ಮಂಗಳವಾರ, ಮೇ 11, 2021
25 °C

ಅರ್ಚಕರ ಶೋಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರ್ಮಿಕ ದತ್ತಿಯ ಇಲಾಖೆಯ ಉಸ್ತುವಾರಿಯಲ್ಲಿರುವ ದೇವಾಲಯಗಳ ಅರ್ಚಕರ ಗೋಳು ಹೇಳತೀರದು. ಅದರಲ್ಲೂ ಗ್ರಾಮಾಂತರ ಪ್ರದೇಶದ ಅರ್ಚಕರ ಸ್ಥಿತಿ ಶೋಚನೀಯ.ಈ ಅರ್ಚಕರ ಪೈಕಿ ಗೇಣಿ ಕಾನೂನಿನ ಪ್ರಕಾರ ದೇವಾಲಯದ ಜಮೀನು ಕಳೆದುಕೊಂಡವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸರ್ಕಾರ ಅವರಿಗೆ 50ರಿಂದ 400 ರೂ ತಸ್ತೀಕ್ ಹಣ ನಿಡುತ್ತಿದೆ.ಅದು ಹೆಚ್ಚಳವಾಗುತ್ತ ಈಗ ತಿಂಗಳಿಗೆ  500 ರೂ ನಿಗದಿ ಮಾಡಲಾಗಿದೆ.  ಈ ಹಣ ಪೂಜೆ ವೆಚ್ಚಗಳಿಗೆ ಸಾಲುತ್ತಿಲ್ಲ. ಅಲ್ಲದೇ ವರ್ಷಕ್ಕೆ ಒಂದು ಬಾರಿ ಕೊಡಲಾಗುತ್ತಿದೆ. ಅದನ್ನು ಪಡೆಯಲು ತಾಲ್ಲೂಕು ಕಚೇರಿಗೆ ಅಲೆದಾಡಬೇಕು. ಹಣ ಪಡೆಯಲು ಲಂಚ ಕೊಡಬೇಕಾದ ಪರಿಸ್ಥಿತಿ ಇದೆ. ಅರ್ಚಕರ ಸಂಘದ ಅನುಮತಿ ಪತ್ರವಿಲ್ಲದೆ ಹಣ ನೀಡುವುದಿಲ್ಲ. ಒಂದು ನಿರ್ದಿಷ್ಟ ಅವಧಿಯಲ್ಲಿ ತಸ್ತೀಕ್ ಹಣ ವಿತರಣೆ ಆಗುವಂತೆ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.