ಶುಕ್ರವಾರ, ಜೂನ್ 18, 2021
24 °C

ಆಂಡ್ರಾಯ್ಡ್‌ನಲ್ಲಿ ಹೈಕೋರ್ಟ್‌ ಪ್ರಕರಣಗಳ ಮಾಹಿತಿ ಲಭ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಕೀಲರು ಮತ್ತು ಸಾರ್ವಜ­ನಿಕರ ಅನು­­ಕೂಲಕ್ಕಾಗಿ ರಾಜ್ಯ ಹೈಕೋರ್ಟ್‌ ಎರಡು ಆಂಡ್ರಾಯ್ಡ್‌ ಅಪ್ಲಿಕೇಷನ್‌ ಅಭಿವೃದ್ಧಿಪಡಿ­ಸಿದೆ. ಎರಡನ್ನೂ ಈಗ ಪ್ರಾಯೋಗಿ­ಕವಾಗಿ ನೀಡಲಾಗಿದೆ.ವಕೀಲರು, ಕಕ್ಷಿದಾರರು ಮತ್ತು ಸಾರ್ವಜ­ನಿಕರು ತಮಗೆ ಆಸಕ್ತಿ ಇರುವ ಪ್ರಕರಣಗಳ ಮಾಹಿತಿ ಪಡೆದು­ಕೊಳ್ಳುವ ಅವಕಾಶವನ್ನು ಮೊದ­ಲನೆಯ ಅಪ್ಲಿ­ಕೇಷನ್‌ ಮೂಲಕ ನೀಡ­ಲಾ­ಗಿದೆ. ಹೈಕೋರ್ಟ್‌ನ ಪ್ರತಿ ಕೊಠಡಿಯಲ್ಲಿ ವಿಚಾರಣೆಗೆ ಬರಲಿರುವ ಪ್ರಕರಣಗಳು, ಆದೇಶ­ಗಳ ಪ್ರಮಾಣೀಕೃತ ಪ್ರತಿ, ಪ್ರಕರಣಗಳ ವಿಚಾರಣೆ ಎಲ್ಲಿಗೆ ಬಂದಿದೆ ಎಂಬ ಮಾಹಿತಿಯನ್ನೂ ಪಡೆದುಕೊಳ್ಳಬಹುದು.ಎರಡನೆಯ ಅಪ್ಲಿಕೇಷನ್‌ ಬಳಸಿ, ಹೈಕೋರ್ಟ್‌ ವೆಬ್‌ಸೈಟ್‌ನ ಯಾವುದೇ ಪುಟಕ್ಕೆ ನೇರವಾಗಿ ಹೋಗಬಹುದು. ಎರಡನೆಯ ಅಪ್ಲಿಕೇಷನ್‌ ತುಸು ಲಘು ಸ್ವರೂಪದ್ದು. ಎರಡೂ ಆಂಡ್ರಾಯ್ಡ್‌ ಅಪ್ಲಿಕೇಷನ್‌ಗಳು ಹೈಕೋರ್ಟ್‌ ವೆಬ್‌­ಸೈಟ್‌ನಲ್ಲಿ (http://karnatakajudiciary.kar.nic.in/) ಲಭ್ಯವಿವೆ.

ಈ ಬಗ್ಗೆ ಯಾವುದೇ ಸಲಹೆ ಅಥವಾ ಸೂಚನೆಗಳನ್ನು shhcourt@nic.in ಇ–ಮೇಲ್‌ ವಿಳಾಸಕ್ಕೆ ಕಳುಹಿಸಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.