ನನ್ನ ಬದುಕೂ ಪಯಣ, ಸಿನಿಮಾದ ವಸ್ತು ಸಹ ಪಯಣದ್ದೇ’. ತಮ್ಮ ಸಿನಿಮಾ ಮತ್ತು ಜೀವನಕ್ಕೆ ಚಿಕ್ಕದೊಂದು ಸಾಮ್ಯತೆ ಇದೆ ಎಂದು ಸಣ್ಣನೆ ನಕ್ಕರು ನಿರ್ದೇಶಕ ವಿನಯ್ ಪ್ರೀತಮ್.

ವಿಶಿಷ್ಟ ಟ್ರೇಲರ್ ಮತ್ತು ಹಾಡುಗಳಿಂದ ಕುತೂಹಲ ಮೂಡಿಸಿರುವ ವಿನಯ್ ನಿರ್ದೇಶನದ ‘ಮಡಮಕ್ಕಿ’ ಚಿತ್ರದ ಬಗ್ಗೆ ಚಿತ್ರತಂಡದ ಅನೇಕರು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಹುಟ್ಟುಹಾಕಿರುವ ಕುತೂಹಲಕ್ಕೆ ಮೋಸ ಮಾಡದಂತಹ, ಎಲ್ಲರಿಗೂ ಇಷ್ಟವಾಗುವ ಸಿನಿಮಾ ಇದು ಎಂದು ಆತ್ಮವಿಶ್ವಾಸದಿಂದ ಹೇಳಿಕೊಳ್ಳುತ್ತಾರೆ ವಿನಯ್.

ಚಿತ್ರದೆಡೆಗಿನ ಕುತೂಹಲ ಶೀರ್ಷಿಕೆಯಿಂದಲೇ ಶುರುವಾಗುತ್ತದೆ. ‘ಮಡಮಕ್ಕಿ’ ಎಂದರೆ ಉಡುಪಿಯಲ್ಲಿ ಇರುವ ಒಂದು ಊರು. ಆ ಊರಿನಲ್ಲಿ ನಡೆಯುವ ಘಟನೆಯೇ ಸಿನಿಮಾ. ಮಡಮಕ್ಕಿಯಿಂದ ಶುರುವಾಗಿ ಬೆಂಗಳೂರು–ಬಾಂಬೆ ಮತ್ತೆ ಮಡಮಕ್ಕಿಗೆ ಸಾಗುವ ಒಂದೇ ದಿನದ ಪಯಣದ ಕಥೆ ಇದು.

ಬದುಕು ಅರಸುತ್ತಾ...
ವಿನಯ್, ಕುಕ್ಕೆ ಸುಬ್ರಮಣ್ಯದವರು. ಮಂಗಳೂರು ಮತ್ತು ಮಡಿಕೇರಿಯಲ್ಲಿ ಆರಂಭದ ವಿದ್ಯಾಭ್ಯಾಸ ಮುಗಿಸಿದವರು. ಎಸ್ಎಸ್ಎಲ್ಸಿ ಬಳಿಕ ಸೇರಿಕೊಂಡಿದ್ದು ಮುಂಬೈನ ಹೋಟೆಲ್ ಒಂದನ್ನು. ಒಂದಷ್ಟು ಸಮಯ ಅಲ್ಲಿ ಕೆಲಸ ಮಾಡಿದವರಿಗೆ ಮಂಗಳೂರು ಮೂಲದ ಸಿನಿಮಾ ನಿರ್ಮಾಪಕರು ಮತ್ತು ನಿರ್ದೇಶಕರ ಸಂಪರ್ಕ ಬೆಳೆಯಿತು. ಅವರ ಒಡನಾಟವೇ ಸಿನಿಮಾದತ್ತ ಸೆಳೆತ ಉಂಟಾಗಲು ಕಾರಣ ಎನ್ನುತ್ತಾರೆ ವಿನಯ್.

ಮುಂಬೈನಿಂದ ಊರಿಗೆ ಮರಳಿದ ಅವರು, ಬಳಿಕ ಹತ್ತಿದ್ದು ಬೆಂಗಳೂರು ಬಸ್ಸನ್ನು. ಸಂಗೀತ ನಿರ್ದೇಶಕ ವಿ. ಮನೋಹರ್ ಅವರ ಶಿಷ್ಯನಾಗಿ ಸೇರಿಕೊಂಡರು. ‘ಬೇಕಿತ್ತಾ?’, ‘ಬುರುಡೆ ಭವಿಷ್ಯ’ ಧಾರಾವಾಹಿಗಳಲ್ಲಿ ಕೆಲಸ ಮಾಡಿದರು. ಅನೇಕ ತುಳು ಮತ್ತು ಕನ್ನಡ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದರು.

‘ಮೊದಲಿನಿಂದಲೂ ಸಿನಿಮಾದಲ್ಲಿ ಆಸಕ್ತಿ ಇತ್ತು ಎಂದರೆ ತಪ್ಪಾಗ್ತದೆ. ಶಾಲೆಗೆ ಹೋಗುವಾಗ ನಾಟಕಗಳಲ್ಲಿ ನಟಿಸಿದವರು, ಬರೆದವರು, ಅದರ ಹಿನ್ನೆಲೆಯುಳ್ಳವರು ಸಿನಿಮಾಕ್ಕೆ ಬರುತ್ತಾರೆ. ನನ್ನ ಚಿಕ್ಕ ತಾತ ಅನೇಕ ತುಳು ಪುಸ್ತಕಗಳನ್ನು ಬರೆದಿದ್ದಾರೆ. ಬಹುಶಃ ಬರವಣಿಗೆಗೆ ಅವರ ಪ್ರೇರಣೆ ಇರಬಹುದು. ಆದರೆ ನನಗೆ ಯಾವುದೇ ಸಿನಿಮಾ ಹಿನ್ನೆಲೆ ಇರಲಿಲ್ಲ. ಅದಕ್ಕೆ ಸಿದ್ಧನಾಗಿ ಬಂದದ್ದಲ್ಲ. ಬಾಂಬೆಯಲ್ಲಿ ಮಂಗಳೂರಿನವರು ಹೆಚ್ಚು ಇರ್ತಾರೆ. ಅಲ್ಲಿ ಪರಿಚಯವಾದ ಸಿನಿಮಾ ಮಂದಿಯ ಒಡನಾಟದಿಂದ, ಸಿನಿಮಾ ಏಕೆ ಮಾಡಬಾರದು ಎನಿಸಿತು. ಒಂದು ಕೈ ನೋಡುವಾ ಎಂದು ಸಿನಿಮಾಕ್ಕೆ ಕಾಲಿಟ್ಟೆ. ಇಲ್ಲಿ ಬಂದ ಮೇಲೆ ಸಿನಿಮಾವೇ ನನ್ನ ವೃತ್ತಿ ಆಗಲಿ ಎಂದು ಆಯ್ಕೆ ಮಾಡಿಕೊಂಡೆ. ಎಂಟು ವರ್ಷದಿಂದ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ’ ಎಂದು ತಮ್ಮ ಪಯಣದ ಕಥೆಯನ್ನು ಅವರು ತೆರೆದಿಡುತ್ತಾರೆ.

ಎಷ್ಟು ಕಾಲ ಸಹಾಯಕನಾಗಿಯೇ ಕೆಲಸ ಮಾಡುವುದು? ಸಹಾಯಕನಾಗಿ ಉಳಿದರೆ ಬೇರೆಯವರು ಹೇಳಿದ್ದಷ್ಟನ್ನೇ ಮಾಡಬೇಕು. ತನ್ನದು ಎಂಬ ಸೃಜನಶೀಲ ಕೆಲಸವೇ ಇರುವುದಿಲ್ಲ ಎಂಬ ಸಂಗತಿ ಅವರನ್ನು ಕಾಡಿತು. ಆಗ ಹುಟ್ಟಿದ್ದೇ ‘ಮಡಮಕ್ಕಿ’ಯ ಕಥೆ. ಇದು ತಮ್ಮ ಬದುಕನ್ನು ಹೋಲುವ ಪಯಣದ ಕಥೆಯಾದರೂ, ತಮ್ಮ ಬದುಕಿಗೂ ಸಿನಿಮಾಕ್ಕೂ ಯಾವ ಸಂಬಂಧವಿಲ್ಲ ಎಂಬ ಸ್ಪಷ್ಟನೆ ಅವರದು. ಹೀಗಿದ್ದರೂ ವಾಸ್ತವ ಹತ್ತಿರವಾದ ಅಂಶಗಳು ಚಿತ್ರದಲ್ಲಿ ಸಾಕಷ್ಟಿವೆಯಂತೆ.

ಭೂಗತ ಜಗತ್ತಿನ ಸ್ಪರ್ಶ
ಇಲ್ಲಿ ಪಯಣದ ಜತೆಗೆ ಮುಂಬೈ ಭೂಗತ ಜಗತ್ತಿನ ಸಣ್ಣ ಎಳೆಯೂ ಇದೆ. ಆದರೆ ಸಿನಿಮಾದಲ್ಲಿ ಅದೇ ಪ್ರಧಾನವಲ್ಲ. ನಮ್ಮಲ್ಲಿ ಭೂಗತ ಜಗತ್ತಿನ ಕುರಿತು ಅನೇಕ ಸಿನಿಮಾಗಳು ಬಂದಿವೆ. ಅದೇ ವಸ್ತು ಇದ್ದಾಗ, ಹಳೆಯ ಶೈಲಿಯೇ ಮರುಕಳಿಸಬಾರದು. ಇತರೆ ಸಿನಿಮಾಗಳಿಗಿಂತ ತಮ್ಮ ಸಿನಿಮಾ ವಿಭಿನ್ನವಾಗಿ ಕಾಣಿಸಬೇಕು ಎನ್ನುವುದು ಅವರ ನಿಲುವಾಗಿತ್ತು. ಅದಕ್ಕೆ ಪೂರಕವಾಗಿ ಕಥೆಯ ನಿರೂಪಣೆ ಮತ್ತು ತಾಂತ್ರಿಕ ಹೊಣೆಗಳನ್ನು ನಿಭಾಯಿಸಿರುವ ತೃಪ್ತಿ ಅವರದು. ಶೇ 70ರಷ್ಟು ಸಿನಿಮಾ ಕಾಡಿನಲ್ಲಿಯೇ ಸಾಗುತ್ತದೆ. ಸುಳ್ಯ, ಮಂಗಳೂರು, ಮುಂಬೈನಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಚಿತ್ರದ ಟ್ರೇಲರ್ ಅನ್ನು ಹಿಮ್ಮುಖ ಚಲನೆಯಲ್ಲಿ ನೀಡಿದ್ದು ಸುದ್ದಿಯಾಗಿತ್ತು. ಇದಕ್ಕೂ ಚಿತ್ರಕ್ಕೂ ಸಂಬಂಧವಿದೆ. ಆ ಉದ್ದೇಶದಿಂದಲೇ ಈ ಪ್ರಯೋಗ ಎನ್ನುವುದು ಅವರ ವಿವರಣೆ. ಸಾಮಾನ್ಯವಾಗಿ ಸಿನಿಮಾ ಕಥೆಗಳು ಬಾಲ್ಯ–ಯೌವನ–ಮಧ್ಯವಯಸ್ಸು ಹೀಗೆ ತೋರಿಸುತ್ತವೆ. ಆದರೆ ‘ಮಡಮಕ್ಕಿ’ಯಲ್ಲಿ ಇದರ ನಿರೂಪಣೆ ಉಲ್ಟಾ ಇದೆ. ಕಾನ್ಸೆಪ್ಟ್ ಹಿಮ್ಮುಖ ಇರುವಾಗ ಟ್ರೇಲರ್ ಕೂಡ ಹಿಮ್ಮುಖವಾಗಿರಲಿ ಎಂದು ಪ್ರಯೋಗಕ್ಕೆ ಕೈ ಹಾಕಿದರು. ಅದು ಸಫಲವಾದ ನೆಮ್ಮದಿ ಅವರಲ್ಲಿದೆ. ಮೊದಲ ಎರಡು ವಾರದಲ್ಲೇ ಟ್ರೇಲರ್ ವೀಕ್ಷಿಸಿದವರ ಸಂಖ್ಯೆ ನಾಲ್ಕು ಲಕ್ಷ ದಾಟಿತ್ತು. ಅವರಿಗೆ ತಮ್ಮ ಸಿನಿಮಾದ ಕುರಿತು ಧೈರ್ಯ ಮೂಡಿಸಿದ್ದೇ ಟ್ರೇಲರ್ನ ಯಶಸ್ಸು.

ಯಶಸ್ಸಿನ ಲಾಭ
‘ಭಾರತೀಯ ಚಿತ್ರರಂಗದಲ್ಲಿ ಕನ್ನಡದಲ್ಲಿಯೇ ಒಳ್ಳೆಯ ಸಿನಿಮಾಗಳು ಬರುತ್ತಿರುವುದು. ಬೇರೆ ಭಾಷೆಗಿಂತಲೂ ಯಶಸ್ಸಿನ ಪ್ರಮಾಣ ಹೆಚ್ಚಿರುವುದು ಇಲ್ಲಿಯೇ. ಇಲ್ಲಿ ಹೊಸ ಪ್ರತಿಭೆಗಳು ಹೊಸತನ ನೀಡುತ್ತಿದ್ದಾರೆ. ಜನರೂ ಅದನ್ನು ಇಷ್ಟಪಡುತ್ತಿದ್ದಾರೆ. ಈ ವಾತಾವರಣದ ಲಾಭವನ್ನು ನಾನು ಉಪಯೋಗಿಸಿಕೊಳ್ಳಬೇಕು ಮತ್ತು ಅದಕ್ಕೆ ಕಾಣಿಕೆಯನ್ನೂ ನೀಡಬೇಕು’ ಎನ್ನುವುದು ವಿನಯ್ ಗುರಿ.

‘ಚಿತ್ರದ ಕಥೆ, ನಿರೂಪಣೆ, ತಾಂತ್ರಿಕತೆಯಿಂದ ಹಿಡಿದು ಪ್ರತಿ ವಿಭಾಗದಲ್ಲಿಯೂ ವಿಭಿನ್ನತೆ ಇದೆ. ಐಟಂಸಾಂಗ್ನಲ್ಲಿಯೂ ಇದನ್ನು ಕಾಣಬಹುದು. ಹೊಸತನ ಬಯಸಿ ಬರುವ ಪ್ರೇಕ್ಷಕರಿಗೆ ಬಯಸಿದ್ದು ಖಂಡಿತಾ ಸಿಗುತ್ತದೆ’ ಎನ್ನುತ್ತಾರೆ ಅವರು.

ನಿರ್ಮಾಪಕರೂ ಆಗಿರುವ ನಾಯಕ ತನುಷ್, ನಾಯಕಿ ನಿಖಿತಾ ನಾರಾಯಣ್, ತಾರಾ, ರಾಜೇಂದ್ರ ಕಾರಂತ್ ಮುಂತಾದ ಕಲಾವಿದರ ಬಳಗದ ಜತೆಗೆ, ಕೆ.ಎಂ. ಪ್ರಕಾಶ್ ಸಂಕಲನ, ಕಿರಣ್ ಹಂಪಾಪುರ ಛಾಯಾಗ್ರಹಣ, ಮದನ್ ಹರಿಣಿ ನೃತ್ಯ ಮತ್ತು ಥ್ರಿಲ್ಲರ್ ಮಂಜು ಸಾಹಸ ಇರುವ ಪ್ರಬಲ ಚಿತ್ರತಂಡ ತಮಗೆ ದೊರೆತಿದೆ ಎನ್ನುವುದು ಅವರ ಆತ್ಮವಿಶ್ವಾಸ ಹೆಚ್ಚಿಸಿದೆ.

ಸಂಗೀತ ಜತೆಗೆ ಅನೂಪ್ ಸೀಳಿನ್ ಮಾಡಿರುವ ರೀ ರೆಕಾರ್ಡಿಂಗ್ ಇಡೀ ಚಿತ್ರದ ಜೀವಾಳ ಎನ್ನುವುದು ಅವರ ಬಣ್ಣನೆ. ತಮ್ಮ ಮೊದಲ ಪ್ರಯತ್ನವನ್ನು ಯಶಸ್ವಿಗೊಳಿಸಲು ಅಗತ್ಯವಾದ ಎಲ್ಲ ಸಂಗತಿಗಳೂ ಪೂರಕವಾಗಿ ದೊರೆತಿವೆ. ಸಿನಿಮಾ ತಮಗೆ ನೀಡಿರುವುದಕ್ಕಿಂತಲೂ ದುಪ್ಪಟ್ಟು ಖುಷಿಯನ್ನು ಪ್ರೇಕ್ಷಕರಿಗೆ ನೀಡುತ್ತದೆ ಎಂಬ ನಂಬಿಕೆ ಅವರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.