ಸೋಮವಾರ, ಏಪ್ರಿಲ್ 12, 2021
29 °C

ಆಂಧ್ರ: ಎರಡು ಸ್ಥಾನ ಗೆದ್ದ ಜಗನ್, ಕಾಂಗ್ರೆಸ್ಸಿಗೆ ಹಿನ್ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್ (ಪಿಟಿಐ): ಪಕ್ಷದ ಮಾಜಿ ಸಂಸತ್ ಸದಸ್ಯ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ಆಂಧ್ರಪ್ರದೇಶ ವಿಧಾನ ಪರಿಷತ್ತಿನ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣೆಗಳಲ್ಲಿ 9 ಸ್ಥಾನಗಳ ಪೈಕಿ ಎರಡು ಸ್ಥಾನಗಳನ್ನು ಗೆದ್ದುಕೊಂಡರು. ಇದರಿಂದಾಗಿ ಆಡಳಿತಾರೂಢ ಕಾಂಗ್ರೆಸ್ ಹಿನ್ನಡೆ ಅನುಭವಿಸಿತು.ಜಗನ್ ಮೋಹನ್ ರೆಡ್ಡಿ ಗುಂಪು ಮೂರನೇ ಸ್ಥಾನವನ್ನೂ ಗೆದ್ದುಕೊಂಡಿತಾದರೂ, ವಿಜೇತ ಅಭ್ಯರ್ಥಿ ಕೇವಲ ಒಂದು ಮತದ ಅಂತರದಲ್ಲಿ ಜಯಗಳಿಸಿದ್ದು ತೀವ್ರ ವಿವಾದಕ್ಕೆ ಕಾರಣವಾಯಿತು.ಪರಿಣಾಮವಾಗಿ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಕಾಂಗ್ರೆಸ್ ನ ವಿಜಯ ಸಾಧ್ಯತೆಯನ್ನು ಜಗನ್ ಅವರು ಪರಿಣಾಮಕಾರಿಯಾಗಿ ಮಸುಕುಗೊಳಿಸಿದ್ದಾರೆ. ಹೀಗಾಗಿ ಮುಖ್ಯ ವಿರೋಧಿ ಪಕ್ಷವಾದ ಟಿಡಿಪಿಗೆ ಅಂತಿಮವಾಗಿ ಮಂದಹಾಸ ಬೀರುವಂತಾಗಿದೆ.ಇದೇನಿದ್ದರೂ ಶ್ರೀ ಪೊಟ್ಟಿ ಶ್ರೀರಾಮುಲು ನೆಲ್ಲೂರು ಜಿಲ್ಲೆಯಲ್ಲಿ ಜಗನ್ ಭಾರಿ ಹೊಡೆತ ಅನುಭವಿಸಿದ್ದಾರೆ. ಅವರ ಗುಂಪಿನ ಅಭ್ಯರ್ಥಿಯನ್ನು ಕಾಂಗ್ರೆಸ್ ಪರಾಭವಗೊಳಿಸಿದೆ.

ಮಾರ್ಚ್ 21ರಂದು ಎಂಟು ಜಿಲ್ಲೆಗಳ ಪೈಕಿ ಒಂಬತ್ತು ಸ್ಥಾನಗಳಿಗೆ ಚುನಾವಣೆಗಳು ನಡೆದಿದ್ದವು. ಅವುಗಳ ಮತ ಎಣಿಕೆಯನ್ನು ಬುಧವಾರ ಮುಂಜಾನೆ ಆರಂಭಿಸಲಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.