ಗುರುವಾರ , ಮೇ 13, 2021
34 °C

ಆತ್ಮಸ್ಥೈರ್ಯ ಬೇಕು-ಕಂಬಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಜಾಗತಿಕ ಬದಲಾವಣೆಗಳು ಯುವಜನರಲ್ಲಿ ಬದಲಾವಣೆ ತಂದಿವೆ. ಆದರೆ ಮಾನವೀಯ ಮೌಲ್ಯಗಳು ಹಾಗೂ ಸಂಬಂಧಗಳಲ್ಲಿ ಅವಶ್ಯಕ ಬದಲಾವಣೆ ಆಗಿಲ್ಲ~ ಎಂದು ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟರು.ನಗರದ ನಿಸರ್ಗ ಬಡಾವಣೆಯ ವೀಯೆಲ್ಲೆನ್ ಪ್ರಬುದ್ಧಾಲಯದಲ್ಲಿ ಶುಕ್ರವಾರ ನಡೆದ ನಾಲ್ಕನೇ ವಾರ್ಷಿಕೋತ್ಸವ ಹಾಗೂ ಪ್ರಬುದ್ಧವಾಣಿಯ ಐದನೇ ಸಂಚಿಕೆಯ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.`ವಯೋಧರ್ಮಕ್ಕನುಗುಣವಾಗಿ ದುಗುಡ, ದುಮ್ಮಾನ, ಭಯ ಕಾಡುತ್ತವೆ. ಯಾವುದೇ ದೂರವಾಣಿ ಕರೆ ಆತಂಕದತ್ತ ಸೆಳೆಯುವ ಸ್ಥಿತಿ ಇದ್ದರೂ ಮಾನಸಿಕವಾಗಿ ಎಲ್ಲವನ್ನು ಮೆಟ್ಟಿ ನಿಲ್ಲುವ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು~ ಎಂದು ಅವರು  ಕಿವಿಮಾತು ಹೇಳಿದರು. ವಕೀಲ ರವಿ ಬಿ. ನಾಯಕ್ ಅಧ್ಯಕ್ಷತೆ ವಹಿಸಿ, `ಆಧುನಿಕ ಕಾಲಘಟ್ಟದಲ್ಲಿ ಪ್ರಬುದ್ಧಾಲಯದಂತಹ ಹಿರಿಯರ ಕಲ್ಯಾಣ ಕೇಂದ್ರಗಳು ಅಗತ್ಯ~ ಎಂದರು.ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ವಿಶ್ರಾಂತ ಕುಲಪತಿ ಪ್ರೊ. ಎಂ.ಆರ್. ಗಜೇಂದ್ರಗಡ್,ನಿರ್ಮಾಣ್ ಸಂಸ್ಥೆಯ ಸಂಸ್ಥಾಪಕ ವಿ.ಲಕ್ಷ್ಮಿನಾರಾಯಣ್, ಪ್ರಬುದ್ಧಾಲಯದ ಹಿರಿಯ ಪ್ರಬಂಧಕಿ ಸುಷ್ಮಾಮೂರ್ತಿ ಉಪಸ್ಥಿತರಿದ್ದರು.ಸಾಹಿತಿ ಡಾ. ಚಂದ್ರಶೇಖರ ಕಂಬಾರ ಹಾಗೂ ಪತ್ನಿ ಸತ್ಯಭಾಮಾ ಅವರನ್ನು ಸನ್ಮಾನಿಸಲಾಯಿತು. ಗಾಯಕ ಉಪಾಸನಾ ಮೋಹನ್ ಮತ್ತು ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.