ಮುಂಬೈ(ಐಎಎನ್ಎಸ್): ದೆಹಲಿ ಮಾಜಿ ಮುಖ್ಯಮಂತ್ರಿ ಹಾಗೂ ಎಎಪಿ ಮುಖಂಡ ಅರವಿಂದ ಕೇಜ್ರಿವಾಲ್, ಲೋಕಸಭಾ ಚುನಾವಣೆ ಪ್ರಚಾರಕ್ಕೆ ವಿನೂತನ ಮಾರ್ಗಗಳನ್ನು ಆರಂಭಿಸಲಿದ್ದಾರೆ.

ಸಾರ್ವಜನಿಕ ಸಾರಿಗೆ ಹಾಗೂ ಆಟೊ ಬಳಸಿ ಕೇಜ್ರಿವಾಲ್ ಬುಧವಾರದಿಂದ ಪ್ರಚಾರ ಆರಂಭಿಸಲಿದ್ದಾರೆ.

ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಮಾಜಿ ಮುಖ್ಯಮಂತ್ರಿ, ಆಟೊ ವೊಂದರಲ್ಲಿ ಅಂಧೇರಿ ರೈಲು ನಿಲ್ದಾಣಕ್ಕೆ ಪ್ರಯಾಣಿಸಲಿದ್ದಾರೆ. ಇಲ್ಲಿಂದ ಚರ್ಚ್ ಗೇಟ್ವರೆಗೆ ರೈಲಿನಲ್ಲಿ ಪ್ರಯಾಣಿಸುವ ಅವರು 40 ನಿಮಿಷ ಪ್ರಯಾಣಿಕರೊಂದಿಗೆ ಸಂವಾದ ನಡೆಸಲಿದ್ದಾರೆ. ಚರ್ಚ್ಗೇಟ್ ನಿಲ್ದಾಣದಲ್ಲಿ ಮುಂಬೈ ದಕ್ಷಿಣ ಲೋಕಸಭಾ ಕ್ಷೇತ್ರದ ಎಎಪಿ ಅಭ್ಯರ್ಥಿ ಮೀರಾ ಸನ್ಯಾಲ್ ಕೇಜ್ರಿ ವಾಲ್ ಅವರನ್ನು ಸ್ವಾಗತಿಸಲಿದ್ದಾರೆ.

ಇಲ್ಲಿ ಪತ್ರಿಕಾಗೋಷ್ಠಿ ನಡೆಸಲಿರುವ ಅವರು, ಕ್ರಾಂತಿ ಮೈದಾನದಿಂದ ಖಿಲಾ ಫತ್ ಹೌಸ್ವರೆಗೆ ಎರಡು ಗಂಟೆ ರೋಡ್ ಶೋ ನಡೆಸಲಿದ್ದಾರೆ.

ಕೇಜ್ರಿವಾಲ್ ಔತಣಕೂಟಕ್ಕೆ 10 ಸಾವಿರ: ಅರವಿಂದ ಕೇಜ್ರಿ ವಾಲ್ ಜತೆ ಇಲ್ಲಿನ ಸಾದಾರ್ನಲ್ಲಿ ರುವ ಐಷಾರಾಮಿ ಹೋಟೆಲ್ನಲ್ಲಿ ಔತಣಕೂಟ ದಲ್ಲಿ ಭಾಗವಹಿಸಬೇಕೇ? ಹಾಗಾದರೆ ಇದಕ್ಕೆ ಪ್ರತಿಯೊಬ್ಬರೂ ₨10,000 ನೀಡಬೇಕು. ಆಮ್ ಆದ್ಮಿ ಪಕ್ಷ ದೇಣಿಗೆ ಸಂಗ್ರಹಕ್ಕಾಗಿ ಈ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ.

ಪಕ್ಷದ ಈ ತಂತ್ರಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಿರುವ ವಕ್ತಾರ ಪ್ರಜಾಕ್ತು ಅತುಲ್ , ಸುಮಾರು 150 ರಿಂದ 200 ಜನ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಅಂದ ಹಾಗೆ , ಇದೇ 15 ರಂದು ಕೇಜ್ರಿವಾಲ್ ಬೆಂಗಳೂರಿನಲ್ಲಿ ಆಯೋಜಿಸಿರುವ ಔತಣಕೂಟಕ್ಕೆ ₨20 ಸಾವಿರ ನಿಗದಿಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.