ಮಂಗಳವಾರ, ಮಾರ್ಚ್ 2, 2021
31 °C

ಅವರಿಗೆ ನಿರಂತರ ನೀರು, ನಮಗೇಕಿಲ್ಲ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅವರಿಗೆ ನಿರಂತರ ನೀರು, ನಮಗೇಕಿಲ್ಲ?

ಇಂಡಿ:`ಪುರಸಭೆಯ ಮುಖ್ಯಾಧಿಕಾರಿ ಮನೆಯ ಮುಂದೆ 24 ಗಂಟೆಗಳ ಕಾಲವೂ ನಲ್ಲಿಯಲ್ಲಿ ನೀರು ಹರಿಯುತ್ತಿರುತ್ತದೆ. ಭೀಮಾ ನದಿಯಿಂದ ಯಾವುದೇ ಅಡೆ-ತಡೆ ಇಲ್ಲದೆ ನೀರು ಬರುತ್ತಿದೆ. ಆದರೂ ನಮಗೇಕೆ ನೀರು ಪೂರೈಕೆಯಾಗುತ್ತಿಲ್ಲ...?~ಇಲ್ಲಿಯ ವಿದ್ಯಾನಗರ ಪ್ರದೇಶದ ಮಹಿಳೆಯರ ಪ್ರಶ್ನೆ ಇದು.ವಿದ್ಯಾನಗರದ ಮಹಿಳೆಯರು ಕುಡಿಯುವ ನೀರು ಕೊಡಿ ಎಂದು ಆಗ್ರಹಿಸಿ, ಪುರಸಭೆ ಸದಸ್ಯೆ ಶಾಂತಾ ಜ್ಯೋತಿ ಅವರ ಮನೆಗೆ ಖಾಲಿ ಕೊಡಗಳನ್ನು ಹೊತ್ತು ಶನಿವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.`ಕಳೆದ 15 ದಿನಗಳಿಂದ ನೀರು ಬಿಟ್ಟಿಲ್ಲ. ಬೀರಪ್ಪ ದೇವರ ದೇವಸ್ಥಾನದ ಹತ್ತಿರವಿರುವ ಕೊಳವೆ ಬಾವಿಗೆ ಜೋಡಿಸಿದ ವಿದ್ಯುತ್ ಪಂಪ್ ಕೆಟ್ಟುಹೋಗಿದೆ. ಅದರ ರಿಪೇರಿ ಕೂಡಾ ಮಾಡಿಲ್ಲ. ಪಟ್ಟಣದಲ್ಲಿ ಸಾಕಷ್ಟು ನೀರು ಹರಿಯುತ್ತಿದೆ. ಆದರೆ, ನಮ್ಮ ಬಡಾವಣೆಗೆ ನೀರಿಲ್ಲ~ ಎಂದು ಗೀತಾ ಕುಲಕರ್ಣಿ, ಶಾಂತಾಬಾಯಿ ಯಾದವಾಡ, ಜಯಶ್ರೀ ಪಾಟೀಲ, ಎನ್.ಬಿ. ಕೋಟಿ, ಜಯಶ್ರೀ ನಿಂಬಾಳ, ಅನ್ನಪೂರ್ಣ ಲಾಳಗೆ, ಶಾಂತಾಬಾಯಿ ಎಡ್ರಾಮಿ, ಮಹಾದೇವಿ ಮಂಡೇವಾಡಿ, ಪ್ರೇಮಾ ಚೌಧರಿ, ಶಶಿಕಲಾ ಸಿಂಪಿ, ಸಂತೋಷ ಕಂಬಾರ ದೂರಿದರು.  ಕೂಡಲೇ ತಮ್ಮ ಬಡಾವಣೆಗೆ ನೀರು ಪೂರೈಸಬೇಕು ಎಂದು ಆಗ್ರಹಿಸಿದರು.`ಪಟ್ಟಣದಲ್ಲಿ ಕುಡಿಯುವ ನೀರು ನಿರ್ವಹಣೆ ಸರಿಯಾಗಿ ಮಾಡುತ್ತಿಲ್ಲ. ಕೆಲವು ಕಡೆ ನೀರಿಲ್ಲದೇ ಪರಿತಪಿಸುತ್ತಿದ್ದರೆ ಇನ್ನೂ ಕೆಲವು ಕಡೆ ನಲ್ಲಿ ನೀರು ವ್ಯರ್ಥವಾಗಿ ಹರಿದುಹೋಗುತ್ತಿದೆ. ಇಂಡಿ ಪಟ್ಟಣದಲ್ಲಿರುವ ಎಲ್ಲ ಕೊಳವೆ ಬಾವಿಗಳಿಗೆ ನೀರಿದೆ. ಸಾಕಷ್ಟು ನೀರಿದ್ದೂ ನಿರ್ವಹಣೆ ಇಲ್ಲದೇ ಪರಿತಪಿಸಬೇಕಾದ ಪ್ರಸಂಗ ಬಂದೊದಗಿದೆ~ ಎಂದು ಅವರೆಲ್ಲ ಪುರಸಭೆಗೆ ಹಿಡಿಶಾಪ ಹಾಕಿದರು. `ಕುಡಿಯುವ ನೀರು ಸರಿಯಾಗಿ ನಿರ್ವಹಣೆ ಮಾಡಬೇಕು. ನಲ್ಲಿ ನೀರು ಬಿಡಬೇಕು ಎಂದು ಪುರಸಭೆಗೆ ಸಾಕಷ್ಟು ಸಲ ಮನವಿ ಮಾಡಿಕೊಂಡರೂ ಸಹ ಇಲ್ಲಿಯವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಇನ್ನು ಮೇಲೆ ವಿದ್ಯಾನಗರ ಬಡಾವಣೆಗೆ ನೀರು ಬಿಡದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ~ ಎಂದು ಎಚ್ಚರಿಕೆ ನೀಡಿದರು.ಸ್ಥಳಕ್ಕೆ ಆಗಮಿಸಿದ ಪುರಸಭೆ ಅಧ್ಯಕ್ಷ ದೇವೇಂದ್ರ ಕುಂಬಾರ, ಮುಖ್ಯಾಧಿಕಾರಿ ತೋಳನೂರ, `ಈ ಕೂಡಲೆ ನಲ್ಲಿ ನೀರು ಸರಬರಾಜು ಮಾಡಲಾಗುವುದು~ ಎಂದು ಭರವಸೆ ನೀಡಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.