ಭಾನುವಾರ, ಜನವರಿ 26, 2020
22 °C
ಪಂಚರಂಗಿ

ಆಯೇಷಾಗೆ ಪುತ್ರೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಯೇಷಾಗೆ ಪುತ್ರೋತ್ಸವ

ಮುದ್ದು ಮೊಗದ ಆಯೇಷಾ ಟಾಕಿಯಾ ಮದುವೆ ನಂತರ ಪರದೆಯಿಂದ ಮರೆಯಾಗಿದ್ದರು. ಹೋಟೆಲ್‌ ಉದ್ಯಮಿ ಫರ್ಹಾನ್‌ಆಜ್ಮಿ ಅವರೊಂದಿಗಿನ ಕೆಲ ವರ್ಷಗಳ ದಾಂಪತ್ಯದ ನಂತರ ಇದೀಗ ಇವರಿಬ್ಬರಿಗೂ ಒಂದು ಮುದ್ದಾದ ಗಂಡು ಮಗು ಜನಿಸಿದ ಸುದ್ದಿ ಹೊರ ಬಿದ್ದಿದೆ.



ಆಯೇಷಾ ಪತಿ ಆಜ್ಮಿ ಟ್ವಿಟ್ಟರ್‌ನಲ್ಲಿ ‘ಅಲ್ಲಾಹು ಅಕ್ಬರ್‌ ಅಲ್ಲಾಹು ಅಕ್ಬರ್‌ ಇಟ್ಸ್‌ ಎ ಬಾಯ್‌’ ಎಂದು ಟ್ವೀಟಿಸುವ ಮೂಲಕ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.



2009ರಲ್ಲಿ ಮದುವೆಯಾದ ನಂತರ ಚಿತ್ರರಂಗದಿಂದ ದೂರವೇ ಉಳಿದಿದ್ದ ಆಯೇಷಾ ಕೆಲ ತಿಂಗಳ ಹಿಂದೆ ‘ಸುರ್‌ ಕ್ಷೇತ್ರ’ ಎಂಬ ರಿಯಾಲಿಟಿ ಶೊ ಮೂಲಕ ಮತ್ತೆ ಪರದೆಯ ಮೇಲೆ ಕಾಣಿಸಿಕೊಂಡಿದ್ದರು.



2004ರಲ್ಲಿ ‘ಟಾರ್ಜನ್‌’ ಎಂಬ ಸಿನಿಮಾದಲ್ಲಿ ನಟಿಸಿ ಪಡ್ಡೆ ಹೈಕಳ ಮನ ಗೆದ್ದಿದ್ದ ಆಯೇಷಾ ಮುಂದೆ ‘ವಾಂಟೆಡ್‌’, ‘ಡೋರ್’, ‘ನೋ ಸ್ಮೋಕಿಂಗ್’ ಮುಂತಾದ ಚಿತ್ರಗಳ ಮೂಲಕ ಗಮನ ಸೆಳೆದಿದ್ದರು.

ಪ್ರತಿಕ್ರಿಯಿಸಿ (+)