ಬೆಳಗಾವಿ: `97ನೇ ಸಂವಿಧಾನ ತಿದ್ದುಪಡಿ ಹಿನ್ನೆಲೆಯಲ್ಲಿ ಸಹಕಾರ ಸಂಘಗಳ ಆಡಳಿತ ಮಂಡಳಿಯಲ್ಲಿ ಮೀಸಲಾತಿ ನಿಗದಿಗೊಳಿಸಿರುವುದನ್ನು ಕೈಬಿಡಬೇಕು' ಎಂದು ಕರ್ನಾಟಕ ರಾಜ್ಯ ಪತ್ತಿನ ಸಹಕಾರ ಸೊಸೈಟಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಗುರುನಾಥ ಜ್ಯಾಂತೀಕರ ಒತ್ತಾಯಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ದೇಶದಲ್ಲಿ ಸಹಕಾರ ಚಳವಳಿಯನ್ನು ಮುಕ್ತವಾಗಿ ನಡೆಸುವ ಸಲುವಾಗಿ ಕೇಂದ್ರ ಸರ್ಕಾರವು ಸಂವಿಧಾನಕ್ಕೆ 97ನೇ ತಿದ್ದುಪಡಿಯನ್ನು ತಂದಿದೆ.

ಇದರಿಂದಾಗಿ ಸಂವಿಧಾನದಲ್ಲಿ ಸಹಕಾರ ಕ್ಷೇತ್ರಕ್ಕೆ ಸ್ಥಾನಮಾನ ದೊರೆತಿದೆ. ಆದರೆ, ಈ ತಿದ್ದುಪಡಿಯ ಬಳಿಕ ಆಡಳಿತ ಮಂಡಳಿಯ ಆಯ್ಕೆಯಲ್ಲಿ ಮೀಸಲಾತಿ ನಿಗದಿಗೊಳಿಸುವ ಮೂಲಕ ಮೂಲ ಆಶಯಕ್ಕೆ ಧಕ್ಕೆ ತರಲಾಗಿದೆ' ಎಂದು ಅಭಿಪ್ರಾಯಪಟ್ಟರು.

`ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರಡಿ ನೋಂದಾಯಿತ ಸಹಕಾರ ಸಂಘಗಳಲ್ಲಿ ಇಬ್ಬರು ಮಹಿಳೆಯರು ಇಬ್ಬರು, ಪರಿಶಿಷ್ಟ ಜಾತಿ- ಪಂಗಡದವರು ಒಬ್ಬರು ಹಾಗೂ ಹಿಂದುಳಿದ ವರ್ಗದ ಒಬ್ಬ ಸದಸ್ಯರನ್ನು ಆಡಳಿತ ಮಂಡಳಿಗೆ ಆಯ್ಕೆ ಮಾಡಬೇಕು.

ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮ 1997ರಡಿ ನೋಂದಾಯಿತಿ ಸಂಘಗಳಲ್ಲಿ ಇಬ್ಬರು ಮಹಿಳೆಯರು, ಒಬ್ಬ ಪರಿಶಿಷ್ಟ ಜಾತಿ ಅಥವಾ ಪಂಗಡದವರು ಹಾಗೂ ಇಬ್ಬರು ಹಿಂದುಳಿದವರನ್ನು ಆಡಳಿತ ಮಂಡಳಿಗೆ ನೇಮಿಸಿಕೊಳ್ಳಬೇಕು. ಸರ್ಕಾರದಿಂದ ಯಾವುದೇ ರೀತಿಯ ಅನುದಾನ ಪಡೆಯದೇ ಉತ್ತರ ರೀತಿಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಂಘಗಳ ಮೇಲೆ ಹೀಗೆ ಮೀಸಲಾತಿ ಹೇರುವುದರಿಂದ ಸಂಘಕ್ಕೆ ಧಕ್ಕೆ ಬರಲಿದೆ' ಎಂದು ಜ್ಯಾಂತೀಕರ ಅಭಿಪ್ರಾಯಪಟ್ಟರು.

`ಈ ಹಿಂದೆ ಸಂಘಗಳ ಲೆಕ್ಕಪತ್ರ ತಪಾಸಣೆಗೆ ಖಾಸಗಿಯಾಗಿ ಲೆಕ್ಕಪರಿಶೋಧಕರನ್ನು ನೇಮಿಸಿಕೊಳ್ಳಲಾಗುತ್ತಿತ್ತು. ಆದರೆ, ಈಗ ಸರ್ಕಾರವು ಮೂರು ಲೆಕ್ಕ ಪರಿಶೋಧಕರ ಪ್ಯಾನಲ್ ಮಾಡಿ, ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ನಿಯಮ ರೂಪಿಸಿದೆ.

ಇದರಿಂದ ಲೆಕ್ಕ ಪರಿಶೋಧಕರು ಸಹಕಾರ ಸಂಘಗಳಿಂದ ಹೆಚ್ಚಿನ ಹಣ ಸುಲಿಗೆ ಮಾಡುವ ಸಾಧ್ಯತೆಗಳಿಗೆ. ಹೀಗಾಗಿ ಎಲ್ಲ ಲೆಕ್ಕಪರಿಶೋಧಕರನ್ನು ಸೇರಿಸಿ ಒಂದೇ ಪ್ಯಾನಲ್ ಮಾಡಬೇಕು. ಯಾವ ಲೆಕ್ಕಪರಿಶೋಧಕರನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ಸಂಘದ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸುವ ಅಧಿಕಾರ ನೀಡಬೇಕು' ಎಂದು ಆಗ್ರಹಿಸಿದರು.

`ಯಾರು ಬೇಕಾದರೂ ಸಹಕಾರ ಸಂಘಗಳನ್ನು ನೋಂದಣಿ ಮಾಡಿಕೊಳ್ಳುವ ಹಕ್ಕನ್ನು ನೀಡಲಾಗಿದೆ. ಹೀಗಾಗಿ ಇನ್ನು ಮೇಲೆ ಸಹಕಾರ ಸಂಘಗಳನ್ನು ರಚಿಸಿಕೊಳ್ಳಲು ಮುಂದೆ ಬರುವವರ ಮನವಿಯನ್ನು ನಿಬಂಧಕರು ತಿರಸ್ಕರಿಸುವಂತಿಲ್ಲ. ಸಂವಿಧಾನದ ತಿದ್ದುಪಡಿಯ ಉದ್ದೇಶ ಉತ್ತಮವಾಗಿದೆ. ಆದರೆ, ಅನುಷ್ಠಾನ ಹಂತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರವು ಇಂಥ ನಿಯಮಗಳನ್ನು ಹೇರುವ ಮೂಲಕ ಪುನಃ ನಿಯಂತ್ರಿಸಲು ಯತ್ನಿಸುತ್ತಿರುವುದು ವಿಷಾದಕರ ಸಂಗತಿ' ಎಂದು ಹೇಳಿದರು.

`ಈ ಹಿಂದೆ ಸಹಕಾರ ಸಂಘಗಳ ಆಡಳಿತ ಮಂಡಳಿಯ ಅವಧಿಯು ಎರಡೂವರೆ ವರ್ಷವಿತ್ತು. ಈಗ 5 ವರ್ಷಕ್ಕೆ ವಿಸ್ತರಿಸಲಾಗಿದೆ. ಮೊದಲು ಸಹಕಾರಿ ಇಲಾಖೆಯೇ ಚುನಾವಣೆ ನಡೆಸುತ್ತಿತ್ತು. ಈಗ ಇದಕ್ಕಾಗಿಯೇ ಪ್ರತ್ಯೇಕವಾಗಿ ಸಹಕಾರ ಚುನಾವಣೆ ಆಯೋಗವನ್ನು ರಚಿಸಲಾಗಿದೆ' ಎಂದು ವಿವರಿಸಿದರು.

`ಮೊದಲೆಲ್ಲ 2- 3 ವರ್ಷಗಳಿಗೆ ಲೆಕ್ಕ ಪರಿಶೋಧನೆ ನಡೆಯುತ್ತಿತ್ತು. ಈಗ ಕಡ್ಡಾಯವಾಗಿ ಅದೇ ವರ್ಷ ನಡೆಯಬೇಕು. ಸೆಪ್ಟೆಂಬರ್ 25ರೊಳಗೆ ಸಾಮಾನ್ಯ ಸಭೆ ನಡೆಸಬೇಕು. ಸೆ. 30ರೊಳಗೆ ಸಾಮಾನ್ಯ ಸಭೆಯ ವರದಿಯನ್ನು ಸಹಕಾರ ನಿಬಂಧಕರಿಗೆ ಸಲ್ಲಿಸಬೇಕು. ಈ ನಿಯಮ ಉಲ್ಲಂಘಿಸಿದ ಆಡಳಿತ ಮಂಡಳಿಯನ್ನು ಅಮಾನತಿನಲ್ಲಿ ಇಡುವ ಅಧಿಕಾರ ನೀಡಲಾಗಿದೆ' ಎಂದು ತಿಳಿಸಿದರು.

`ರಾಜ್ಯದಲ್ಲಿ ಸುಮಾರು 35 ಸಾವಿರ ಸಹಕಾರ ಸಂಘಗಳಿದ್ದು, 30 ಲಕ್ಷ ಸದಸ್ಯರಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲೇ 8 ಸಾವಿರಕ್ಕೂ ಹೆಚ್ಚು ಸಹಕಾರ ಸಂಘಗಳಿವೆ. ಭಾರತೀಯ ರಿಸರ್ವ್ ಬ್ಯಾಂಕ್ ವರದಿ ಪ್ರಕಾರ ಸಹಕಾರ ಸಂಘಗಳಿಗಿಂತಲೂ ಖಾಸಗಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಅವ್ಯವಹಾರ ನಡೆಯುತ್ತಿವೆ. ಸಹಕಾರ ಸಂಘಗಳಲ್ಲಿ ಸ್ಥಳೀಯ ಸದಸ್ಯರು ಪ್ರಾತಿನಿಧ್ಯ ವಹಿಸುವುದರಿಂದ ಶೇ. 75ರಷ್ಟು ಸಹಕಾರ ಸಂಘಗಳು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ' ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಕರ್ನಾಟಕ ರಾಜ್ಯ ಪತ್ತಿನ ಸಹಕಾರ ಸೊಸೈಟಿಗಳ ಸಂಘದ ಅಧ್ಯಕ್ಷ ರಾವ್ಸಾಹೇಬ್ ಪಾಟೀಲ, ನಿರ್ದೇಶಕ ಶ್ರೀಕಾಂತ ಹತ್ತನೂರೆ, ನಿರ್ದೇಶಕ ಅನಂತ ಕುಲಕರ್ಣಿ, ದುರ್ಗಾಪ್ರಸಾದ ನಾಯಕ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.