ಬುಧವಾರ, ಜನವರಿ 29, 2020
26 °C

ಅರ್ಜುನ್ ಹಾಲಪ್ಪಗೆ ಯುವ ಭಾರತೀಯ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಣಿಕೊಪ್ಪಲು: ಕೊಡಗಿನ ಹಾಕಿ ಪಟು ಹಾಗೂ ಅಂತರರಾಷ್ಟ್ರೀಯ ಆಟಗಾರ ಅರ್ಜುನ್ ಹಾಲಪ್ಪ ಅವರಿಗೆ ಭಾರತೀಯ ಜೇಸೀಸ್‌ನ ಸರ್ವೋಚ್ಚ ಪ್ರಶಸ್ತಿಯಾಗಿರುವ `ಅತ್ಯುತ್ತಮ ಯುವ ಭಾರತೀಯ~ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.ಹೈದರಾಬಾದ್‌ನ ಸಿಕಂದರಾಬಾದ್‌ನಲ್ಲಿ ಈಚೆಗೆ ನಡೆದ ಜೇಸಿಸ್‌ನ 56ನೇ ರಾಷ್ಟ್ರೀಯ ಮಹಾ ಅಧಿವೇಶನದಲ್ಲಿ ಜೇಸಿಸ್‌ನ ರಾಷ್ಟ್ರಾಧ್ಯಕ್ಷ ಬಾಲವೆಲಾಯುದಂ ಪ್ರಶಸ್ತಿ ನೀಡಿ ಗೌರವಿಸಿದರು. ಜೇಸೀಸ್ ಸಂಸ್ಥೆ ಪ್ರತಿವರ್ಷ ರಾಷ್ಟ್ರಮಟ್ಟದಲ್ಲಿ 10 ಯುವಕರನ್ನು ಗುರುತಿಸಿ, ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಅರ್ಜುನ್ ಹಾಲಪ್ಪ ಅವರು ಅತ್ಯಂತ ಕಿರಿಯ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದಾರೆ.ಬೆಂಗಳೂರು ಮೆಟ್ರೊ ಜೇಸಿಸ್ ಘಟಕದ ಸ್ಥಾಪಕ ಅಧ್ಯಕ್ಷ ಎ.ಪಿ.ಕಾರ್ಯಪ್ಪ, ಪೊನ್ನಂಪೇಟೆ ನಿಸರ್ಗ ಜೇಸೀಸ್ ಅಧ್ಯಕ್ಷ ರಫೀಕ್ ತೂಚಮಕೇರಿ, ಅರ್ಜುನ್ ಹಾಲಪ್ಪ, ಪತ್ನಿ ಭಾವನಾ ಹಾಜರಿದ್ದರು.

ಪ್ರತಿಕ್ರಿಯಿಸಿ (+)