ಶುಕ್ರವಾರ, ಜೂನ್ 25, 2021
24 °C

ಆಂಧ್ರ: ಏಕಕಾಲಕ್ಕೆ ಲೋಕಸಭಾ, ವಿಧಾನಸಭಾ ಚುನಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಆಂಧ್ರಪ್ರದೇ ಶದ ಲೋಕಸಭಾ ಹಾಗೂ ವಿಧಾನ ಸಭಾ ಕ್ಷೇತ್ರಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಯಲಿದ್ದು, ಜೂನ್‌ 2ರಂದು  ತೆಲಂ ಗಾಣ ರಾಜ್ಯ ಅಸ್ತಿತ್ವಕ್ಕೆ ಬಂದ ನಂತರ ಸದರಿ ಚುನಾವಣೆ ಯಲ್ಲಿ ಆಯ್ಕೆಯಾಗುವ ಜನಪ್ರತಿನಿಧಿ ಗಳು ಸಹಜವಾಗಿ ಆಯಾ ರಾಜ್ಯಗಳ ಜನ ಪ್ರತಿನಿಧಿಗಳಾಗಿ ಅಧಿಕಾರ ವಹಿಸಿ ಕೊಳ್ಳಲಿದ್ದಾರೆ ಎಂದು ಮುಖ್ಯ ಚುನಾ ವಣಾ ಆಯುಕ್ತ ವಿ.ಎಸ್‌. ಸಂಪತ್‌ ತಿಳಿಸಿದ್ದಾರೆ.ನೂತನ ತೆಲಂಗಾಣ ರಾಜ್ಯ ರಚನೆಯ ದಿನ ಯಾವುದೇ ಆಗಿರಲಿ ಚುನಾವಣಾ ವೇಳಾಪಟ್ಟಿಯಂತೆಯೇ ಲೋಕಸಭಾ ಹಾಗೂ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ ಎಂದು ಅವರು ಸ್ಪಷ್ಟಪಡಿಸಿದರು.ನೂತನ ರಾಜ್ಯ ರಚನೆ ಪ್ರಕ್ರಿಯೆಗಳು ಪೂರ್ಣಗೊಂಡ ನಂತರದಲ್ಲಿ ಆಯಾ ರಾಜ್ಯಗಳಿಗೆ ಅನುಗುಣವಾದ ಲೋಕ ಸಭಾ, ವಿಧಾನಸಭಾ ಕ್ಷೇತ್ರಗಳು ಸೇರಲಿವೆ ಎಂದು ಹೇಳಿದರು.‘ಸದ್ಯ ಯಾವುದೇ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗುವ ಶಾಸಕ ಅಖಂಡ ಆಂಧ್ರಪ್ರದೇಶದ ಭಾಗವಾಗಿ ಇರುತ್ತಾರೆ. ಮುಂದೆ ನೂತನ ರಾಜ್ಯ ಅಸ್ತಿತ್ವಕ್ಕೆ ಬಂದ ಕ್ಷಣದಿಂದ ಅವರು ತೆಲಂಗಾಣ ರಾಜ್ಯ ವಿಧಾನಸಭಾ ಸದಸ್ಯ ರಾಗಲಿದ್ದಾರೆ’ ಎಂದು ವಿವರಿಸಿದರು.ಏಪ್ರಿಲ್‌ 30 ಹಾಗೂ ಮೇ 7ಕ್ಕೆ ಆಂಧ್ರಪ್ರದೇಶ ಚುನಾವಣೆ ನಡೆಯ ಲಿದ್ದು, ತೆಲಂಗಾಣ ಪ್ರದೇಶವು 17 ಮತ್ತು ಸೀಮಾಂಧ್ರ ಪ್ರದೇಶವು 25 ಲೋಕಸಭಾ ಕ್ಷೇತ್ರಗಳನ್ನು ಹೊಂದಿದೆ.ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ನಿರ್ಧಾರ ಪ್ರತಿಭಟಿಸಿ ಆಂಧ್ರ ಮುಖ್ಯ ಮಂತ್ರಿ ಕಿರಣ್‌ ಕುಮಾರ್‌ ರೆಡ್ಡಿ ಅವರು ರಾಜೀನಾಮೆ ನೀಡಿರುವುದರಿಂದ ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.