ಸೋಮವಾರ, ಮೇ 23, 2022
21 °C

ಆಚರಣೆಗೆ ಪಾ.ಪು ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ರಾಜ್ಯ ಸರ್ಕಾರವು ವಿಧಾನಸಭೆಯ ವಜ್ರಮಹೋತ್ಸವ ಆಚರಿಸಿರುವುದಕ್ಕೆ ಹಿರಿಯ ಪತ್ರಕರ್ತ, ನಾಡೋಜ ಪಾಟೀಲ ಪುಟ್ಟಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `1956ರಲ್ಲಿ ಏಕೀಕರಣವಾಗಿದೆ.  ಹೀಗಾಗಿ ವಜ್ರಮಹೋತ್ಸವ ಆಚರಿಸಲು ಇನ್ನೂ ಮೂರು ವರ್ಷಗಳು ಬಾಕಿ ಉಳಿದಿದ್ದವು. ಹೀಗಿದ್ದಾಗ ರಾಜ್ಯ ಸರ್ಕಾರವು ಈ ವರ್ಷವೇ ವಜ್ರಮಹೋತ್ಸವ ಆಚರಿಸಿರುವುದು ಸರಿಯಲ್ಲ~ ಎಂದು ಅಭಿಪ್ರಾಯಪಟ್ಟರು.~1952ರಲ್ಲಿ ರಾಜ್ಯ ನಿರ್ಮಾಣವಾದರೂ ಏಕೀಕರಣವಾದುದು 1956ರಲ್ಲಿ. ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಸೇರಿದಂತೆ ಮೈಸೂರು ಪ್ರಾಂತದ ಹಲವು ಮುಖಂಡರು ಏಕೀಕರಣವನ್ನು ವಿರೋಧಿಸಿದ್ದರು~ ಎಂದು ಅವರು ಸ್ಮರಿಸಿದರು.`ಕೆಲವರು ಎರಡು ಪ್ರತ್ಯೇಕ ರಾಜ್ಯ ಮಾಡುವಂತೆಯೂ ಸಲಹೆ ನೀಡಿದ್ದರು. ಬೆಂಗಳೂರನ್ನು ರಾಜಧಾನಿಯನ್ನಾಗಿ ಮಾಡಿ ಕರ್ನಾಟಕ ಏಕೀಕರಣಗೊಂಡರೂ ಮೈಸೂರು ಪ್ರಾಂತ್ಯದ ಜನರಿಗೆ ಸಮಾಧಾನ ತಂದಿರಲಿಲ್ಲ~ ಎಂದು ಪಾ.ಪು ಮೆಲುಕು ಹಾಕಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.