ಸೋಮವಾರ, ಮೇ 17, 2021
21 °C

ಅಶೋಕ್ ಖೇಣಿಗೆ ಧರ್ಮ ರತ್ನಾಕರ ಚುಂಚಶ್ರೀ ಪ್ರಶಸ್ತಿಗೆ ಐವರು ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಗಮಂಗಲ: ತಾಲ್ಲೂಕಿನ ಆದಿಚುಂಚಗಿರಿ ಸಂಸ್ಥಾನ ಮಠದ ವಾರ್ಷಿಕ ~ಚುಂಚ ಶ್ರೀ~ ಪ್ರಶಸ್ತಿಗಾಗಿ ಪ್ರಸಕ್ತ ಸಾಲಿಗೆ ವಿವಿಧ ಕ್ಷೇತ್ರಗಳ ಐವರು ಸಾಧಕರನ್ನು ಆಯ್ಕೆ ಮಾಡಿದ್ದು, ಸೆ. 25ರಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.ಪಿ.ಚೌದ್ರಿ ಶಂಕರ್ (ತುಮಕೂರು), ಜಿ.ಎಲ್.ಮುದ್ದೇಗೌಡ (ಹಾಸನ), ಡಾ.ಜೆ.ಪಿ.ಕೃಷ್ಣೇಗೌಡ (ಚಿಕ್ಕಮಗಳೂರು), ಸುಬ್ಬಣ್ಣ (ಬೆಂಗಳೂರು), ಎಂ.ಶ್ರೀನಿವಾಸ್ (ಶಿವಮೊಗ್ಗ) ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಮಠದ ಕಿರಿಯ ಸ್ವಾಮೀಜಿ  ನಿಚ್ಚಲಾನಂದನಾಥ ತಿಳಿಸಿದರು.

 

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೈಸ್  ಸಂಸ್ಥೆಯ  ನಿರ್ದೇಶಕ ಅಶೋಕ್ ಖೇಣಿ ಅವರಿಗೆ ~ಧರ್ಮ ರತ್ನಾಕರ ಪ್ರಶಸ್ತಿ~ ನೀಡಿ ಗೌರವಿಸಲಾಗುತ್ತದೆ. ಶ್ರೀ ಕ್ಷೇತ್ರದಲ್ಲಿ ಸೆ. 23 ರಿಂದ 25ರವರೆಗೆ ನಡೆಯುವ ಮಠದ ಪೀಠಾಧ್ಯಕ್ಷರಾದ  ಬಾಲಗಂಗಾಧರನಾಥ ಸ್ವಾಮೀಜಿ ಅವರ 38ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.