ಅವ್ಯವಸ್ಥೆ ನಿವಾರಿಸಿ

ಕುಮಾರ ಪಾರ್ಕ್ ಪಶ್ಚಿಮದ ಒಂಬತ್ತನೇ ‘ಎ’ ಅಡ್ಡರಸ್ತೆಯಲ್ಲಿರುವ ಸರ್ಪೆಂಟೈನ್ ರಸ್ತೆಗೆ ಅಡ್ಡವಾಗಿ ಕಸ ತುಂಬಿಕೊಂಡು ಹೋಗುವ ವಾಹನಗಳನ್ನು ನಿಲ್ಲಿಸುತ್ತಾರೆ. ಶೇಷಾದ್ರಿಪುರದಿಂದ ಇಲ್ಲಿಗೆ ಬರಲು ಇರುವ ಮೆಟ್ಟಿಲು ರಸ್ತೆ ಮೂಲಕ ಹೋಗಲು ಸ್ಥಳವೇ ಇಲ್ಲದಂತಾಗಿದೆ.
ಇದು ಸಾಲದು ಎಂಬಂತೆ ಮನೆಯ ಕಸವನ್ನೆಲ್ಲಾ ಇಲ್ಲಿಯೇ ತಂದು ಹಾಕುತ್ತಾರೆ. ಇದರಿಂದಾಗಿ ಇಡೀ ವಾತಾವರಣ ದುರ್ನಾತ ಬೀರುತ್ತಿದ್ದು, ಅಕ್ಕಪಕ್ಕದ ಮನೆಗಳಿಗೆ ಹಾಗೂ ಪಾದಚಾರಿಗಳಿಗೆ ತುಂಬ ತೊಂದರೆಯಾಗುತ್ತಿದೆ.
ಕಸ ಸಾಗಿಸುವ ವಾಹನಗಳು ಇಲ್ಲಿಯೇ ನಿಲ್ಲುವುದರಿಂದ ನಿತ್ಯವೂ ಕೆಟ್ಟ ವಾಸನೆಯ ಯಾತನೆ ಅನುಭವಿಸಬೇಕಾಗಿದೆ. ಜತೆಗೆ ಮಲೇರಿಯಾ ಮುಂತಾದ ರೋಗಗಳು ಹರಡುವ ಸಾಧ್ಯತೆಯೂ ಇದೆ. ಈ ಅವ್ಯವಸ್ಥೆಯನ್ನು ನಿವಾರಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.