ಎಜ್ಬಾಸ್ಟನ್: ಇಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಮೊದಲ ಅವಧಿಯಲ್ಲಿ ಭಾರತಕ್ಕೆ ಆಂಗ್ಲರ ಬ್ಯಾಟರ್ಗಳು ತಿರುಗೇಟು ನೀಡಿದ್ದಾರೆ.

ಮೂರನೇ ದಿನದಾಟದ ಊಟದ ವಿರಾಮದ ಹೊತ್ತಿಗೆ 47 ಓವರ್ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 249 ರನ್ ಗಳಿಸಿದ್ದು, 338 ರನ್ಗಳ ಹಿನ್ನಡೆಯಲ್ಲಿದೆ.

ಸಿರಾಜ್ ಮಿಂಚು, ಸ್ಟೋಕ್ಸ್ ಶೂನ್ಯಕ್ಕೆ ಔಟ್...

ಎರಡನೇ ದಿನದಂತ್ಯಕ್ಕೆ ಇಂಗ್ಲೆಂಡ್ ಮೂರು ವಿಕೆಟ್ ನಷ್ಟಕ್ಕೆ 77 ರನ್ ಗಳಿಸಿತ್ತು. ಇಂದಿನ ದಿನದಾಟದ ಆರಂಭದಲ್ಲೇ ಮೊಹಮ್ಮದ್ ಸಿರಾಜ್ ಒಂದೇ ಓವರ್ನಲ್ಲಿ ಎರಡು ವಿಕೆಟ್ ಗಳಿಸುವ ಮೂಲಕ ಆತಿಥೇಯರಿಗೆ ಬಲವಾದ ಹೊಡೆತ ನೀಡಿದರು.

ಜೋ ರೂಟ್ 22 ರನ್ ಗಳಿಸಿ ಔಟ್ ಆದರು. ಇದಾದ ಬೆನ್ನಲ್ಲೇ ನಾಯಕ ಬೆನ್ ಸ್ಟೋಕ್ಸ್ ಖಾತೆ ತೆರೆಯಲಾಗದೇ ಪೆವಿಲಿಯನ್ಗೆ ಮರಳಿದರು. ಪರಿಣಾಮ ಇಂಗ್ಲೆಂಡ್ 21.4 ಓವರ್ಗಳಲ್ಲಿ 84 ರನ್ಗಳಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಜೇಮಿ ಸ್ಮಿತ್ 80 ಎಸೆತಗಳಲ್ಲಿ ಶತಕ...

ಈ ಹಂತದಲ್ಲಿ ಜೊತೆಗೂಡಿದ ಹ್ಯಾರಿ ಬ್ರೂಕ್ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಜೇಮಿ ಸ್ಮಿತ್ ತಂಡವನ್ನು ಮುನ್ನಡೆಸಿದರು. ಅವರಿಬ್ಬರು ಆಕ್ರಮಣಕಾರಿಯಾಗಿ ಆಡುವ ಮೂಲಕ ಭಾರತಕ್ಕೆ ತಿರುಗೇಟು ನೀಡಿದರು.

ಈ ಪೈಕಿ ಟ್ವೆಂಟಿ-20 ಶೈಲಿಯಲ್ಲಿ ಬ್ಯಾಟ್ ಬೀಸಿದ ಸ್ಮಿತ್, ಕೇವಲ 80 ಎಸೆತಗಳಲ್ಲಿ ಶತಕ ಸಾಧನೆ ಮಾಡಿದ್ದಾರೆ. ಅಲ್ಲದೆ ಟೆಸ್ಟ್ ಕ್ರಿಕೆಟ್ನ ಒಂದೇ ಅವಧಿಯಲ್ಲಿ ಶತಕ ಗಳಿಸಿದ ಇಂಗ್ಲೆಂಡ್ ಬ್ಯಾಟರ್ ಎನಿಸಿದ್ದಾರೆ.

ಅತ್ತ ಹ್ಯಾರಿ ಬ್ರೂಕ್ 91 ರನ್ ಗಳಿಸಿ ಕ್ರೀಸಿನಲ್ಲಿದ್ದಾರೆ. ಅವರಿಬ್ಬರು ಆರನೇ ವಿಕೆಟ್ಗೆ ಶತಕದ ಜೊತೆಯಾಟದಲ್ಲಿ ಭಾಗಿಯಾಗಿದ್ದಾರೆ.

ಭಾರತದ ಪರ ಮೊಹಮ್ಮದ್ ಸಿರಾಜ್ ಮೂರು ಹಾಗೂ ಆಕಾಶ್ ದೀಪ್ ಎರಡು ವಿಕೆಟ್ ಗಳಿಸಿದರು.

ಗಿಲ್ ದ್ವಿಶತಕ...

ಎರಡನೇ ದಿನದಾಟದಲ್ಲಿ ಭಾರತದ ನಾಯಕ ಶುಭಮನ್ ಗಿಲ್ ಅಮೋಘ ದ್ವಿಶತಕ ಗಳಿಸಿದ್ದರು. 387 ಎಸೆತಗಳಲ್ಲಿ 30 ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 269 ರನ್ ಗಳಿಸಿದರು.

ಆ ಮೂಲಕ ಭಾರತ 587 ರನ್ ಪೇರಿಸಿತ್ತು. ರವೀಂದ್ರ ಜಡೇಜ (89) ಹಾಗೂ ಯಶಸ್ವಿ ಜೈಸ್ವಾಲ್ (87) ಆಕರ್ಷಕ ಅರ್ಧಶತಕ ಗಳಿಸಿದ್ದರು. ವಾಷಿಂಗ್ಟನ್ ಸುಂದರ್ (42) ರನ್ಗಳ ಉಪಯುಕ್ತ ಕೊಡುಗೆ ನೀಡಿದ್ದರು.
.IND vs ENG 2nd Test | ಶುಭಮನ್ ಗಿಲ್ ‘ಡಬಲ್’ ಶತಕ: ಆತಿಥೇಯರಿಗೆ ಆರಂಭಿಕ ಆಘಾತ.IND vs ENG: ಟೆಸ್ಟ್ ಕ್ರಿಕೆಟ್ನಲ್ಲಿ ಶುಭಮನ್ ಗಿಲ್ ಚೊಚ್ಚಲ ದ್ವಿಶತಕ ಸಾಧನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.