ ಅಲ್ಲ. ಇಂಗ್ಲೆಂಡ್ ತಂಡದ ಪರ ಈ ರೀತಿ ಔಟಾಗದೆ ಹೆಚ್ಚು ಇನಿಂಗ್ಸ್ಗಳಲ್ಲಿ ಆಡಿದ ಬ್ಯಾಟರ್ ಎನಿಸಿಕೊಳ್ಳುವ ಅವಕಾಶವನ್ನೂ ಅವರು ಕೇವಲ 2 ಇನಿಂಗ್ಸ್ ಅಂತರದಲ್ಲಿ ತಪ್ಪಿಸಿಕೊಂಡರು.

ಟೆಸ್ಟ್ ಕ್ರಿಕೆಟ್ನಲ್ಲಿ ಒಮ್ಮೆಯೂ 'ಗೋಲ್ಡನ್ ಡಕ್' ಆಗದ ಬ್ಯಾಟರ್ಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.