ಬೆಂಗಳೂರು: ಆಟೊ ಎಲ್ಪಿಜಿ ದರದಲ್ಲಿ ಏರಿಕೆ ಮಾಡಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಕಾರ್ಯಕರ್ತರು ನಗರದ ಕೆಂಪೇಗೌಡ ಬಸ್ ನಿಲ್ದಾಣದ ಬಳಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಮಾತನಾಡಿ `ಆಟೊ ಎಲ್ಪಿಜಿ ದರದಲ್ಲಿ ಏರಿಕೆ ಮಾಡಿ ಇನ್ನೂ ಒಂದು ತಿಂಗಳಾಗಿಲ್ಲ. ಈಗ ಮತ್ತೊಮ್ಮೆ ಏರಿಕೆ ಮಾಡಿರುವ ಸರ್ಕಾರದ ಕ್ರಮ ಸರಿಯಲ್ಲ. ಆಟೊ ಚಾಲಕರು ಹಾಗೂ ಮಾಲೀಕ ರೊಂದಿಗೆ ಸಮಾಲೋಚಿಸಿ ವ್ಯವಸ್ಥಿತ ವಾದ ನಿರ್ಧಾರ ತೆಗೆದು ಕೊಳ್ಳು ವುದನ್ನು ಬಿಟ್ಟು, ರಾತ್ರೋ ರಾತ್ರಿ ದರ ಏರಿಕೆ ಮಾಡಿರುವುದು ಸರ್ಕಾರದ ಪ್ರಾಮಾಣಿಕ ಚಿಂತನೆಯಲ್ಲ~ ಎಂದು ಹೇಳಿದರು.

`ಸರ್ಕಾರ ಏಕಾಏಕಿ ಆಟೊ ಎಲ್ಪಿಜಿ ದರ ವನ್ನು ಲೀಟರ್ಗೆ 6.80 ರೂ ಏರಿಕೆ ಮಾಡಿರುವುದರಿಂದ ಆ ಹೊರೆಯನ್ನು ಪ್ರಯಾಣಿಕರ ಮೇಲೂ ಹೊರಿಸಲು ಸಾಧ್ಯವಿಲ್ಲ~ ಎಂದರು.`ಈಗಾಗಲೇ ಆಟೊ ಪ್ರಯಾಣ ದರವನ್ನು ಕನಿಷ್ಠ 20 ರೂಪಾಯಿಗೆ ಏರಿಸಿರುವುದರಿಂದ ಪ್ರಯಾಣಿಕರ ಶಾಪಕ್ಕೆ ಚಾಲಕರು ಗುರಿಯಾಗಿದ್ದಾರೆ~ ಎಂದು ಕಿಡಿಕಾರಿದರು.

`ನಗರದಲ್ಲಿ ಮೆಟ್ರೊ ಕಾಮಗಾರಿ ನಡೆಯುತ್ತಿರುವುದರಿಂದ ಆಟೊ ಚಾಲಕರ ಆದಾಯಕ್ಕೂ ಹೊಡೆತ ಬಿದ್ದಿದೆ. ಆಟೊ ರಿಪೇರಿ ಖರ್ಚು ಸೇರಿದಂತೆ ಉಳಿದ ಹಣದಲ್ಲಿ ಅವರ ಜೀವನ ನಿರ್ವಹಣೆ ಕಷ್ಟ. ಆದ್ದರಿಂದ ಆಟೊ ಎಲ್ಪಿಜಿ ದರದಲ್ಲಿ ಏರಿಕೆ ಮಾಡಿರುವ ನೀತಿ ಯನ್ನು ಸರ್ಕಾರ ಕೂಡಲೇ ಹಿಂಪಡೆ ಯಬೇಕು ಎಂದು ಒತ್ತಾಯಿಸಿ ಪಕ್ಷದ ಕಾರ್ಯಕರ್ತರು ಆಟೊಗೆ ಹಗ್ಗ ಕಟ್ಟಿ ಎಳೆಯುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.